ದಿನದ ಅಪರಾಧಗಳ ಪಕ್ಷಿನೋಟ 13ನೇ ಮೇ 2106

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 12.05.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 13.05.2016 ರ  ಬೆಳಿಗ್ಗೆ  10.00  ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : 01

-ಸಾಮಾನ್ಯ ಕಳುವು :ಇಲ್ಲ

-ದೊಂಬಿ 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಪ್ರವೇಶ ಮಾಡಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 11-05-2016 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ  ದೂರುದಾರರಾದ ಶ್ರೀ. ಶ್ರೀರಾಮರೆಡ್ಡಿ ಬಿನ್‌ ಮುನಿಸ್ವಾಮಿ ರೆಡ್ಡಿ  ವೀರಸಂದ್ರ ಗ್ರಾಮ ರವರು ವೀರಸಂದ್ರ ಗ್ರಾಮದ ಸ.ನಂ. 17/1 ರ ಜಮೀನಿನಲ್ಲಿನ ಹುಣಸೆ ಮರದಲ್ಲಿ  ಆರೋಪಿ  ರಾಮಕೃಷ್ಣಾರೆಡ್ಡಿ ರವರು ಹುಣಸೆ ಕಾಯಿಗಳನ್ನು ಉದುರಿಸಲು ಪ್ರಯತ್ನಿಸುತ್ತಿದ್ದಾಗ ಅದನ್ನು ಕಂಡು ದೂರುದಾರರು  ಕೇಳಿದ್ದಕ್ಕೆ ಆರೋಪಿಗಳು  ಅಕ್ರಮಕೂಟ ಕಟ್ಟಿಕೊಂಡು ಜಮೀನೊಳಗೆ ಅತಿಕ್ರಮ ಪ್ರವೇಶ ಮಾಡಿ  ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹೊಡೆದು ರಕ್ತ ಗಾಯಪಡಿಸಿ  ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಮೋಸ: ‌ಇಲ್ಲ

-ಹಲ್ಲೆ : 2

ಆಂಡ್ರಸನ್‌ಪೇಟೆ ಪೊಲ್ಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.12.05.2016 ರಂದು ಮದ್ಯಾಹ್ನ 2.30 ಗಂಟೆಗೆ ದೂರುದಾರರಾದ ಶ್ರೀ. ಕಣ್ಣನ್‌ ಬಿನ್‌ ವೆಂಕಟಸ್ವಾಮಿ, ಅಂದ್ರಲೈನ್‌  ಅಂಡ್ರಸನ್‌ಪೇಟೆ ರವರು  ನೀಡಿದ ದೂರಿನಲ್ಲಿ ದೂರುದಾರರು ಕೆಲಸ ಮುಗಿಸಿಕೊಂಡು  ಆಂಧ್ರಲೈನ್ ನಲ್ಲಿರುವ ಅವರ ವಾಸದ  ಮನೆಗೆ ಬರುತ್ತಿದ್ದಾಗ, ಆರೋಪಿಯಾದ ರವಿ ಎಂಬಾತನು ಲೈನಿನಲ್ಲಿ ಕೂಗಾಡುತ್ತಿದ್ದು, ಅದನ್ನು ಕಂಡು ದೂರುದಾರರು ಏಕೆ ಲೈನಿನಲ್ಲಿ ಕೂಗಾಡುತ್ತಿದ್ದಿಯಾ ಎಂತ ಕೇಳಿದ್ದಕ್ಕೆ ಆರೊಪಿಯು ದೂರುದಾರರನ್ನು ಕೆಟ್ಟ ಮಾತುಗಳಿಂದ ಬೈದು, ಗಲಾಟೆ ಮಾಡಿ  ಕಲ್ಲಿನಿಂದ  ತಲೆಯ ಮೇಲೆ ಹೊಡೆದು ರಕ್ತಗಾಯ ಪಡೆಸಿರುತ್ತಾರೆ.

ಆಂಡ್ರಸನ್‌ಪೇಟೆ ಪೊಲ್ಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 12.05.2016 ರಂದು ಸಂಜೆ 5.00 ಗಂಟೆಯ ಸಮಯದಲ್ಲಿ ದೂರುದಾರರಾದ ಶ್ರೀ, ರವಿಕುಮಾರ್‌ ಅರಳಪ್ಪ,  2ನೇ ಕ್ರಾಸ್‌, ಅಮರಾವತಿ ನಗರ ಬಂಗಾರಫೇಟೆ ರವರು ನೀಡಿದ ದೂರಿನಲ್ಲಿ ದೂರುದಾರರು ಮತ್ತು ಅವರ ಸಹದ್ಯೋಗಿಗಳಾದ ತಿಮ್ಮರಾಯಸ್ವಾಮಿ ಮತ್ತು ಯಶ್ವಂತ್ ಕುಮಾರ್ ರವರುಗಳು ಲೂರ್ದನಗರದ ಚೆರ್ಚ ಬಳಿ ಹೋಗಿ ಆರೋಪಿಯ ಹತ್ತಿರ ದೂರುದಾರರು ಹೋಗಿ  12 ಜನರ ವಿಳಾಸವನ್ನು ಕೇಳಲಾಗಿ ಆರೋಪಿಯು ನಿವ್ಯಾರೋ ನನ್ನ  ಬಳಿ ವಿಳಾಸ ಕೇಳುವುದಕ್ಕೆ  ಎಂದು  ವಿನಾಕಾರಣ ಗಲಾಟೆ ಮಾಡಿ ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ದೂರುದಾರರ ಜೊತೆಯಲ್ಲಿದ್ದ ತಿಮ್ಮರಾಯಸ್ವಾಮಿರವರ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಪಡೆಸಿರುತ್ತಾರೆ.

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ :ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s