ದಿನದ ಅಪರಾಧಗಳ ಪಕ್ಷಿನೋಟ 22ನೇ ಮೇ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 21.05.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 22.05.2016 ರ  ಬೆಳಿಗ್ಗೆ  10.00  ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ಇಲ್ಲ

-ಹಲ್ಲೆ :ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೌರ್ಜನ್ಯ ವೆಸಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 18.05.2016 ಕ್ಕೆ 16 ವರ್ಷಗಳ ಹಿಂದೆ ದೂರುದಾರರಾದ ಶ್ರೀಮತಿ ಸಫಾಯಬಾನು ಬಿನ್ ಲೇಟ್ ಜಿ.ಚಾನ್ ಪಾಷ, ವಾಸ: 750, ಕೋಟೆ ರಸ್ತೆ, ಬಂಗಾರಪೇಟೆ ಇವರು ಇನಾಯುತುಲ್ಲಾ ಬಿನ್ ಷರೀಪ್, ವಾಸ: # 1582, ವಿಜಯನಗರ, ಬಂಗಾರಪೇಟೆ ಇವರೊಂದಿಗೆ ಇಸ್ಲಾಂ ಧರ್ಮದಂತೆ ಮದುವೆ ಆಗಿದ್ದು, ಆ ಸಮಯದಲ್ಲಿ 250 ಗ್ರಾಂ ಬಂಗಾರದ ವಡವೆಗಳು, ಬೀರು, ಮಂಚ, ವಾಷಿಂಗ್ ಮಿಷನ್, ಪ್ರೀ ಜ್, ನಿತ್ಯೋಪಯೋಗದ ವಸ್ತುಗಳನ್ನು ಕೊಟ್ಟಿದ್ದರೂ ಸಹ  ಗಂಡ ಇನಾಯುತುಲ್ಲಾ ಮತ್ತು ಇವನ ಸಂಬಂಧಿಕರಾದ ರಹಮತ್ತುಲ್ಲಾ ಬಿನ್ ಷರೀಪ್, ಹಿದಾಯುತ್ತುಲ್ಲಾ ಬಿನ್ ಷರೀಪ್, ಅಮ್ಜದ್ ಉಲ್ಲಾ ಬಿನ್ ಷರೀಪ್‌ ಮತ್ತು ಅರಿಪುಲ್ಲಾ ಬಿನ್ ಷರೀಪ್ ರವರುಗಳು ವರದಕಕ್ಷಿಣೆ ತರಲು ದೂರುದಾರರಿಗೆ ಮತ್ತು ದೂರುದಾರಳ ಮಕ್ಕಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದು,  ದಿನಾಂಕ 07.04.2016 ರಂದು ಸಂಜೆ 6.00 ಗಂಟೆಗೆ ದೂರುದಾರಳನ್ನು ಮತ್ತು ಮಕ್ಕಳನ್ನು ಹೊಡೆದು, ಸಾಯಿಸಲು ಸೀಮೆ ಎಣ್ಣೆ ಯನ್ನು ಅವರ ಮೇಲೆ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದು, ಆಗ ದೂರುದಾರಳು ಮತ್ತು ಅವಳ ಮಕ್ಕಳು ಅವರಿಂದ ತಪ್ಪಿಸಿಕೊಂಡು ತನ್ನ ತವರು ಮನೆಗೆ ಬಂದಿರುತ್ತಾರೆ.  