ದಿನದ ಅಪರಾಧಗಳ ಪಕ್ಷಿನೋಟ 20ನೇ ಜೂನ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 19.06.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 20.06.2016 ರಂದು  ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:19.06.2016 ರಂದು ದೂರುದಾರರಾದ ಶ್ರೀಮತಿ ಪಾರ್ವತಮ್ಮ ಕೊಂ ಬೈಯ್ಯಣ್ಣ ಗುಟ್ಟಹಳ್ಳಿ ಗ್ರಾಮ ರವರು  ನೀಡಿದ ದೂರಿನಲ್ಲಿ. ದಿನಾಂಕ 02.06.2016 ರಂದು ಬೆಳಿಗ್ಗೆ 7.30 ಗಂಟೆ ಸಮಯದಲ್ಲಿ ದೂರುದಾರರ ಗಂಡ ಬೈಯ್ಯಣ್ಣ ರವರು ಅವರ ಗ್ರಾಮಕ್ಕೆ ಬರಲು ಸೂಪರ್ XL ಹೆವಿ ಡ್ಯೂಟಿ ವಾಹನದಲ್ಲಿ ಹೊನ್ನೇನಹಳ್ಳಿ ಬಳಿ ಚಲಾಯಿಸಿಕೊಂಡು ಬರುತ್ತಿರುವಾಗ ಹೊನ್ನೇನಹಳ್ಳಿ ಕಡೆಯಿಂದ  ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನ ಸಂKA-08,S-7767  ರಲ್ಲಿ  ಚಿನ್ನಿ ಬಿನ್ ರುದ್ರಪ್ಪ ಎಂಬುವರು  ಅತಿವೇಗ ಮತ್ತು ಅಜಾಗರೂಕತೆಯಿಂದ ಅವರ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಬಂದು ಬಯ್ಯಣ್ಣ ರವರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ರಕ್ತ ಗಾಯವಾಗಿರುತ್ತದೆ.

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:19.06.2016ರಂದು ದೂರುದಾರರಾದ ಶ್ರೀ. ಕೃಷ್ಣಮೂರ್ತಿ ಬಿನ್‌ ವೆಂಕಟರಾಮಯ್ಯ, ಶಾಂತಿನಗರ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ  ಆರೋಪಿ ಮುರುಳಿ ರವರ ತಾಯಿಯಾದ ಮುನಿಯಮ್ಮ ರವರ ಬಾಬತ್ತು ಬಂಗಾರಪೇಟೆ ಕಾರಹಳ್ಳಿ ಖಾತೆ ನಂ-3709/3398 ರ ಸ್ವತ್ತನ್ನು 5,00,000/- ರೂಗಳಿಗೆ ದೂರುದಾರರು ಮಾರಾಟ ಮಾಡಿದ್ದು,  ಸದರಿ ಸ್ವತ್ತನ್ನು ಆರೋಪಿ ಕಡೆಯಿಂದ ಶುದ್ದಕ್ರಯ ಮಾಡಿಸಿಕೊಡಲು ಕಳಿದ್ದಕ್ಕೆ ದಿನಾಂಕ:21.05.2016 ರಂದು ಬೆಳಿಗ್ಗೆ 10.00 ಗಂಟೆಗೆ ದೂರುದಾರರು ಜಮೀನಿ ಬಳಿ ಹೋಗುತ್ತಿದ್ದಾಗ ಆರೋಪಿಗಳಾದ ಮುರಳಿ. ಪ್ರಕಾಶ್‌, ವೆಂಕಟಪ್ಪ ಎಂಬುವರುಗಳು ದೂರುದಾರರನ್ನು ಉದ್ದೇಶಪೂರ್ವಕವಾಗಿ ಅಡ್ಡಗಟ್ಟಿ ಕೆಟ್ಟಮಾತುಗಳಿಂದ ಬೈದು ಜಾತಿ ನಿಂದನೆ ಮಾಡಿ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಅಸ್ವಾಭಾವಿಕ ಮರಣ :02

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:18.0.2016 ರಂದು ಸಂಜೆ 6:00 ಗಂಟೆಯಿಂದ  ದೂರುದಾರರಾದ ಶ್ರೀಮತಿ ಪಾರ್ವತಮ್ಮ ಚೊಕ್ಕರಬಂಡೆ ಗ್ರಾಮರವರು ನೀಡಿದ ದೂರಿನಲ್ಲಿ ದೂರುದಾರರ ಗಂಡನಾದ ವೆಂಕಟೇಶಪ್ಪ 45 ವರ್ಷ ರವರು ಸಂಸಾರದ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆ ಹೂಂದಿ ಚೊಕ್ಕರಬಂಡೆ ಗ್ರಾಮದ  ಚಿನ್ನಪ್ಪ ಜಮೀನಿನಲ್ಲಿರುವ ಹುಣಸೇ ಮರದ ಕೂಂಬೆಗೆ ಹಗ್ಗದಿಂದ ನೇಣು ಹಾಕಿಕೂಂಡು ಆತ್ಮಹತ್ಯೆ ಮಾಡಿಕೂಂಡಿರುತ್ತಾರೆ. ಈ ಕೃತ್ಯವು ಆಂಡ್ರಸನ್ ಪೇಟೆ ಪೊಲೀಸ್  ಠಾಣಾ ಸರಹದ್ದು  ಚೂಕ್ಕರಬಂಡೆ ಗ್ರಾಮದಲ್ಲಿ ನಡೆದಿರುತ್ತೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 19.06.2016 ರಂದು ದೂರುದಾರರಾದ ಶ್ರೀ ಗೋವಿಂದ ಬಿನ್ ರಾಮಪ್ಪ, ಕೆರೆಕೋಡಿಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ. ಅರ್ಜುನ್ @ ಸುರೇಶ್ ಎಂಬುವರು ದಿನಾಂಕ 18.06.2016 ರಂದು ಕೆರೆಕೋಡಿ ಗ್ರಾಮದ ವೆಂಕಟರಾಮಪ್ಪ  ಎಂಬುವರ ಮನೆಯನ್ನು ಕಟ್ಟಲು ಗಾರೆ ಕೆಲಸಕ್ಕೆ ಹೋಗಿದ್ದು, ಸಂಜೆ 5.30 ಗಂಟೆ ಸಮಯದಲ್ಲಿ ಕೆಲಸ ಮುಗಿಸಿಕೊಂಡು ಮನೆಯ ಮೇಲಿನಿಂದ ಮೆಟ್ಟಿಲು ಇಳಿಯುವಾಗ ಅರ್ಜುನ್ @ ಸುರೇಶ್ ರವರು ಆಕಸ್ಮಿಕವಾಗಿ ಕಾಲು ಜಾರಿ ಮೆಟ್ಟಿಲಿನ ಕೆಳಗೆ ಬಿದ್ದು ತಲೆಗೆ ಬಾರಿ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲು ಪಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸ್ಪತ್ರೆಯಲ್ಲಿ ಅರ್ಜುನ್ @ ಸುರೇಶ್ 38 ವರ್ಷ ರವರು ಮೃತ ಹೊಂದಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s