ದಿನದ ಅಪರಾಧಗಳ ಪಕ್ಷಿನೋಟ17 ನೇ ಜೂನ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 16.06.2016 ರಂದು ಸಂಜೆ 05.00 ಗಂಟೆಯಿಂದ  ದಿನಾಂಕ 17.06.2016 ಬೆಳಗ್ಗೆ 10.00  ಗಂಟೆಯವರೆಗೆ  ವರದಿಯಾದ ಪ್ರಕರಣಗಳ ವಿವರಗಳು.

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ:೦೧

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 16.06.2016 ರಂದು ದೂರುದಾರರಾದ ಶ್ರೀಮತಿ ದೀಪಾ ಕೋಂ. ಸತ್ತೀಶ್. ಬೋಡೇನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರಾದ ಶ್ರೀಮತಿ ದೀಪಾ ರವರು ಪುರಂ ಗ್ರಾಮದ ಬಳಿ ನೀಲಗಿರಿ ತೋಪಿನ ಬಳಿ ಶೌಚಾಲಯಕ್ಕೆ ಹೋಗಿ ಬರುತ್ತಿರುವಾಗ ಅದೇ ಗ್ರಾಮದ ಆರೋಪಿ ಗೋವಿಂದಪ್ಪ ಬಿನ್ ಲೇಟ್ ವೆಂಕಟಪ್ಪ ರವರು ದೂರುದಾರರ ಹಿಂಬದಿಯಿಂದ ಬಂದು ಕೈಯನ್ನು ಹಿಡಿದು ಮಾನಭಂಗ ಮಾಡಲು ಪ್ರಯತ್ನ ಪಟ್ಟಿದ್ದು, ಆಗ ದೂರುದಾರರು ಆರೋಪಿಯಿಂದ ತಪ್ಪಿಸಿಕೊಂಡು ಜೋರಾಗಿ ಕಿರುಚಿದಾಗ ಆರೋಪಿಯ ನಿನ್ನನ್ನು ಸಾಯಿಸದೆ ಬಿಡುವುದಿಲ್ಲವೆಂತ ಪ್ರಾಣಬೆದರಿಕೆ ಹಾಕಿರುತ್ತಾರೆ.

 

-ಇತರೆ ಪ್ರಕರಣಗಳು:೦೧

ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಾಣಬೆದರಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 16.06.2016 ರಂದು ರಾತ್ರಿ 9.45 ಗಂಟೆಯಲ್ಲಿ ದೂರುದಾರರಾದ ಶ್ರೀ. ರಾಮಚಂದ್ರನ್ ಬಿನ್ ನಾರಾಯಣಪ್ಪ. ಕುಂಬಾರಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರಿಗೆ ೨೦೦೮ ನೇ ಸಾಲಿನಲ್ಲಿ ಕೆ.ಜಿ.ಎಫ್. ನ  ಆಂಡರ್ಸನ್ಪೇಟೆ ವಾಸಿಯಾದ  ಆರೋಪಿ ಪೀಟರ್ ಎಂಬಾತನು ಪರಿಚಯವಾಗಿದ್ದು ಸ್ವಲ್ಪ ದಿನಗಳ ನಂತರ ೨ಲಕ್ಷ ರೂಗಳನ್ನು ಸಾಲ ಕೊಡುವಂತೆ ಆರೋಪಿ ಕೀಳಿರುತ್ತಾರೆ. ದೂರುದಾರರು 23.000/- ರೂಗಳನ್ನು ನೀಡಿ ನಂತರ ಹದಿನೈದು ದಿನಗಳ ಬಳಿಕ ಆರೋಪಿ ಪೀಟರ್ ರವರಿಗೆ 1,50,000/- ರೂಗಳನ್ನು ಕೊಟ್ಟಿರುತ್ತಾರೆ. ಸ್ವಲ್ಪ ದಿನಗಳ ನಂತರ  ದೂರುದಾರರು ಹಣವನ್ನು ವಾಪಸ್ಸು ಕೊಡುವಂತೆ ಕೇಳಿದಾಗ ಕೊಡುವುದಾಗಿ ದಿನಗಳನ್ನು ಕಳೆಯುತ್ತಾ ಬರುತ್ತಿರುತ್ತಾನೆ. ಈಗಿರುವಲ್ಲಿ ದಿನಾಂಕ; 12.06.2016  ರಂದು ಸಂಜೆ 6.೦೦ ಗಂಟೆಯಲ್ಲಿ ದೂರುದಾರರು ರಾಬರ್ಟ್ ಸನ್ ಪೇಟೆಯ ಮುನಿಸಿಪಲ್ ಮೈದಾನದ ಬಳಿ ಆರೋಪಿ ಪೀಟರ್ ನನ್ನು ಸಾಲ ಕೊಟ್ಟಿರುವ ಹಣವನ್ನು ವಾಪಸ್ಸು ಕೊಡುವಂತೆ ಕೇಳಿದಾಗ ಆರೋಪಿಯ ಕಾರಿನಲ್ಲಿ ದೂರುದಾರರನ್ನು ಕೂರಿಸಿಕೊಂಡು ಪಾರಾಂಡಹಳ್ಳಿ ಹೊರವಲಯದ ಕಡೆ ಕರೆದುಕೊಂಡು ಹೋಗಿ ತಾನು ಒಂದು ಸಾರಿ ಹಣವನ್ನು ತೆಗೆದುಕೊಂಡರೆ ಮತ್ತೆ ವಾಪಸ್ಸು ಕೊಡುವುದಿಲ್ಲ ಕೇಳಿದರೆ ನಿನ್ನನ್ನು ಇಲ್ಲಿಯೇ ಸಾಯಿಸಿ ಬಿಡುತ್ತೇನೆಂದು ಆರೋಪಿ ಜೇಬಿನಲ್ಲಿದ್ದ ಗನ್ ನ್ನು ತೆಗೆದು ತೋರಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