ಪುನಃ ದಿನಾಂಕ 18.05.2016 ರಂದು ಸಂಜೆ 7.30 ಗಂಟೆಯಲ್ಲಿ ದೂರುದಾರಳು ಮತ್ತು ಅವರ ಮಕ್ಕಳು ತನ್ನ ತಾಯಿಯ ಮನೆಯಲ್ಲಿದ್ದಾಗ ಗಂಡ ಮತ್ತು ಗಂಡನ ಸಂಬಂಧಿಕರು ಆಕ್ರಮ ಗುಂಪು ಕಟ್ಟಿಕೊಂಡು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ದೂರುದಾರಳನ್ನು ಮತ್ತು ಅವರ ಮಕ್ಕಳನ್ನು ಹೊಡೆದು, ಇಲ್ಲೆ ಮುಗಿಸಿ ಬಿಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಮನುಷ್ಯ ನಾಪತ್ತೆ :ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ರಸ್ತೆ ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : 01

ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೆಕ್ಯೂರಿಟಿ ಕೇಸ್ ದಾಖಲು ಮಾಡಲಾಗಿರುತ್ತದೆ.  ದಿನಾಂಕ 21/22-05-2016 ರಂದು ರಾತ್ರಿ ಎಎಸ್‌ಐ ಶ್ರೀ ಸೋಮಶೇಖರ ರವರು ತಮ್ಮ ಸಿಬ್ಬಂದಿಯೊಂದಿಗೆ ಕಾಮಸಮುದ್ರ ಪೊಲೀಸ್ ಠಾಣೆ ಸರಹದ್ದಿನಲ್ಲಿ ರಾತ್ರಿ ವಿಶೇಷ ಗಸ್ತು ನಿರ್ವಹಿಸುತ್ತಿದ್ದಾಗ, ಬೆಳಗಿನ ಜಾವ ಸುಮಾರು 4-15 ಗಂಟೆಯಲ್ಲಿ ಕಾಮಸಮುದ್ರ ಬಸ್ ನಿಲ್ದಾಣದ ಸಮೀಪ ಇರುವ ನಂದಿನಿ ಹಾಲಿನ ಕೇಂದ್ರದ ಬಳಿ ಮರೆಯಲ್ಲಿ ಕುಳಿತಿದ್ದ ಒಬ್ಬ ಆಸಾಮಿಯು ಗಸ್ತಿನಲ್ಲಿದ್ದ ಪೊಲೀಸರನ್ನು ನೋಡಿದ ಕೂಡಲೇ ಅಲ್ಲಿಂದ ಓಡಿಹೋಗಲು ಪ್ರಯತ್ನಿದ್ದು, ಆಗ ಮೇಲ್ಕಂಡ ಪೊಲೀಸರು ಆತನನ್ನು ಹಿಡಿದು ವಿಚಾರ ಮಾಡಲಾಗಿ, ತನ್ನ ಹೆಸರು ಅಮರೇಶ್ ಬಿನ್ ಲೇಟ್ ಮುನಿರೆಡ್ಡಿ, ವಯಸ್ಸು 25 ವರ್ಷ, ರೆಡ್ಡಿ ಜನಾಂಗ, ಕೂಲಿಕೆಲಸ, ವಾಸ ಗರುಡಕೆಂಪನಹಳ್ಳಿ ಗ್ರಾಮ, ಬಲಮಂದೆ ಅಂಚೆ, ಬಂಗಾರಪೇಟೆ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಅವೇಳೆಯಲ್ಲಿ ಅಲ್ಲಿ ಇರುವಿಕೆಯ ಬಗ್ಗೆ ವಿಚಾರಣೆ ಮಾಡಲಾಗಿ ತೊದಲುತ್ತಾ, ಸಮಂಜಸವಾದ ಉತ್ತರ ನೀಡಿರುವುದಿಲ್ಲ.  ಆದ್ದರಿಂದ, ಸದರಿ ಆಸಾಮಿಯು ಕಳವು ಮಾಡುವ ಉದ್ಧೇಶದಿಂದ ಅಲ್ಲಿ ಹೊಂಚು ಹಾಕುತ್ತಿರಬಹುದೆಂಬ ಅನುಮಾನದಿಂದ ವಶಕ್ಕೆ ಪಡೆದು ಠಾಣೆಯಲ್ಲಿ ಹಾಜರುಪಡಿಸಿ ನೀಡಿದ ವರದಿ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s