ದಿನದ ಅಪರಾಧಗಳ ಪಕ್ಷಿನೋಟ 5 ನೇ ಜುಲೈ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 04.07.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 05.07.2016 ರಂದು  ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : 01

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕಣ ದಾಖಲಾಗಿರುತ್ತದೆ. ದಿನಾಂಕ:04.07.2016 ರಂದು ದೂರುದಾರರಾದ ಶ್ರೀ.  ಚಂದ್ರಪ್ಪ ಬಿನ್‌ ಬೀರಪ್ಪ  ಶ್ರೀನಿವಾಸಂದ್ರ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 04.07.2016 ರಂದು ಬೆಳಗ್ಗೆ 10-00 ಗಂಟೆಯಿಂದ ಮದ್ಯಾಹ್ನ 2-00 ಗಂಟೆಯ ಮಧ್ಯೆ ದೂರುದಾರರು ಶ್ರೀನಿವಾಸಸಂದ್ರ ಗ್ರಾಮದ ವಾಸದ ಮನೆಯಲ್ಲಿ ಯಾರು ಇಲ್ಲದೇ ಸಮಯದಲ್ಲಿ, ಯಾರೋ ಕಳ್ಳರು ಯಾವುದೋ ಆಯುಧದಿಂದ ಬಾಗಿಲನ್ನು ತೆಗೆದು ಓಳಗೆ ಪ್ರವೇಶಿಸಿ, ಮನೆಯಲ್ಲಿದ್ದ ಬೀರುವಿನ ಬಾಗಿಲನ್ನು ತೆಗೆದು ಬೀರುವಿನಲ್ಲಿದ್ದ ರೂ 1,000/-ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:04.07.2016 ರಂದು ಮದ್ಯಾಹ್ನ ಸುಮಾರು 12.15 ಗಂಟೆ ಸಮಯದಲ್ಲಿ ದೂರುದಾರರಾದ ಶ್ರೀ. ರಾಮಕೃಷ್ಣಾರೆಡ್ಡಿ ಬಿನ್‌. ರಾಮರೆಡ್ಡಿ, ಮಲ್ಲಂಪಲ್ಲಿ ಗ್ರಾಮರವರು ನೀಡಿದ ದೂರಿನಲ್ಲಿ ದೂರುದಾರರು ಮತ್ತು ಹೆಂಡತಿ ಮನೆಯಲ್ಲಿರುವಾಗ ಯಾರೋ ಒಬ್ಬ ಆಸಾಮಿಯು ಮನೆಯ ಬಳಿ ಬಂದು ದೂರುದಾರರ ಹೆಂಡತಿಯನ್ನು ಕುರಿತು ಇಲ್ಲಿ ಯಾರೋ ಏರ್ ಟೆಲ್ ಟವರ್ ಹಾಕಲು ಹೇಳಿದ್ದರು, ನಿಮಗೆ ಗೊತ್ತಿದೆಯೇ ಎಂತ ಕೇಳುತ್ತಿದ್ದು, ದೂರುದಾರರ ಹೆಂಡತಿ ಸರಸಮ್ಮ ರವರು ಮನೆಯಿಂದ ಆಚೆ ಬಂದಾಗ ಒಬ್ಬ ಆಸಾಮಿಯು ಸುಮಾರು 35 ವರ್ಷ ವಯಸ್ಸುಳ್ಳವನು ಹತ್ತಿರ ಬಂದು ಮೊಬೈಲ್ ಟವರ್ ಹಾಕಲು ನಮಗೆ ಸ್ಥಳ ಬೇಕಾಗಿದೆ ಎಂತ ಕೇಳಿದಾಗ  ಆಗ ದೂರುದಾರರು ತನ್ನದೆ ಸ್ಥಳ ಇದೆ ನೋಡಿ ಎಂತ ಹೇಳಿ ತನ್ನ ಮನೆಯ ಬಳಿ ಇರುವ ಜಮೀನಿನ ಒಳಗೆ ಕರೆದುಕೊಂಡು ಹೋಗಿ ತೋರಿಸಿದಾಗ, ಆರೋಪಿ ಮೂರು – ನಾಲ್ಕು ಹಳ್ಳಗಳನ್ನು ತೋಡಿಸಿ ಎಲ್ಲಿಯೂ ಟವರ್ ಬರುತ್ತಿಲ್ಲ, ಹಳ್ಳದಲ್ಲಿ ಬಂಗಾರವನ್ನು ಹಾಕಿ ನೋಡುತ್ತೇನೆಂತ ಹೇಳಿ ಆತನ ಕೈಯಲ್ಲಿದ್ದ ಸುಮಾರು 10 ಗ್ರಾಮ ತೂಕದ ಬಂಗಾರದ ಉಂಗುರವನ್ನು ಸದರಿ ಹಳ್ಳದಲ್ಲಿ ಹಾಕಿಸಿದಾಗ, ಸ್ವಲ್ಪ ಟವರ್ ಬರುತ್ತಿದೆ, ಬಂಗಾರದ ಚೈನ್ ಇದ್ದರೆ ಹಾಕಿ ಎಂತ ಆರೋಪಿಯು ಹೇಳಿದ್ದರಿಂದ, ದೂರುದಾರರು ಮನೆಗೆ ಹೋಗಿ ಸುಮಾರು 20 ಗ್ರಾಂ ತೂಕದ ಬಂಗಾರದ ಚೈನನ್ನು ತೆಗೆದುಕೊಂಡು ಬಂದು ಬಂಗಾರದ ಚೈನು ಮತ್ತು ಉಂಗುರವನ್ನು ಹಳ್ಳದಲ್ಲಿ ಹಾಕುವ ನೆಪದಲ್ಲಿ ದೂರುದಾರರಿಗೆ ನಂಬಿಸಿ, ಬಂಗಾರದ ಚೈನು ಮತ್ತು ಉಂಗುರವನ್ನು ಎತ್ತಿಕೊಂಡು ಹೋಗಿ ಮೋಸ ಮಾಡಿರುತ್ತಾರೆ.

