ದಿನದ ಅಪರಾಧಗಳ ಪಕ್ಷಿನೋಟ 24 ನೇ ಮೇ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:24.05.2016ರಂದು  ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 24.05.2016  ಸಂಜೆ 05.00 ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : 01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 24.05.2016 ರಂದು ದೂರುದಾರರಾದ ಶ್ರೀ ರಾಜ ಬಿನ್‌ ಕೃಷ್ಣ, ಹಳೆ ಅಂಚೆ ಕಛೇರಿ ಬೀದಿ, ಆಂಡ್ರಸನ್‌ಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ:-12.05.2016 ರಂದು ದೂರದಾರರು ಬಜಾರ್‌ ರಸ್ತೆಯಲ್ಲಿ ಇರುವ ಆರೋಪಿ ರಿಯಾಜ್‌ ರವರ  ಅಂಗಡಿಯ ಬಳಿ ಹೋಗಿ ತನಗೆ ನೀಡಬೇಕಾದ ಕೂಲಿ ಹಣವನ್ನು ಕೇಳಿದ್ದಕ್ಕೆ ಆರೋಪಿ ರಿಯಾಜ್‌ರವರು ದೂರುದಾರರಿಗೆ ಕೆಟ್ಟಮಾತುಗಳಿಂದ ಬೈದು, ಒಂದು ಕಬ್ಬಿಣದ ರಾಡಿನಿಂದ ಹೂಡೆದು ರಕ್ತಗಾಯ ಪಡಿಸಿರುತ್ತಾರೆ.  ಈ ಕೃತ್ಯವು ಆಂಡ್ರಸನ್‌ಪೇಟೆಯ ಬಜಾರ್‌ ರಸ್ತೆಯಲ್ಲಿ ನಡೆದಿರುತ್ತದೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 24.05.2016 ರಂದು ಮಧ್ಯಾಹ್ನ ಸುಮಾರು 12.00 ಗಂಟೆ ಸಮಯದಲ್ಲಿ ದೂರುದಾರರ ಶ್ರೀ ರವಿ ಬಿನ್‌ ವೆಂಕಟೇಶಪ್ಪ, ನ್ಯೂಟೌನ್‌, ಬೇತಮಂಗಲ ರವರು ನೀಡಿದ ದೂರಿನಲ್ಲಿ ದೂರುದಾರರ ಅಣ್ಣನ ಮಗನಾದ ಮದನ್ ರಾಹುಲ್ ವಯಸ್ಸು 14 ವರ್ಷ, ಮತ್ತು ಅವರ ಸಂಬಂಧಿಕರಾದ ವಿ ಸೋಮಸುಂದರ್ ರವರ ಮಗನಾದ ತೇಜಸ್ ಗೌಡ ಸುಮಾರು 13 ವರ್ಷ, ರವರು ದೂರುದಾರರ ಜಮೀನು ಸರ್ವೆ ನಂ. 26 ರಲ್ಲಿ ತೋಟದ ಕೆಲಸ ಮುಗಿಸಿಕೊಂಡು ಮನೆಗೆ ಬರುವ ಸಮಯದಲ್ಲಿ ಕೃಷಿ ಹೊಂಡಾದ ನೀರಿನಲ್ಲಿ ಕೈಕಾಲು ತೊಳೆಯಲು ಹೋಗಿ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದು, ತೋಟದಲ್ಲಿ ಕೆಲಸ ಮಾಡುತ್ತಿದ್ದ ಶಂಕರಪ್ಪ ರವರು ಇಬ್ಬರು ಹುಡುಗರನ್ನು ಮೇಲಕ್ಕೆ ತೆಗೆದು ನೋಡಲಾಗಿ ಮೃತಪಟ್ಟಿರುತ್ತಾರೆ. ಸದರಿ ಘಟನೆಯು ಬೇತಮಂಗಲ ಪೊಲೀಸ್ ಠಾಣೆಯ ನ್ಯೂಟೌನ್ ಬಳಿ ನಡೆದಿರುತ್ತೆ. ಇತ್ಯಾದಿ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s