ದಿನದ ಅಪರಾಧಗಳ ಪಕ್ಷಿನೋಟ 6 ನೇ ಜುಲೈ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 05.07.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 06.07.2016 ರಂದು ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ :01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:05.07.2016 ರಂದು ದೂರುದಾರರಾದ ಶ್ರೀ. ರಾಮಕೃಷ್ಣಪ್ಪ, ಬಿನ್‌. ಗುರಪ್ಪ,  ನೇರಳಕೇರೆ ಗ್ರಾಮ ರವರು  ನೀಡಿದ ದೂರಿನಲ್ಲಿ ದಿನಾಂಕ: 04.07.2016 ರಂದು ಮದ್ಯಾಹ್ನ ಸುಮಾರು 3-30 ಗಂಟೆಯಲ್ಲಿ ದೂರುದಾರರು ಬಂಗಾರಪೇಟೆಗೆ ಬರಲು ನೇರಳೆಕೆರೆ ಗ್ರಾಮದ ಚಂದ್ರಯ್ಯ ರವರ ಆಂಗಡಿ ಮುಂದೆ ಬಸ್ಸಿಗಾಗಿ ಕಾಯುತ್ತಿದ್ದಾಗ. ಸದರಿ ಗ್ರಾಮದ ವಾಸಿಯಾದ ಆರೋಪಿ ಜಯಪ್ಪ ಎಂಬುವರು ದೂರುದಾರರ ಬಳಿ ಬಂದು  ನೀನು ಏಕೆ ಜಮೀನು ವಿಚಾರದಲ್ಲಿ ನ್ಯಾಯಾಲಯಕ್ಕೆ ಹೋಗಿದ್ದಿಯಾ ಎಂದು ಕೆಟ್ಟ ಮಾತುಗಳಿಂದ ಬೈದು , ಕಲ್ಲಿನಿಂದ ಮುಖಕ್ಕೆ ಹೊಡೆದು ರಕ್ತಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 05.07.2016 ರಂದು ದೂರುದಾರರಾದ ಶ್ರೀಮತಿ ಶೈಲಜ ಕೋಂ ಚಂದ್ರಶೇಖರ ಪೆದ್ದಪಲ್ಲಿ ಗ್ರಾಮ ರವರು  ನೀಡಿದ ದೂರಿನಲ್ಲಿ ದಿನಾಂಕ:30.06.2016 ರಂದು ದೂರುದಾರರ ಗಂಡ ಚಂದ್ರಶೇಖರ್  28 ವರ್ಷ ರವರು ಬಂಗಾರಪೇಟೆಯ ಕಾರೋನೇಷನ್ ರಸ್ತೆಯಲ್ಲಿರುವ ಆನಂದ್ ಪ್ರೇಮ್ ವರ್ಕ್ಸ್ ಅಂಗಡಿಗೆ ಕೆಲಸಕ್ಕೆ ಹೋಗಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸು ಬರದೆ ಕಾಣೆಯಾಗಿರುತ್ತಾರೆ.

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 05.07.2016 ರಂದು ದೂರುದಾರರಾದ ಶ್ರೀ. ರಮೇಶ್‌ ಬಿನ್‌ ಮುನಿಯಪ್ಪ, ನಂ 286 ಬಿ ಬ್ಲಾಕ್‌. ವೇಮಗಲ್‌ ಕೋಲಾರ ರವರು ನೀಡಿದ ದೂರಿನಲ್ಲಿ. ದಿನಾಂಕ. 03.07.2016 ರಂದು ದೂರುದಾರರು ಮತ್ತು ದೂರುದಾರರ ಹೆಂಡತಿಯೊಂದಿಗೆ ಅವರ ದ್ವಿಚಕ್ರವಾಹನ ಹಿರೋ ಹೋಂಡಾ ಸ್ಪಲೆಂಡರ್ ಪ್ರೋ ಸಂ. ಕೆಎ-53-ಎಕ್ಸ್-138 ರಲ್ಲಿ ರಾಮಕುಪ್ಪಂ ಬಳಿಯಿರುವ ನಾಗರ ದೇವಸ್ಥಾನಕ್ಕೆ ಹೋಗಿ ವಾಪಸ್ಸು ಹೋಗುವ ಸಮಯಲ್ಲಿ ವಿಕೋಟೆ- ಬೇತಮಂಗಲ ಮುಖ್ಯ ರಸ್ತೆಯ ತಾತೇನಹಳ್ಳಿ ಗ್ರಾಮದ ಬಳಿ ಬರುತ್ತಿರುವಾಗ ದೂರುದಾರರ ದ್ವಿಚಕ್ರವಾಹನಕ್ಕೆ ಹಿಂಬದಿಯಿಂದ ಟಾಟಾ ಏಸ್ ಸಂಖ್ಯೆ ಇರುವುದಿಲ್ಲ. ವಾಹನವು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದು ದೂರುದಾರರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ, ದೂರುದಾರರ ಹೆಂಡತಿ ರಸ್ತೆಯ ಮೇಲೆ ಬಿದ್ದು ತಲೆಗೆ ರಕ್ತ ಗಾಯಗಳಾಗಿರುತ್ತದೆ.

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s