ದಿನದ ಅಪರಾಧಗಳ ಪಕ್ಷಿನೋಟ 14ನೇ ಜುಲೈ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 13.07.2016 ರಂದು ಸಂಜೆ 05.00 ಗಂಟೆಯಿಂದ ದಿನಾಂಕ 14.07.2016 ಬೆಳಿಗ್ಗೆ  10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ : 01

ಆಂಡ್ರಸನ್‌‌ಪೇಟೆ ಪೊಲೀಸ‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 13.07.2016 ರಂದು ದೂರುದಾರರಾದ ಶ್ರೀ. ಗೋವಿಂದಪ್ಪ ಬಿನ್‌  ವೆಂಕಟಪ್ಪ, ಚಿಂಚಾಂಡ್ಲಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ:12.07.2016 ರಂದು ರಾತ್ರಿ 9:00 ಗಂಟೆಗೆ ದೂರುದಾರರ ಮಗಳಾದ ಆಶಾ ಎಂಬುವರು ನೀರು ಹಿಡಿಯುತ್ತಿರುವಾಗ  ಅದೇ ಗ್ರಾಮದ ವೆಂಕಟಾಚಲಪತಿರವರು ಗಲಾಟೆ ಮಾಡಿ ಹೂಡೆದಿರುತ್ತಾರೆಂದು ತಂದೆ ಗೋವಿಂದಪ್ಪ ರವರಿಗೆ ತಿಳಿಸಿದ್ದು. ಆಗ ದೂರುದಾರರು  ಆರೋಪಿ ವೆಂಕಟಾಚಲಪತಿ ರವರ  ಮನೆಯ ಬಳಿ ಹೋಗಿ ಏಕೆ ತನ್ನ ಮಗಳನ್ನು ಹೊಡೆದಿದ್ದಿಯಾ ಎಂದು ಕೇಳಿದಾಗ ಆರೋಪಿ ದೂರುದಾರರಿಗೆ ಕೆಟ್ಟ ಮಾತುಗಳಿಂದ ಬೈದು, ತಲೆಯ ಮೇಲೆ ಹೂಡೆದು ರಕ್ತಗಾಯ ಪಡಿಸಿರುತ್ತಾರೆ.

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 13.07.2016ರಂದು ದೂರುದಾರರಾದ ಶ್ರೀ. ಶ್ರೀನಿವಾಸ ಬಿನ್‌ ನಾರಾಯಣಪ್ಪ, ಬೊಮ್ಮನಹಳ್ಳಿ ಗ್ರಾಮ, ಶಾಂತಿಪುರಂ ಮಂಡಲ್‌ ರವರು ನೀಡಿದ ದೂರಿನಲ್ಲಿ. ದಿನಾಂಕ: 11.07.2016 ರಂದು ಬೆಳಗ್ಗೆ ಸುಮಾರು 09.00 ಗಂಟೆಗೆ ಬೊಮ್ಮನಹಳ್ಳಿ ಗ್ರಾಮದಿಂದ-ಬೇತಮಂಗಲಕ್ಕೆ ಹಿರೋ ಹೋಂಡಾ ದ್ವಿ ಚಕ್ರ ವಾಹನ ಸಂಖ್ಯೆ. ಕೆಎ-07-ಕೆ-4430 ವಾಹನದಲ್ಲಿ ಕ್ಯಾಸಂಬಳ್ಳ ಹೋಬಳಿಯ ಬಳುವನಹಳ್ಳಿ ಹಾಗೂ ನಾಗಲಹಳ್ಳಿ ಮಧ್ಯೆ ಬರುತ್ತಿದ್ದಾಗ, ಕಳ್ಳಿಕುಪ್ಪ ಗ್ರಾಮದ ಕೆ.ಆರ್. ಶಿವಣ್ಣ ಬಿನ್ ರಾಮಪ್ಪ ಎಂಬುವರು ಹಿರೋ ಹೋಂಡಾ ನಂ. ಕೆಎ-05-ಹೆಚ್.ಡಿ-2167 ರಲ್ಲಿ ವೇಗದಿಂದ ಬಂದು ದೂರುದಾರರಾದ ಶ್ರೀನಿವಾಸ ರವರು ಓಡಿಸುತ್ತಿದ್ದ, ವಾಹನಕ್ಕೆ  ಆರೋಪಿ ಶಿವಣ್ಣ ರವರು ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರ ಗಾಡಿಯ ಹಿಂಬದಿಯಲ್ಲಿ ಕುಳಿತ್ತಿದ್ದ ಮುನಿರತ್ನಂ ರವರಿಗೆ ರಕ್ತ ಗಾಯಗಳಾಗಿರುತ್ತದೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s