ದಿನದ ಅಪರಾಧಗಳ ಪಕ್ಷಿನೋಟ 4 ನೇ ಜುಲೈ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 03.07.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 04.07.2016 ರಂದು  ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ :01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 03.07.2016 ರಂದು ಮದ್ಯಾಹ್ನ ಸುಮಾರು 12-30 ಗಂಟೆಯಲ್ಲಿ ದೂರುದಾರರಾದ ಶ್ರೀ.  ರಾಘವೇಂದ್ರ ಬಿನ್‌ ಕೃಷ್ಣಪ್ಪ, ಭೀಮಗಾನಹಳ್ಳಿ ರವರು ನೀಡಿದ ದೂರಿನಲ್ಲಿ ದೂರುದಾರರು ಅವರ ಜಮೀನನ್ನು ಉಳಿಮೆ ಮಾಡುತ್ತಿದ್ದಾಗ ಆರೋಪಿಗಳಾದ ಗೋವಿಂದಪ್ಪ,  ತಮ್ಮ ಮಂಜುನಾಥ್‌ ಎಂಬುವರುಗಳು ಜಮೀನಿನ ಬಳಿ ಬಂದು ಈ ಜಮೀನು ನಮಗೆ ಸೇರಿರುವುದು ನೀವು ಏಕೆ ಜಮೀನು ಉಳುಮೆ ಮಾಡುತ್ತೀರಾ ಎಂದು ಜಗಳ ಮಾಡಿ ದೂರುದಾರರಿಗೆ ಕೆಟ್ಟಮಾತುಗಳಿಂದ ಬೈದು, ಕಲ್ಲಿನಿಂದ ತಲೆಗೆ ಹೊಡೆದು, ರಕ್ತಗಾಯ ಪಡಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆ.

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : 01

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 03.07.2016 ರಂದು ದೂರುದಾರರಾದ ಶ್ರೀ.  ಗೋಪಿನಾಥ,  ಬಿನ್‌.  ಶ್ರೀನಿವಾಸ,  ಗಾಂದಿ ನಗರ, ರಾಬರ್ಟ್‌‌ಸನ್‌‌ಪೇಟೆ ರವರು  ನೀಡಿದ ದೂರಿನಲ್ಲಿ ದೂರುದಾರರ ತಾಯಿ ಶಾಂತಿರವರಿಗೆ ಆಂದ್ರಪ್ರದೇಶದ ಬೈಲಪಲ್ಲಿಯಲ್ಲಿ ಈ ಹಿಂದೆ  ಗಾಯವಾಗಿದ್ದ ಮೊಣಕೈಗೆ ನಾಟಿ ಕಟ್ಟು ಹಾಕಿಕೊಂಡು ದ್ವಿ-ಚಕ್ರ  ವಾಹನ ಸಂಖ್ಯೆ: KA-08 K-6425 ರಲ್ಲಿ ಕೆ.ಜಿ.ಎಫ್- ಬೇತಮಂಗಲ ಮುಖ್ಯ ರಸ್ತೆಯ ಘಟ್ಟಕಾಮದೇನ ಹಳ್ಳಿ – ಕೃಷ್ಣಾವರಂ  ಗ್ರಾಮದ ಮದ್ಯ   ಬರುತ್ತಿದ್ದಾಗ. ಅಕಸ್ಮಿಕವಾಗಿ ಹಸು ಅಡ್ಡ ಬಂದಿದ್ದರಿಂದ ಬ್ರೇಕ್ ಹಾಕಲಾಗಿ ಹಿಂಬದಿ ಕುಳಿತಿದ್ದ ಶಾಂತಿ ರವರು ಕೆಳಗೆ ಬಿದ್ದು ತಲೆಗೆ ಬಾರಿ ಗಾಯವಾಗಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಅಭಯ್ಕ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಪಲಕಾರಿಯಾಗದೇ ದಿನಾಂಕ 03.07.2016 ರಂದು ಸಂಜೆ ಸುಮಾರು 06.30  ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 03.07.2016 ರಂದು ದೂರುದಾರರಾದ ಶ್ರೀ. ದೇವರಾಜ್‌ ಸಿಂಗ್‌ ಬಿನ್‌ ಹುಕ್ಕುಂಸಿಂಗ್‌, ದೇಶಹಳ್ಳಿ ಗ್ರಾಮ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ದೂರುದಾರರ ತಮ್ಮನಾದ ಮೋಹನ್ ಸಿಂಗ್ ರವರಿಗೆ ರಾಜಸ್ಥಾನದ ಪೆಪರೋನ್ ಗ್ರಾಮದ ವಾಸಿ ಬಟೋಯಿ ಎಂಬ ಹುಡುಗಿಯೊಂದಿಗೆ ಮದುವೆ ಮಾಡಲು ಮಾತುಕತೆ ನಡೆದಿದ್ದು, ಹುಡುಗಿಯ ಮನೆಯವರು ಆಕೆಗೆ ಬೇರೆ ಹುಡುಗನ ಜೊತೆ ಮದುವೆ ಮಾಡಿದ್ದರಿಂದ ದೂರುದಾರರ ತಮ್ಮ ಮೋಹನ್‌ ಸಿಂಗ್‌ ರವರು ಬೇಸತ್ತು ದಿನಾಂಕ:02.07.2016 ರಂದು ರಾತ್ರಿ ದೇಶಿಹಳ್ಳಿಯ ಶ್ರೀರಾಮಪ್ಪ ರವರ ಮನೆಯಲ್ಲಿ ಕಬ್ಬಿಣದ ಪೈಪ್ ಗೆ ಒಂದು ಪ್ಲಾಸ್ಟಿಕ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s