ದಿನದ ಅಪರಾಧಗಳ ಪಕ್ಷಿನೋಟ 30 ನೇ ಜೂನ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 29.06.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 30.06.2016 ರಂದು  ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ  ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 29.06.2016 ರಂದು ಸಂಜೆ 6.30 ಗಂಟೆಯಲ್ಲಿ ದೂರುದಾರರಾದ ಶ್ರೀ.  ರಂಗನಾಥ್‌ ಎ.ಪಿ.ಎಲ್‌ ಬಿನ್‌  ಲಕ್ಷ್ಮೀಪತಿ  2ನೇ ಕ್ರಾಸ್‌‌, ಹುಲ್ಲು ಮಾರುಕಟ್ಟೆ, ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ. ದಿನಾಂಕ 29.06.2016 ರಂದು ಬೆಳಿಗ್ಗೆ 10.45 ಗಂಟೆಗೆ ರಾಬರ್ಟ್ ಸನ್ ಪೇಟೆಯ 2ನೇ ಕ್ರಾಸ್ ನಲ್ಲಿ ಮೆಹರ್ ಶಾದಿ ಮಹಲ್ ಮುಂಭಾಗವಿರುವ ದೂರುದಾರರ ವಾಸದ ಮನೆಗೆ ಬೀಗ ಹಾಕಿಕೊಂಡು ಹೊರಗಡೆ ಹೋಗಿದ್ದು, ಮಧ್ಯಾಹ್ನ 02.30 ಗಂಟೆಗೆ ಮನೆಗೆ ವಾಪಸ್ಸು ಬಂದು ನೋಡಲಾಗಿ ಯಾರೋ ಕಳ್ಳರು ಯಾವುದೋ ಆಯುಧದಿಂದ ಮನೆಯ ಗ್ರೀಲ್ ಬಾಗಿಲಿಗೆ ಹಾಕಿದ್ದ ಬೀಗವನ್ನು ಕಿತ್ತು, ಒಳಗೆ ಪ್ರವೇಶ ಮಾಡಿ ರೂಮಿನಲ್ಲಿದ್ದ, ಬೀರುವಿನ  ಬಾಗಿಲನ್ನು ಕಿತ್ತು ಅದರಲ್ಲಿದ್ದ, ಸುಮಾರು 47 ಗ್ರಾಂ ತೂಕದ ಬಂಗಾರದ ವಡವೆಗಳು ಒಟ್ಟು ಸುಮಾರು 1,40,000/-ರೂ ಬೆಲೆ ಬಾಳುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ :ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ: ಇಲ್ಲ

-ಮನುಷ್ಯ ನಾಪತ್ತೆ :ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:29.06.2016 ರಂದು ದೂರುದಾರರಾದ ಶ್ರೀಮತಿ. ಮುನಿಯಮ್ಮ, ಕೊತ್ತೂರು ಗ್ರಾಮ ಬೇತಮಂಗಳ ರವರು ನೀಡಿದ ದೂರಿನಲ್ಲಿ. ದೂರುದಾರರ ಮಗ ಗಂಗಾಧರ 19 ವರ್ಷ ರವರು ದಿನಾಂಕ 28.06.2016 ರಂದು ಬೆಳಗ್ಗೆ 9.00 ಗಂಟೆಗೆ ಕೂಲಿ ಕೆಲಸಕ್ಕೆ ಕೂಳೂರಿಗೆ ಗ್ರಾಮಕ್ಕೆ ಹೋಗುವುದಾಗಿ ಮನೆಯಲ್ಲಿ  ಹೇಳಿ ಹೋದವನು ದಿನಾಂಕ:29.06.2016 ರಂದು ಬೆಳಗ್ಗೆ 10.00 ಗಂಟೆ ಸಮಯದಲ್ಲಿ ಗಂಗಾಧರ ಎಂಬುವರು ಜೀವನದಲ್ಲಿ ಜಿಗುಪ್ಸೆ ಗೊಂಡು ಕೂಳೂರು ಗ್ರಾಮದ ಬಳಿ ಮರಕ್ಕೆ ನೇಣು ಹಾಕಿಕೊಂಡು ಅತ್ಮಹತ್ಯ ಮಾಡಿಕೊಂಡು ಮೃತಪಟ್ಟಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s