ಪತ್ರಿಕಾ ಪ್ರಕಟಣೆ

ಪತ್ರಿಕಾ ಪ್ರಕಟಣೆ

     ಕೆಜಿಎಫ್ : ಪೊಲೀಸ್ ಜಿಲ್ಲೆಯಲ್ಲಿ ಕಳುವಾಗಿದ್ದ, ಚಿನ್ನಾಭರಣಗಳನ್ನು ವಾರಸುದಾರರ ವಶಕ್ಕೆ. ಶ್ರೀ. ಹೆಚ್ ಆರ್. ಭಗವಾನ್‌ದಾಸ್ ಎಸ್ಪಿ ರವರು ವಾಪಸು ನೀಡಿರುವ ಬಗ್ಗೆ.

ಕಳೆದ ಆರು ತಿಂಗಳ ಹಿಂದೆ ಕಳುವಾಗಿದ್ದ ಚಿನ್ನಾಭರಣಗಳು ಪತ್ತೆಯಾಗಿ ಪ್ರಸ್ತುತ ವಾರಸುದಾರರ ವಶಕ್ಕೆ ಒಪ್ಪಿಸಿರುವುದಾಗಿ ಕೆ.ಜಿ.ಎಫ್ ಜಿಲ್ಲೆ ಪೊಲೀಸ್ ವರಿಷ್ಪಾಧಿಕಾರಿ ಶ್ರೀ. ಹೆಚ್.ಆರ್. ಭಗವಾನ್‌ದಾಸ್ ಅವರು ತಿಳಿಸಿದರು.

ಅವರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ವಶಪಡಿಸಿಕೊಂಡಿದ್ದ ಚಿನ್ನಾಭರಣಗಳನ್ನು ವಾರಸುದಾರರಿಗೆ ಪೊಲೀಸ್ ವರಿಷ್ಪಾಧಿಕಾರಿ ಶ್ರೀ. ಹೆಚ್.ಆರ್ ಭಗವಾನ್‌ದಾಸ್ ವಿತರಿಸಿದರು.

ಕಳೆದ ಡಿಸೆಂಬರ್ 11 ರಂದು ರಾಬರ್ಟ್‌ಸನ್‌ಪೇಟೆಯ ತವಮಣಿ ಕಾಂಪೌಂಡ್ ನಿವಾಸಿ ಜೆ. ಸುರೇಶ್ ಬಾಬು ಎಂಬುವರ ಮನೆಗೆ ಅಪರಿಚಿತರು ಜ್ಯೋತಿಷ್ಯ ಹೇಳುವ ನೆಪದಲ್ಲಿ ಬಂದು ಚಿನ್ನಾಭರಣಗಳಿಗೆ ಪೂಜೆ ಮಾಡುವ ನೆಪದಲ್ಲಿ ಸುಮಾರು 36 ಗ್ರಾಂ ತೂಕದ ಚಿನ್ನದ ಸರ, ಚಿನ್ನದ ಉಂಗುರಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುತ್ತಾರೆ.

ಈ ಸಂಬಂಧ ರಾಬರ್ಟ್‌ಸನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಾದ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕೆ ಮರಿಯಪ್ಪನ್, ಎ. ಅಳಗಿರಿ ಎಂಬುವರನ್ನು ಪತ್ತೆ ಮಾಡಿ ಬಂಧಿಸಿ ಅವರಿಂದ 36 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.

ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವುಲ್ಲಿ ಯಶಸ್ವಿಯಾದ ರಾಬರ್ಟ್‌ಸನ್‌ಪೇಟೆ ಸಿಪಿಐ, ಎಸ್. ಆರ್. ಜಗದೀಶ್, ಪಿಎಸ್‌ಐ ರಂಗಸಾಮಯ್ಯ, ವೆಂಟಕಕೃಷ್ಣ ಮತ್ತು ಸಿಬ್ಬಂದಿಗಳ ಕಾರ್ಯವೈಕರಿಯನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀ. ಹೆಚ್. ಆರ್. ಭಗವಾನ್‌ದಾಸ್ ಅವರು ಪ್ರಶಂಶಿಸಿರುತ್ತಾರೆ.

DSC00544DSC00544

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s