ಪತ್ರಿಕಾ ಪ್ರಕಟಣೆ

ನಿವೃತ್ತ  ಪೊಲೀಸ್ ಅಧಿಕಾರಿಗಳಿಗೆ ಹಾರ್ಥಿಕ ಬಿಳ್ಕೋಡುಗೆ ಕಾರ್ಯಕ್ರಮ: ನಿವೃತ್ತರ ಸೇವೆ ಶ್ಲಾಘನೀಯ, ಶ್ರೀ.  ಎಸ್ಪಿ ಭಗವಾನ್‌ದಾಸ್

ಮೇ  : 31
ಸರ್ಕಾರಿ ಸೇವೆಯಿಂದ ನಿವೃತ್ತರಾಗುವ ಅಧಿಕಾರಿ, ಸಿಬ್ಬಂದಿಗಳ ಸೇವೆಯು ಶ್ಲಾಘನೀಯವಾಗಿದ್ದು, ಅನುಭವಿ ಅಧಿಕಾರಿಗಳ ಸೇವೆ, ಆದರ್ಶಗಳನ್ನು ಇಂದಿನ ಸಮಾಜದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕೆಂದು ಕೆಜಿಎಫ್ ಪೊಲೀಸ್ ಜಿಲ್ಲಾ ರಕ್ಷಣಾಧಿಕಾರಿ ಶ್ರೀ. ಹೆಚ್.ಆರ್.ಭಗವಾನ್‌ದಾಸ್ ಅವರು ಕರೆ ನೀಡಿದರು.

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ಸುದೀರ್ಘವಾದ ಸೇವೆ ಸಲ್ಲಿಸಿ, ಮೇ.31 ರಂದು ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿಯನ್ನು ಹೊಂದಿದ ಮೂರು ಮಂದಿಗೆ ಮಂಗಳವಾರದಂದು ಕೆಜಿಎಫ್ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಆತ್ಮಿಯ ಬಿಳ್ಕೋಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಸ್ಪಿ ಶ್ರೀ. ಭಗವಾನ್‌ದಾಸ್ ಅವರು ಮಾತನಾಡಿದರು.

ಸರ್ಕಾರಿ ನೌಕರಿಯಲ್ಲೇ ಪೊಲೀಸ್ ಇಲಾಖೆಯ ನೌಕರಿಯು ಬಹಳ ವಿಶಿಷ್ಟವಾದ ಸೇವೆಯಾಗಿರುತ್ತದೆ. ಪೊಲೀಸ್ ಇಲಾಖೆಯಲ್ಲಿ ಯಾವುದೇ ತಕ್ಲೀಪುಗಳಿಲ್ಲದೇ ಸೇವೆ ಸಲ್ಲಿಸಿ, ಇಲಾಖೆಯಿಂದ ವಯೋ ನಿವೃತ್ತಿ ಮೇರೆಗೆ ನಿರ್ಗಮಿಸುವುದು ಸಹ ಒಂದು ವಿಶಿಷ್ಟ ಸಾಧನೆಯೆಂದು ಜಿಲ್ಲಾ ರಕ್ಷಣಾಧಿಕಾರಿ ಶ್ರೀ.  ಹೆಚ್.ಆರ್.ಭಗವಾನ್‌ದಾಸ್ ಅವರು ನುಡಿದರು. ನಿವೃತ್ತ ಅಧಿಕಾರಿ, ಸಿಬ್ಬಂದಿಗಳ ಮಾರ್ಗದರ್ಶನವನ್ನು ಪಡೆದು ಇಂದಿನ ಯುವಜನರು ಮುಂದುವರೆಯುವುದು ಒಳ್ಳೆಯದೆಂದು ಕರೆ ನೀಡಿದರು.

ಮೇ 31ನೇ ಮಂಗಳವಾರದಂದು ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಡಿ.ಎ.ಆರ್.ನ ಎಆರ್‌ಎಸ್‌ಐ ಟಿ. ಮನೋಗರನ್, ರಾಬರ್ಟ್‌ಸನ್‌ಪೇಟೆಯ ಮುಖ್ಯಪೇದೆ ಅಶ್ವಥನಾರಾಯಣ, ಕಾಮಸಮುದ್ರಂನ ಮುಖ್ಯಪೇದೆ ಜಹೀರ್‌ಖಾನ್ ಅವರುಗಳಿಗೆ ಶಾಲು ಹೊದಿಸಿ, ಆತ್ಮಿಯವಾಗಿ ಸನ್ಮಾನಿಸಿ, ಹಣ್ಣುಹಂಪಲು, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ವೃತ್ತ ನಿರೀಕ್ಷಕ ಎಂ.ಎಸ್. ಪವನ್‌ಕುಮಾರ್, ಜಿ.ಎನ್.ವೆಂಕಟಾಚಲಪತಿ, ಎಂ.ಡಿ. ಲಕ್ಷ್ಮೀನಾರಾಯಣ, ಎಸ್.ಆರ್.ಜಗದೀಶ್, ಎನ್.ಉಮಾಶಂಕರ್, ಕೃಷ್ಣಾ, ಟಿ.ಎಂ. ಶಿವಕುಮಾರ್, ಸಹಾಯಕ ಆಡಳಿತಾಧಿಕಾರಿ ವಿ.ವಿಶ್ವನಾಥ, ಶಾಖಾಧೀಕ್ಷಕ ಎಸ್.ಎಂ.ಬಾಲರಾಜು, ಆರ್‌ಪಿಐ ಕೆ.ಆರ್.ರಘು ಸೇರಿದಂತೆ ಜಿಲ್ಲೆಯ ಎಲ್ಲಾ ಪಿಎಸ್‌ಐಗಳು, ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು. ಪಿಎಸ್‌ಐ ರಾಘವೇಂದ್ರ ಬೈಂದೂರು ಅವರಿಂದ ಸ್ವಾಗತ, ಸಶಸ್ತ್ರ ಪೇದೆ ಭೀಮಸೇನಾ ಕಾಂಬ್ಳೆ ಅವರಿಂದ ನಿರೂಪಣೆ, ಪಿಎಸ್‌ಐ ವೈ.ಆರ್.ರಂಗಶಾಮಯ್ಯ ಅವರು ವಂದನಾಪರ್ಣೆ ಮಾಡಿರುತ್ತಾರೆ.  31KGF01.31 KGF.01

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s