ದಿನದ ಅಪರಾಧಗಳ ಪಕ್ಷಿನೋಟ 29ನೇ ಏಪ್ರಿಲ್ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 28.04.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 29.04.2016 ರ  ಬೆಳಿಗ್ಗೆ  10.00  ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ :ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಯ ಪೊಲೀಸ್ ಪೇದೆ ರಾಮಕೃಷ್ಣ ಅವರ ವಿರುದ್ದ ಪತ್ನಿ ಅಶ್ವಿನಿ ದೂರಿನನ್ವಯ  ಕ್ರಿಮಿನಲ್ ಪ್ರಕರಣವು ದಾಖಲಾಗಿದೆ.

ಬೇತಮಂಗಲ ಸರಹದ್ದು ಗುಟ್ಟಹಳ್ಳಿ (ಬಂಗಾರುತಿರುಪತಿ) ಗ್ರಾಮದ ನಿವಾಸಿ ಅಶ್ವಿನಿ ಕೋಂ: ರಾಮಕೃಷ್ಣ ಎಂಬುವರಿಗೆ ಸುಮಾರು ಒಂದೂವರೇ ವರ್ಷಗಳ ಹಿಂದೆ ರಾಮಕೃಷ್ಣ ಅವರೊಂದಿಗೆ ಮದುವೆಯಾಗಿದ್ದು, ಮದುವೆಯಾದ ಹೊಸದರಲ್ಲಿ ಅಶ್ವಿನಿ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ರಾಮಕೃಷ್ಣ ಅವರು ಕೋಲಾರದ ಸಾರಿಗೆ ನಗರದಲ್ಲಿ ಬಾಡಿಗೆ ಮನೆ ಮಾಡಿಟ್ಟು, ಮನೆಯೊಳಗೆ ಸಿಸಿ ಕ್ಯಾಮೆರಾವನ್ನು ಅಳವಡಿಸಿ, ಮನೆಯಲ್ಲಿ ಅಶ್ವಿನಿ ಅವರು ಒಬ್ಬಂಟಿಯಾಗಿ ಇದ್ದಾಗ, ಅಪರಿಚಿತ ಯುವಕನನ್ನು ಮನೆಗೆ ಕಳುಹಿಸಿ ತನ್ನ ಮೇಲೆ ಅತ್ಯಾಚಾರ ಮಾಡಲು ಪ್ರೇರೆಪಿಸಿರುವುದಾಗಿ, ಮದುವೆ ಕಾಲದಲ್ಲಿ ನೀಡಿದ್ದ ವರದಕ್ಷಿಣೆ ಹಣವು ಸಾಲದೆಂದು ಪ್ರಸ್ತುತ ಇನ್ನೂ ಐದು ಲಕ್ಷ ರೂಪಾಯಿ ನಗದು ತರುವಂತೆ ಸಿಪಿಸಿ ರಾಮಕೃಷ್ಣ ಒತ್ತಡ ತಂದಿದ್ದು, ಮದುವೆಯಾದಾಗಿನಿಂದಲೂ ಅಶ್ವಿನಿ ಹಾಗೂ ಆಕೆಯ ಮಗಳ ಹೆಸರನ್ನು ತನ್ನ ಸೇವಾ ಪುಸ್ತಕದಲ್ಲಿ ನಮೂದಿಸದೇ ಇದ್ದು, ಇವೆಲ್ಲವನ್ನು ಪ್ರಶ್ನಿಸುತ್ತಿದ್ದ ಅಶ್ವಿನಿ ಅವರ ಮೇಲೆ ದಿನನಿತ್ಯ ದೈಹಿಕವಾಗಿ, ಮಾನಸಿಕವಾಗಿ ದೌರ್ಜನ್ಯ ನಡೆಸಿ, ಮದುವೆ ಕಾಲದಲ್ಲಿ ನೀಡಿದ್ದ ವರದಕ್ಷಿಣೆ ಹಣವು ತನಗೆ ಸಾಲದೆಂದು ಪ್ರಸ್ತುತ ತನ್ನ ವಿರುದ್ದ ಇರುವಂತಹ ರೈಸ್‌ಪುಲ್ಲಿಂಗ್ ಕೇಸನ್ನು ಗೆಲ್ಲಲು ಇನ್ನೂ ಐದು ಲಕ್ಷ ರೂಪಾಯಿ ನಗದು ವರದಕ್ಷಿಣೆಯಾಗಿ ತರುವಂತೆ ಸಿಪಿಸಿ ರಾಮಕೃಷ್ಣ ಒತ್ತಡ ತಂದು, ಅಶ್ವಿನಿ ಹಾಗೂ ಮಗುವನ್ನು ಏ.೩ ರಂದು ತವರು ಮನೆಗೆ ಕಳುಹಿಸಿರುವುದಾಗಿ, ಅಲ್ಲದೇ ಇತ್ತೀಚೆಗೆ ಗುಟ್ಟಹಳ್ಳಿಯಲ್ಲಿನ ಅಶ್ವಿನಿ ಅವರ ತವರು ಮನೆಯ ಬಳಿ ಹೋಗಿ ವರದಕ್ಷಿಣೆಗಾಗಿ ದೌರ್ಜನ್ಯ, ದಬ್ಬಾಳಿಕೆ ನಡೆಸಿ, ವರದಕ್ಷಿಣೆ ತರದೇ ಪುನಹ ವಾಪಸ್ಸು ಬಂದಲ್ಲಿ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿರುವುದಾಗಿ ಅಶ್ವಿನಿ ಕೋಂ. ರಾಮಕೃಷ್ಣ ಅವರು ನೀಡಿದ ದೂರಿನನ್ವಯ ಪೊಲೀಸ್ ಪೇದೆ ರಾಮಕೃಷ್ಣ ವಿರುದ್ದ ಬೇತಮಂಗಲ ಪಿಎಸ್‌ಐ ಬಿ.ಟಿ. ಗೋವಿಂದ ಅವರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು :  ಇಲ್ಲ

 

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s