ದಿನದ ಅಪರಾದಗಳ ಪಕ್ಷಿನೋಟ 31ನೇ ಮೇ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 30.05.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 31.05.2016 ರಂದು  ಬೆಳಿಗ್ಗೆ  10.00  ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಸರ್ಕಾರಿ ನೌಕರನ ಮೇಲೆ ಹಲ್ಲೆ ಮಾಡಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 30.05.2016 ರಂದು ರಾತ್ರಿ 8.30 ಗಂಟೆಯಲ್ಲಿ ದೂರುದಾರರಾದ ಶ್ರೀ. ಶಿವಶಂಕರ್‌ ಎಪಿಸಿ ರವರು ಕೆ.ಜಿ.ಎಫ್.ನ ಜನರಲ್ ಆಸ್ಪತ್ರೆಯ ಹೊರ ಠಾಣೆ (ಓಪಿ)ಯಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದಾಗ  ಆರೋಪಿ ಜಯರಾಮ ರೆಡ್ಡಿ ಕಾಲುವಲಹಳ್ಳಿ ಗ್ರಾಮ ರವರು  ಆಸ್ಪತ್ರೆಗೆ ಚಿಕಿತ್ಸೆಗೆ ಬಂದು ವೈದ್ಯರೊಂದಿಗೆ ಜೋರಾಗಿ ಕೂಗಾಡುತ್ತಾ ಗಲಾಟೆ ಮಾಡುತ್ತಿದ್ದು, ದೂರುದಾರರು ಅಲ್ಲಿಗೆ ಹೋಗಿ ಆರೋಪಿಯನ್ನು ಕುರಿತು ಈ ರೀತಿ ಆಸ್ಪತ್ರೆಯಲ್ಲಿ ಬೇರೊಬ್ಬರಿಗೆ ತೊಂದರೆ ಆಗುವ ರೀತಿಯಲ್ಲಿ ಗಲಾಟೆ ಮಾಡುವುದು ತಪ್ಪು, ಗಲಾಟೆ ಮಾಡಬೇಡಿ ಎಂದು ಹೇಳಿದಾಗ,  ಆರೋಪಿ ಜಯರಾಮರೆಡ್ಡಿ ಎಂಬುವರು ದೂರುದಾರರಿಗೆ ಕೆಟ್ಟ ಮಾತುಗಳಿಂದ ಬೈಯ್ದು ಸಮವಸ್ತ್ರವನ್ನು ಹಿಡಿದುಕೊಂಡು ಎಳೆದಾಡಿ, ಸಮವಸ್ತ್ರದ ಷರ್ಟ್  ಬಟನ್ ಗಳನ್ನು ಕಿತ್ತುಹಾಕಿ ದೂರುದಾರರ  ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿರುತ್ತಾನೆ.

-ಅಸ್ವಾಭಾವಿಕ ಮರಣ :01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:30.05.2016 ರಂದು ದೂರುದಾರರಾದ ಶ್ರೀ. ಸುನಿಲ್‌ ನಾಯಕ್‌ ಬಿನ್‌ ಮುನಿಬ್ಯಾಟಪ್ಪ, ಕರಪನಹಳ್ಳಿ ಗ್ರಾಮ ರವರ ಅಣ್ಣನಾದ ಪ್ರಸಾದ್ ನಾಯಕ ರವರಿಗೆ ಸುಮಾರು 4-5 ವರ್ಷಗಳಿಂದ ಹೊಟ್ಟೆನೋವು ಬರುತ್ತಿದ್ದು, ಮೃತನಿಗೆ ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ, ನಾಟಿ ವೈದ್ಯವನ್ನು ಸಹ ಮಾಡಿಸಿದರೂ ಹೊಟ್ಟೆ ನೋವು ವಾಸಿಯಾಗದೆ ಇದ್ದು, ಇದರಿಂದ ಪ್ರಸಾದ್‌ ನಾಯಕ್‌ ಎಂಬುವರು ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ:30.05.2016 ರಂದು ಮದ್ಯಾಹ್ನ ಸುಮಾರು 1.30 ಗಂಟೆಗೆ ಯಾವುದೋ ಕ್ರಿಮಿನಾಶಕವನ್ನು ಸೇವಿಸಿದ್ದು, ಪ್ರಸಾದ್‌ ನಾಯಕ್‌ ರವರನ್ನು ಚಿಕಿತ್ಸೆಗೆ ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರಸಾದ್‌ ನಾಯಕ್‌ ,23 ವರ್ಷ ರವರು ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s