ದಿನದ ಅಪರಾಧಗಳ ಪಕ್ಷಿನೋಟ 10ನೇ ಜುಲೈ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 10.07.2016 ರಂದು  ಬೆಳಿಗ್ಗೆ  10.00 ಗಂಟೆಯಿಂದ ದಿನಾಂಕ 10.07.2016 ರಂದು ಸಂಜೆ 05.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಈ ಘಟನೆಯು ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆ ಸರಹದ್ದು, ಪಾರಂಡಹಳ್ಳಿಯಲ್ಲಿ ನಡೆದಿರುತ್ತದೆ.  ದಿನಾಂಕ: 10/07/2016 ರಂದು ಬೆಳಿಗ್ಗೆ ಸುಮಾರು 10.00 ಗಂಟೆಯ ಸಮಯದಲ್ಲಿ ದೂರುದಾರರಾದ ಶ್ರೀಮತಿ ತಿಲಗರಾಣಿ (45) ಕೋಂ ಪಳನಿ, 2ನೇ ಬ್ಲಾಕ್, ಗಂಗಮ್ಮನಪಾಳ್ಯ, ಪಾರಂಡಹಳ್ಳಿ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್. ಇವರು  ಪಾರಾಂಡಹಳ್ಳಿಯಲ್ಲಿರುವ ತನ್ನ ವಾಸದ ಮನೆಯಲ್ಲಿದ್ದಾಗ, ತನ್ನ ತಂಗಿಯ ಗಂಡನಾದ ಪ್ರಭು @ ಪ್ರಭುರಾಜ್ (35), ಎಸ್.ಟಿ.ಬ್ಲಾಕ್, ಉರಿಗಾಂ, ಕೆ.ಜಿ.ಎಫ್. ಇವರು ಮನೆಯ ಬಳಿಗೆ ಬಂದು, ದೂರುದಾರರ ತಂಗಿ ಲಕ್ಷ್ಮೀ ರವರನ್ನು ಮನೆಗೆ ಬರುವಂತೆ ಕರೆದಿದ್ದು, ಆಗ ಲಕ್ಷ್ಮಿಯು, ತನಗೆ ಮೈಯಲ್ಲಿ ಹುಷಾರಿಲ್ಲ ಸ್ವಲ್ಪ ದಿನ ಇಲ್ಲಿಯೇ ಇದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬರುತ್ತೇನೆಂತ ಹೇಳಿದ್ದು, ಆಗ ದೂರುದಾರಳು ಪ್ರಭುರಾಜ್ ರವರಿಗೆ ಇಲ್ಲಿಯೇ ಸ್ವಲ್ಪ ದಿನ ಇರಲಿ ಎಂತ ಹೇಳುತ್ತಿದ್ದಂತೆ ಪ್ರಭುರಾಜ್  ರವರು ದೂರುದಾರರನ್ನು ಕುರಿತು “ಎಲ್ಲಾ ನಿನ್ನಿಂದಲೇ ಈ ರೀತಿ ಆಗುವುದು ಸೂಳೆ ಮುಂಡೆ” ಎಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಆತನ ಕಾಲಿನಿಂದ ಒದ್ದು, ಕೂದಲನ್ನು ಹಿಡಿದು ಕೈಯಿಂದ ಕೆನ್ನೆಯ ಮೇಲೆ ಹೊಡೆದು, ತನ್ನ ಸೀರೆಯನ್ನು ಎಳೆದಾಡಿ ತನಗೆ ಮಾನಭಂಗವನ್ನುಂಟು ಮಾಡಿ, ತನ್ನನ್ನು ಮತ್ತು ತನ್ನ ತಂಗಿ ಲಕ್ಷ್ಮಿಯನ್ನು ಸಾಯಿಸದೆ ಬಿಡುವುದಿಲ್ಲವೆಂತ ಪ್ರಾಣ ಬೆದರಿಕೆ ಹಾಕಿರುತ್ತಾನೆ.

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s