ದಿನದ ಅಪರಾಧಗಳ ಪಕ್ಷಿನೋಟ 24 ನೇ ಜೂನ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 23.06.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 24.06.2016 ರಂದು  ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ :ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ  ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 24.06.2016 ರಂದು ದೂರುದಾರರಾದ ಶ್ರೀ.  ನಾಗರಾಜ್‌ ಬಿನ್‌ ಲಕ್ಷ್ಮಯ್ಯ ಮಾಲೂರು ರವರು ನೀಡಿದ ದೂರಿನಲ್ಲಿ. ದಿನಾಂಕ:20.06.2016 ರಂದು ಶ್ರೀಮತಿ ಹೇಮಾವತಿ ರವರನ್ನು ಆಕೆಯ ಅಳಿಯ ಅವರ ಬಜಾಜ್ ಡಿಸ್ಕವರ್ ದ್ವಿ ಚಕ್ರ ವಾಹನ ಕೆಎ-08 ಆರ್-4080 ರಲ್ಲಿ ಹಿಂಬಾಗ ಕುಳ್ಳರಿಸಿಕೊಂಡು ಮಾಲೂರುನಿಂದ ಕೆ,ಜಿ.ಎಫ್‌ ಬರುತ್ತಿದ್ದಾಗ  ಆರೋಪಿ  ಕುಮಾರ್‌ ರವರು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಮಾಪುರ ಗೇಟ್ ಬಳಿ ರೋಡ್ ಹಂಪ್ಸ್ ಮೇಲೆ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದರಿಂದ ವಾಹನದ  ಹಿಂಬಾಗ ಕುಳಿತಿದ್ದ ಹೇಮಾವತಿ ರವರು ವಾಹನದಿಂದ ಕೆಳಗೆ ಬಿದ್ದು, ತಲೆಗೆ ಬಾರಿ ರಕ್ತ ಗಾಯವಾಗಿದ್ದು, ಗಾಯಾಳನ್ನು ಚಿಕಿತ್ಸೆಗಾಗಿ ಬೆಂಗಳೂರು ವಿ.ಎಸ್.ಆಚಾರ್ಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ  ಚಿಕಿತ್ಸೆಗಾಗಿ ದಾಖಲು ಮಾಡಿದ್ದು, ಚಿಕಿತ್ಸೆ ಪಡೆಯುತ್ತಿದ್ದು, ತಲೆಗೆ ಬಾರಿ  ಗಾಯವಾಗಿದ್ದರಿಂದ ದಿನಾಂಕ:23.06.2016 ರಂದು ಬೆಳಗ್ಗೆ 9.20 ಗಂಟೆಗೆ ಆಸ್ಪತ್ರೆಯಲ್ಲಿ ಶ್ರೀಮತಿ ಹೇಮಾವತಿ  40 ವ಼ರ್ಷ ರವರು ಮೃತ ಹೊಂದಿರುತ್ತಾಳೆ.

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು :02

         ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಮರಳು ಸಾಗಾಣೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 23.06.2016 ರಂದು  ದೂರುದಾರರಾದ ಶ್ರೀ ಗೋವಿಂದ ಬೇತಮಂಗಲ ಪಿಎಸ್‌ಐ ರವರಿಗೆ ಬಂದ  ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಮತ್ತು ಸಿಬ್ಬಂದಿರವರುಗಳು ಬ್ಯಾಟರಾಯನಹಳ್ಳಿ ಗ್ರಾಮದ ಸೀನಪ್ಪ ರವರ ಜಮೀನಿನಲ್ಲಿ ಜೆಸಿಬಿ ಮತ್ತು ಟ್ರ್ಯಾಕ್ಟರ್ ಮೂಲಕ ಆರೋಪಿಗಳಾದ  ಮೋಹನ್‌. ರಾಮಚಂದ್ರ, ಸೀನಪ್ಪ, ಮತ್ತು ನಗರಾಜ್‌ ರವರುಗಳ ಅಕ್ರಮವಾಗಿ ಮರಳನ್ನು ತೆಗೆದು ಸಾಗಿಸುತ್ತಿದ್ದವರನ್ನು ದಾಳಿ ಮಾಡಿ ಆರೋಪಿಗಳನ್ನು ಮತ್ತು ಜೆಸಿಬಿ ಹಾಗೂ  ಟ್ರ್ಯಾಕ್ಟರನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡಿರುತ್ತಾರೆ.

 ರಾಬರ್ಟ್‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 23.06.2016 ರಂದು ಮದ್ಯಾಹ್ನ 2.30 ಗಂಟೆಗೆ ಶ್ರೀ. ವೆಂಕಟಕೃಷ್ಣ, ಪಿ.ಎಸ್.ಐ (ಕ್ರೈಂ) ಮತ್ತು ಸಿಬ್ಬಂದಿಯವರು ಜೀಪ್ ಸಂಖ್ಯೆ: ಕೆ.ಎ.08-ಜಿ-63 ರಲ್ಲಿ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯ ಸರಹದ್ದಿನ ಪೊಟ್ಟೆಪಲ್ಲಿ ಗ್ರಾಮದ ಚರ್ಚ್  ಬಳಿ ಗಸ್ತಿನಲ್ಲಿದ್ದಾಗ  ಆರೋಪಿಗಳಾದ ಅಬ್ದುಲ್‌ ಮಜೀದ್‌. ನಾಸೀರ್‌. ಮತ್ತು ರಿಯಾಜ್‌  ರವರುಗಳು ಆಟೋ ಸಂಖ್ಯೆ: ಕೆ.ಎ.04-ಎ-602 ರಲ್ಲಿ ಸೀಮೆ ಹಸುವಿನ ಕರುಗಳನ್ನು ಸಾಗಾಟ ಮಾಡುತ್ತಿದ್ದವರನ್ನು ವಿಚಾರಿಸಲಾಗಿ ಸದರಿ ಆರೋಪಿಗಳು ರಾಬರ್ಟ್ ಸನ್ ಪೇಟೆ  ಕಸಾಯಿಖಾನೆಯಲ್ಲಿ ಕೊಯ್ಯಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು, ಆರೋಪಿಗಳ ವಿರುದ್ದ  ಕಾನೂನು ಕ್ರಮ ಕೈಗೊಂಡಿರುತ್ತಾರೆ.

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s