-ಹಲ್ಲೆ :01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 26.06.2016 ರಂದು ದೂರುದಾರರಾದ ಶ್ರೀ. ಆನಂದ ಬಿನ್‌.  ವೆಂಕಟೇಶಪ್ಪ, ಗಾಂದಿನಗರ ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ ದೂರುದಾರರು ಮನೆಯಲ್ಲಿದ್ದಾಗ, ಅದೇ ಕೇರಿಯ ಆರೋಪಿಗಳಾದ ರಮೇಶ್, ಶಂಕರ್ ರವರು ದೂರುದಾರರನ್ನು ಅವರ ಜೊತೆ ಕರೆದುಕೊಂಡು ಹೋಗಿ ಉರಿಗಾಂಪೇಟೆಯ ಸ್ವಾಮಿನಾಥಪುರಂ ಬಳಿ ಇರುವ ವಿನಾಯಕ ಕಾಲೇಜು ಮೈದಾನದ ಬಳಿ ಕುಳಿತುಕೊಂಡು ಮಾತನಾಡುತ್ತಿದ್ದಾಗ,  ಆರೋಪಿ ರಮೇಶ್ ರವರು ದೂರುದಾರರನ್ನು ಹಣ ಕೊಡು ಬಾರ್ ಗೆ ಹೋಗ ಬೇಕು ಎಂತ  ಹೇಳಿದಾಗ, ದೂರುದಾರರು ಕೊಡುವುದಿಲ್ಲವೆಂದು  ಹೇಳಿದಕ್ಕೆ ಆರೋಪಿಗಳು ವಿನಾಕಾರಣ ಜಗಳ ತೆಗೆದು ಕೈಗಳಿಂದ ಹೊಡೆದು, ರಕ್ತ ಗಾಯ ಪಡಿಸಿರುತ್ತಾರೆ.

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : 02

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 04.07.2016 ರಂದು ದೂರುದಾರರಾದ ಶ್ರೀ. ರಾಜನ್‌ ಬಿನ್‌. ಸೆಲ್ವರಾಜ್‌, ಪೊಲೀಸ್‌ ವಸತಿ ಗೃಹ ಮಾರಿಕುಪ್ಪಂ ರವರು ನೀಡಿದ ದೂರಿನಲ್ಲಿ ದಿನಾಂಕ:-03.07.2016 ರಂದು ಮಧ್ಯಾಹ್ನ 4:20 ಗಂಟೆಯ ಸಮಯದಲ್ಲಿ ದೂರುದಾರರ ಮಗಳಾದ ಕುಮಾರಿ ಶ್ವೇತಾ ರವರು ಅಂಗಡಿಯಲ್ಲಿ  ಹಾಲು ತೆಗೆದುಕೂಂಡು ಮನೆಗೆ ವಾಪಸ್ಸು ಬರಲು ಓ ಡ್ಯಾನಿಯಲ್ ರಸ್ತೆಯಲ್ಲಿ ನೆಡೆದುಕೂಂಡು ಹೋಗುತ್ತಿದ್ದಾಗ ಆರೋಪಿ ಆತನ ದ್ವಿಚಕ್ರವಾಹನದ ಸಂಖ್ಯೆ KA-08.J-9206 ಹಿರೋ ಹೂಂಡಾ ಗ್ಲಾಮರ್ ರ ಚಾಲಕನು ಆತನ ದ್ವಿಚಕ್ರ ವಾಹನವನ್ನು ಅತಿ ವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೂಂಡು ಬಂದು ದೂರುದಾರರ ಮಗಳಾದ ಸ್ವೇತಾ 11 ವರ್ಷ ರವರು ಡಿಕ್ಕಿ ಹೂಡೆದು ರಕ್ತಗಾಯ ಪಡಿಸಿರುತ್ತಾರೆ.

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 04.07.2016 ರಂದು ದೂರುದಾರರಾದ ಶ್ರೀ.ಭಿಮೇಶ್ವರಾವ್‌ ಬಿನ್‌ ಮುನಿಸ್ವಾಮಿ ಮಾರಿಕುಪ್ಪಂ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ:01.07.2016 ರಂದು ದೂರುದಾರರು TATA SUMO KA 04 Z-2451ವಾಹನದಲ್ಲಿ ಬಿ.ಕೂತ್ತೋರು ಗ್ರಾಮಕ್ಕೆ ಹೋಗಿ ದೂರುದಾರರ ಊರಿಗೆ ವಾಪಸ್ಸು ಬರುವಾಗ ತೂಕಲ್ ಗ್ರಾಮದ ಬಳಿ ಸುಮೋ ಚಾಲಕನು ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೂಂಡು ಹೋದ ಪರಿಣಾಮ  ವಾಹನ ಹಳ್ಳಕ್ಕೆ ಬಿದ್ದದ್ದರಿಂದ   ದೂರುದಾರರಿಗೆ ರಕ್ತಗಾಯಗಳಾಗಿರುತ್ತದೆ.

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s