-ಅಪಘಾತಗಳು:೦೧

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಒಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 16.06.2016 ರಂದು ದೂರುದಾರರಾದ ಶ್ರೀ.  ಶ್ರೀನಾಥ್ ಬಿನ್ ರಮೇಶ್. ದೇಶಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರು ದೇಶಿಹಳ್ಳಿ ಕಡೆಯಿಂದ  ಬಂಗಾರಪೇಟೆಗೆ  ಸೈಕಲಿನಲ್ಲಿ ಐಡಿಬಿಐ ಬ್ಯಾಂಕ್ ಮುಂದೆ ರಸ್ತೆಯಲ್ಲಿ ಸೈಕಲನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಕೆ.ಎ.೦೪ ಎಂ.ಸಿ ೧೨೯೦ ಕಾರ್ ನ ಚಾಲಕನು ಬಂಗಾರಪೇಟೆ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೈಕಲ್ನಲ್ಲಿ ಹೋಗುತ್ತಿದ್ದ ಶ್ರೀನಾಥ್ 16 ವರ್ಷ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸಮೇತ ಕೆಳಗೆ ಬಿದ್ದು, ರಕ್ತಗಾಯವಾಗಿರುತ್ತದೆ. ಸದರಿ  ಕಾರನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾರೆ.

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:17.06.2016 ರಂದು  ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 17.06.2016 ರಂದು  ಸಂಜೆ 05.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: 01

ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ : 17.06.2016 ರಂದು ದೂರುದಾರರಾದ ಶ್ರೀ ಶಣ್ಮುಗಂ @  ಜಾಂಬು ಬಿನ್‌ ಮುನಿಸ್ವಾಮಿ. ಗಣೇಶ್‌ಪುರಂ. ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ ದೂರುದಾರರು ರಾಬರ್ಟ್ ಸನ್ ಪೇಟೆಯ ಗೀತಾ ರಸ್ತೆಯ 6ನೇ ಕ್ರಾಸ್ ನಲ್ಲಿ ಟೂರ್ಸ್ ಅಂಡ್ ಟ್ರಾವಲ್ಸ್ ಏಜೆನ್ಸಿ ಇಟ್ಟುಕೊಂಡಿದ್ದು, ಕೆ.ಜಿ.ಎಫ್.ನಲ್ಲಿ ಕ್ವಾರಿ ಕೆಲಸ ಮಾಡುವ ಆರೋಪಿ ವಿಷ್ಣುಕುಮಾರ್ ರವರಿಗೆ ಪರಿಚಯವಿರುವ ಅರುಣ್ ಕುಮಾರ್ ಮತ್ತು ಅಜಯಕುಮಾರ್ ರವರು ಕೆನಡಾ ದೇಶದಲ್ಲಿ ಸಂಪರ್ಕದಲ್ಲಿದ್ದು, ಅವರ ಮುಖಾಂತರ ಕೆನಡಾ ದೇಶದಲ್ಲಿರುವ ಲೆದರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಇಚ್ಚೆ ಇರುವವರೆಗೆ ವೀಸಾ ಕೊಡಿಸಿ, ಕೆನಡಾ ದೇಶಕ್ಕೆ ಕಳುಹಿಸಿ ಕೊಡುವುದಾಗಿ ದೂರುದಾರರಿಗೆ ಹೇಳಿದ್ದು, ಅದರಂತೆ ದೂರುದಾರರ ಮುಖಾಂತರ 49 ಅಭ್ಯರ್ಥಿಗಳಿಂದ ತಲಾ 1,60,000/-ರೂ ಗಳನ್ನು ಪಡೆದುಕೊಂಡು ಸದರಿ ಹಣವನ್ನು ದಿನಾಂಕ: 27.08.2015 ರಿಂದ ಹಂತ ಹಂತವಾಗಿ ಅಜಯ್ ಕುಮಾರ್ ರವರ ಹೆಚ್.ಡಿ.ಎಫ್.ಸಿ. ಬ್ಯಾಂಕ್, ಆನೇಕಲ್ ಬ್ರಾಂಚಿನ ಅವರ ಅಕೌಂಟ್ ನಂಬರ್‌ಗೆ ಜಮ ಮಾಡಿ, ಒಟ್ಟು 76,52,000/- ರೂಗಳನ್ನು ಸದರಿ ಅಜಯ್ ಕುಮಾರ್ ರವರಿಗೆ ನೀಡಿರುತ್ತಾರೆ, ಆದರೆ  ಆರೋಪಿಗಳಾದ  ವಿಷ್ಣುಕುಮಾರ್, ಅರುಣ್ ಕುಮಾರ್ ಮತ್ತು ಅಜಯಕುಮಾರ್ ರವರು ದೂರುದಾರರಿಗೆ ಯಾವುದೇ ಮಾಹಿತಿಯನ್ನು ನೀಡದೆ, ಅಭ್ಯರ್ಥಿಗಳಿಗೆ ಕೆನಡಾ ದೇಶದ ಲೆದರ್ ಫ್ಯಾಕ್ಟರಿಯಲ್ಲಿ ಕೆಲಸ ಕೊಡಿಸದೆ,  ಅಭ್ಯರ್ಥಿಗಳನ್ನು  ನಂಬಿಸಿ ಒಟ್ಟು 76,52,000/- ರೂಗಳನ್ನು ಮೋಸ ಮಾಡಿರುತ್ತಾರೆ.

 

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ :  ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : 01

 

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 17.06.2016 ರಂದು ದೂರುದಾರರಾದ ಶ್ರೀ. ಜಯರಾಮರೆಡ್ಡಿ ಬಿನ್‌ ವೆಂಕಟರಾಮರೆಡ್ಡಿ. ಲಕ್ಕೇನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 16.06.2016 ರಂದು ರಾತ್ರಿ ಸುಮಾರು 7.00 ಗಂಟೆಯಲ್ಲಿ ದೂರುದಾರರ ಮಗನಾದ ವೆಂಕಟರಾಮರೆಡ್ಡಿ ರವರು ದ್ವಿಚಕ್ರ ವಾಹನ ಹೀರೋ ಪ್ಯಾಷನ್ ಪ್ರೋ ಕೆಎ-53-ಯು-0321 ರಲ್ಲಿ ಕಾಮಸಮುದ್ರಂ ಕಡೆಯಿಂದ ಲಕ್ಕೇನಹಳ್ಳಿ ಕಡೆಗೆ ಹೋಗುತ್ತಿದ್ದಾಗ, ಲಕ್ಕೇನಹಳ್ಳಿ ಕಡೆಯಿಂದ ಆರೋಪಿ ಅಪ್ಪಿ ಲಗ್ಗೇಜ್ ಆಟೋ ಎಪಿ-03-ಟಿಇ-1476 ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವೆಂಕಟರಾಮರೆಡ್ಡಿ ರವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವೆಂಕಟರಾಮರೆಡ್ಡಿಗೆ ರಕ್ತಗಾಯಗಳಾಗಿರುತ್ತದೆ.

 

 

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

 

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s