ದಿನದ ಅಪರಾಧಗಳ ಪಕ್ಷಿನೋಟ 09ನೇ ಜುಲೈ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 09.07.2016 ರಂದು  ಬೆಳಿಗ್ಗೆ  10.00 ಗಂಟೆಯಿಂದ ದಿನಾಂಕ 09.07.2016 ರಂದು ಸಂಜೆ 05.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ : 01

ರಾಬರ್ಟ್‌ಸನ್‌ಪೇಟೆ ಪೊಲೀಸ್‌‌ ಠಾಣೆಯಲ್ಲಿ ಮೋಸಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು HDFC BANK, OLD MADRAS ROAD,, NO 7/3, OPP RMZ INFINITY, Bengaluru ನಲ್ಲಿ   ನಡೆದಿರುತ್ತದೆ. ದೂರುದಾರರಾದ  ಶ್ರೀ. ವಿಲಿಯಂ ರಿಚ್ಡರ್ಸ್‌ ಬಿನ್‌ ಗಂಭೀರಂ, ಪೈಪ್‌ಲೈನ್‌, ರಾಬರ್ಟಸನ್‌ಪೇಟೆ, ಕೆ.ಜಿ.ಎಫ್‌ ರವರು    ಬೆಂಗಳೂರಿನ  ಹಳೇ ಮದ್ರಾಸ್  ರಸ್ತೆಯಲ್ಲಿರುವ  ಹೆಚ್.ಡಿ.ಎಫ್.ಸಿ ಬ್ಯಾಂಕಿನಲ್ಲಿ  ಖಾತೆ ಸಂಖ್ಯೆ 20471000004044 ರಂತೆ ಖಾತೆ ತೆರೆದು ಸದರಿ ಖಾತೆಯಲ್ಲಿ 10,000/-ರೂಗಳನ್ನು ಜಮಾ ಮಾಡಿದ್ದು, ನಂತರ  MANAGER, ,JUST DIAL LTD,,NO 29, CUNNINGHAM ROAD Bengaluru city,  ರವರಿಗೆ ದಿನಾಂಕ 04.02.2014 ರಂದು ಚೆಕ್ ನಂ 024310 ರಲ್ಲಿ 1,953/-ರೂಗಳನ್ನು ಪಡೆದುಕೊಳ್ಳುವಂತೆ  ನೀಡಿದ್ದು, ನಂತರ ಬ್ಯಾಂಕಿನ KAVITHA P B,SENIOR MARKETING MANAGER  ಮತ್ತು  MANAGER, HDFC BANK  ರವರ ಸಹಾಯವನ್ನು ಪಡೆದು ಹಂತ ಹಂತವಾಗಿ ಖಾತೆಯಲ್ಲಿದ್ದ ಪೂರ್ತಿ ಹಣವನ್ನು ಡ್ರಾ ಮಾಡಿದ್ದು, ದಿನಾಂಕ 07.05.2014 ರಂದು ದೂರುದಾರರು ತನ್ನ ಖಾತೆಯಲ್ಲಿದ್ದ ಉಳಿದ ಹಣವನ್ನು ಪರಿಶೀಲನೆ ಮಾಡಿದಾಗ ರೂ 64.95 ಪೈಸೆ ಇರುವುದನ್ನು ತಿಳಿದು  ಬ್ಯಾಂಕಿನ ಎಕ್ಟ್ರಾಕ್ಟ್ ಕೊಡುವಂತೆ ಕೇಳಲಾಗಿ  ಬ್ಯಾಂಕಿನಲ್ಲಿ ಯಾವುದೇ ಮಾಹಿತಿಯನ್ನು ನೀಡದೆ  ನಿರಾಕರಿಸಿ, ರಸೀದಿಯನ್ನು  ಕೊಡದೇ ಸುಳ್ಳು ಸೃಷ್ಟನೆಯ ಚೆಕ್ ಗಳನ್ನು ಸೃಷ್ಟಿಸಿ,  ಖಾತೆಯಿಂದ ಹಣವನ್ನು ಡ್ರಾ ಮಾಡಿ ಮೋಸ ಮಾಡಿರುತ್ತಾರೆ.

-ಹಲ್ಲೆ : 01

ಕಾಮಸಮುದ್ರಂ ಪೊಲೀಸ್‌‌ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬತ್ತ ಲಾಯೂರು ಗ್ರಾಮದಲ್ಲಿ ನಡೆದಿರುತ್ತದೆ.  ದಿನಾಂಕ 08.07.2016 ರಂದು ಸಂಜೆ ಸುಮಾರು 5.30 ಗಂಟೆಯಲ್ಲಿ ಇದೇ  ಗ್ರಾಮದ ವಾಸಿ, ದೂರುದಾರರಾದ  ಶ್ರೀ. ಗೋವಿಂದಪ್ಪ ಬಿನ್‌ ವೆಂಕಟಸ್ವಾಮಿ ಎಂಬುವರು  ತಮ್ಮ ಹಸುಗಳನ್ನು ಹಿಡಿದುಕೊಂಡು ಬತ್ತಲಾಯೂರು ಗ್ರಾಮದ ವೀರಭದ್ರಪ್ಪ ರವರ ಜಮೀನಿನ ಬಳಿ ಬರುತ್ತಿದ್ದಾಗ, ಒಂದು ಹಸು ವೀರಭದ್ರಪ್ಪ ರವರ ಹೊಲದಲ್ಲಿ ಮೇಯಲು ಹೋಗಿದ್ದು, ಅಷ್ಟರಲ್ಲಿ ವೀರಭದ್ರಪ್ಪ, ಈತನ ಹೆಂಡತಿಯಾದ ಸಾಕಮ್ಮ & ಮಗನಾದ ವೆಂಕಟೇಶ್ ರವರು ಹೋಗಿ ಏಕಾಏಕಿ  ದೂರುದಾರರೊಂದಿಗೆ ಜಗಳ ಕಾದು, ಅಡ್ಡಗಟ್ಟಿ  ದೊಣ್ಣೆಯಿಂದ ಹೊಡದು                 ರಕ್ತಗಾಯವನ್ನುಂಟು ಮಾಡಿರುತ್ತಾರೆ.

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s