ದಿನದ ಅಪರಾಧಗಳ ಪಕ್ಷಿನೋಟ 13ನೇ ಮೇ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:13.05.2016ರಂದು  ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 13.05.2016  ಸಂಜೆ 05.00 ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : 01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 12.05.2016 ರಂದು ರಾತ್ರಿ ದೂರುದಾರರಾದ ಶ್ರೀಮತಿ ಸಲ್ಮಾಸುಲ್ತಾನ ಕೋಂ ಸರದಾರ್‌ ಖಾನ್‌ ಜೆ.ಕೆ.ಪುರಂ  ರವರು  ನೀಡಿದ ದೂರಿನಲ್ಲಿ ದೂರುದಾರರ ಸ್ನೇಹಿತರಾದ ಮುಬೀನ್ ತಾಜ್ , ನಸ್ರೀನ್ ತಾಜ್, ಅಸಿನ್ ತಾಜ್ ರವರೊಂದಿಗೆ  ರಾಜಪೇಟೆ ರಸ್ತೆ – ಸೋನೇಪಲ್ಲಿ ರಸ್ತೆಯಲ್ಲಿರುವ ಮಾರುತಿ ವಿದ್ಯಾ ಸಂಸ್ಥೆಯ ಕೊಠಡಿಯಲ್ಲಿ ಕಿಟಕಿಯ ಪಕ್ಕದಲ್ಲಿ ಮಲಗಿರುವಾಗ ಯಾರೋ ಕಳ್ಳರು ದಿನಾಂಕ 13.05.2016 ರಂದು ಬೆಳಗ್ಗಿನ ಜಾವ 1.50 ಗಂಟೆಯ ಸಮಯದಲ್ಲಿ ಕಿಟಕಿಯ ಮುಖಾಂತರ  ಕತ್ತಿನಲ್ಲಿದ್ದ 12 ಗ್ರಾಂ ತೂಕದ  ಬಂಗಾರದ ಚೈನ್ ಬೆಲೆ 35,000 ರೂ ಬೆಲೆ ಬಾಳುವುದನ್ನು ಕಿತ್ತುಕೊಂಡು ಕಿಟಕಿಯ ಪಕ್ಕದಲ್ಲಿ ಇಟ್ಟಿದ್ದ SUMSANG J-1  ಮತ್ತು  LAVA ಮೊಬೈಲುಗಳನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಒಟ್ಟು  ಬೆಲೆ ಸುಮಾರು 48.500/- ರೂಗಳಾಗಿರುತ್ತೆ. ಆರೋಪಿಗಳ ಪತ್ತೆಕಾರ್ಯಕ್ಕೆ ಸಿಬ್ಬಂದಿಯನ್ನು ನೇಮಿಸಿರುತ್ತಾರೆ.

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಪ್ರವೇಶ ಮಾಡಿ ನೀಲಗಿರಿ ಮರಗಳನ್ನು ಕಠಾವು ಮಾಡಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 13.05.2016 ರಂದು ದೂರುದಾರರಾದ ಶ್ರೀ .ಶಮೀಮ್‌ ಬಿನ್‌ ಅಬ್ದುಲ್‌ ಕರೀಂ ಸಾಬ್, 4 ನೇ ಬ್ಲಾಕ್‌ ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ.19.04.2016 ರಿಂದ 21.04.2016 ರ ಮದ್ಯೆ ದೂರುದಾರಿಗೆ ಸೇರಿದ ಕೀಲುಕೊಪ್ಪಗ್ರಾಮದ ಜಮೀನು ಸರ್ವೆ ನಂ.41 ರಲ್ಲಿ  ಬೆಳೆದಿರುವ ಸುಮಾರು 3,40,000/- ರೂ ಬೆಲೆ ಬಾಳುವ  ನೀಲಗಿರಿ ಮರಗಳನ್ನು ಆರೋಪಿಗಳಾದ ಶಬೀರ್‌ ಅಹ್ಮದ್‌ ಮತ್ತು ಅಬ್ದಲ್‌ ಅಲೀಂ ರವರುಗಳು ಇತರೆ 14 ಜನರೊಂದಿಗೆ ಸೇರಿಕೊಂಡು ಉದ್ದೇಶ ಪೂರ್ವಕವಾಗಿ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಜಮೀನಲ್ಲಿದ್ದ ನೀಲಗಿರಿ ಮರಗಳನ್ನು ಕಠಾವು ಮಾಡಿ ಮಾರಾಟ ಮಾಡಿ ನಷ್ಟವುಂಟು ಮಾಡಿರುತ್ತಾರೆ.

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s