ದಿನದ ಅಪರಾಧಗಳ ಪಕ್ಷಿನೋಟ 12ನೇ ಜೂನ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 11.06.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 12.06.2016 ರಂದು  ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ : 01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 11.06.2016 ರಂದು ದೂರುದಾರರಾದ ಶ್ರೀ. ಪಾಪಣ್ಣ ಬಿನ್‌ ವೆಂಕಟೇಶಪ್ಪ, ಬಲುವನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರಿಗೂ ಮತ್ತು ಆರೋಪಿಗಳಾದ ದಮ್ಮು, ಸೀನಪ್ಪ, ಅಶೋಕಪ್ಪ, ದೇವರಾಜ್‌ ಎಂಬುವರಿಗೂ ಪೀಲವಾರ ಗ್ರಾಮದ ಜಮೀನು ಸರ್ವೇ ನಂ-96/2 ರಲ್ಲಿ  ಮಾವಿನ ತೋಪಿನ ವಿಚಾರದಲ್ಲಿ ವಿವಾದಗಳು ಇದ್ದು, ಆ ವಿಚಾರವಾಗಿ ದಿನಾಂಕ:09.06.2016 ರಂದು ಬೆಳಿಗ್ಗೆ 10:30 ಗಂಟೆಯ ಸಮಯದಲ್ಲಿ ಆರೋಪಿಗಳು  ಮಾವಿನ ತೋಪಿನ ಬಳಿ ಬಂದು ದೂರುದಾರರ ಹೆಂಡತಿ ಲಕ್ಷ್ಮಮ್ಮ ಮಕ್ಕಳಾದ ಸುಭಾಶ್ .ವೆಂಕಟೇಶ್ ರವರೂಂದಿಗೆ ಮಾವಿನ ತೋಪಿನಲ್ಲಿರುವಾಗ  ಗಲಾಟೆ ಮಾಡಿ ದೂರುದಾರರನ್ನು ಆರೋಪಿಗಳು ದೂಣ್ಣೆಯಿಂದ ಹೂಡೆದು  ರಕ್ತ ಗಾಯ ಪಡಿಸಿ, ಕಟ್ಟ ಮಾತುಗಳಿಂದ ಬೈದು, ಪ್ರಾಣಬೆದರಿಕೆ ಹಾಕಿರುತ್ತಾರೆ.

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : 02

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:11.06.2016 ರಂದು ದೂರುದಾರರಾದ ಆರ್‌. ಸತ್ಯ, ಸರ್ಕಾರಿ ಬಾಲಮಂದಿರ, ಅಧೀಕ್ಷಕರು, ಮಸ್ಕಂ, ಆಂಡ್ರಸನ್‌ಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ:07.06.2016 ರಂದು ಬೆಳಿಗ್ಗೆ 06:16 ಗಂಟೆಯ ಸಮಯದಲ್ಲಿ  ಸದರಿ ಬಾಲಮಂದಿರದಲ್ಲಿರುವ ನವಾಬ್ ಬಿನ್ ಸಿರಾಜ್.ಎಂಬುವನು ಬಾಲಮಂದಿರದ ಗೋಡೆ ಹತ್ತಿ ಹೊರಗಡೆ ದುಮುಕಿ ಪರಾರಿಯಾಗಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸ್ಸು ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 11.06.2016 ರಂದು ದೂರುದಾರರಾದ ಶ್ರೀ. ಗೋಪಿ ಬಿನ್‌ ರಾಮಚಂದ್ರಪ್ಪ, ಗಂಗಮ್ಮನಪಾಳ್ಯ, ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ. ಸುಮಾರು 10 ವರ್ಷಗಳ ಹಿಂದೆ ದೂರುದಾರರ ತಂಗಿ ಸುಜಾತ  26 ವರ್ಷ ರವರು ಉದಯ್ ಕುಮಾರ್ ರವರನ್ನು ಪ್ರೀತಿಸಿ ಮದುವೆಯಾಗಿದ್ದು, ಸಂಸಾರದ ವಿಚಾರದಲ್ಲಿ ಗಲಾಟೆಗಳಾಗಿ ಸುಮಾರು 4 ವರ್ಷಗಳಿಂದ ದೂರುದಾರರ ಮನೆಯಲ್ಲಿಯೆ ವಾಸವಿದ್ದು, ದಿನಾಂಕ 09.06.2016 ರಂದು  ಶ್ರೀಮತಿ ಸುಜಾತ ರವರು ಬೆಳಿಗಿನ ಜಾವ ಸುಮಾರು 4.00 ಗಂಟೆ ಸಮಯದಲ್ಲಿ  ಮನೆಯಲ್ಲಿ ಯಾರಿಗೂ ಹೇಳದೆ ಎಲ್ಲಿಯೋ ಹೊರಟು ಹೋಗಿರುತ್ತಾಳೆ.

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s