ದಿನದ ಅಪರಾಧಗಳ ಪಕ್ಷಿನೋಟ 24ನೇ ಏಪ್ರಿಲ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 24.04.2016 ರಂದು ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 24.04.2016 ರ ಸಂಜೆ  05.00   ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ :ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

– ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :  01

ಬೇತಮಂಗಲ  ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕದರಿಗಾನಕುಪ್ಪ ಕ್ರಾಸ್‌ ಬಳಿ ಸಂಭವಿಸಿರುತ್ತದೆ. ದಿನಾಂಕ: 23-04-2016 ರಂದು  ಶ್ರೀ. ಕಣ್ಣನ್‌ ಬಿನ್‌ ಮುನಿಸ್ವಾಮಿ, ಕವಲ್‌ ಸ್ಟ್ರೀಟ್‌,   ಸಾಲಪಟ್ಟಿ, ಪ್ಯಾರನಾಂಭಟ್‌, ತಮಿಳುನಾತು ವಾಸಿರವರು ತನ್ನ ಮೋಟಾರು ಸೈಕಲ್ ನಂ: ಟಿ.ಎನ್.21 ಎ.ಎಂ. -5968 ರಲ್ಲಿ ಅವರ ಸಂಭಂದಿಕರಾದ ನಿಧಿ ಅರಸನ್ ರವರನ್ನು ಆತನ ಮೋಟಾರು ಸೈಕಲ್ ಹಿಂಬದಿಯ್ಲಿ ಕುಳ್ಳರಿಸಿಕೊಂಡು ಕೆ.ಜಿ.ಎಫ್. ನಿಂದ ಪ್ಯಾರನಾಂಭಟ್ ಗೆ ಹೋಗಲು ಸಂಜೆ ಸುಮಾರು 4-30 ಗಂಟೆ ಸಮಯದಲ್ಲಿ ವಿ.ಕೋಟೆ – ಕೆ.ಜಿ.ಎಫ್. ಮುಖ್ಯ ರಸ್ತೆಯ ಕದರಿಗಾನಕುಪ್ಪ ಕ್ರಾಸಿನ ಬಳಿ ಹೋಗುತ್ತಿದ್ದಾಗ ವಿ.ಕೋಟೆ ಕಡೆಯಿಂದ ಬೇತಮಂಗಲದ ಕಡೆಗೆ ತಮಿಳುನಾಡು ಸಾರಿಗೆ ಬಸ್ ಸಂ: ಟಿ.ಎನ್.23 ಎನ್-2217 ರ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ದೂರುದಾರರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಫಿರ್ಯಾದಿ ಮತ್ತು ಹಿಂಬದಿಯಲ್ಲಿ ಕುಳಿತಿದ್ದ್ ಸವಾರನು ಗಾಡಿಯ ಸಮೇತ ರಸ್ತೆಯ ಮೇಲೆ ಬಿದ್ದಾಗ ಫಿರ್ಯಾದಿಯ ಎಡ ಮೊಣಕಾಲಿನ ಬಳಿ ಎಡಕಾಲಿನ ಪಾದದ ಬಳಿ, ಎಡ ಮೊಣಕೈಗೆ ರಕ್ತಗಾಯಗಳಾಗಿದ್ದು, ಎಡಭುಜದ ಬಳಿ ಮತ್ತು ಎದೆಯ ಬಳಿ ಊತಗಾಯಗಳಾಗಿರುತ್ತೆ. ಹಿಂದಿಯ ಸವಾರನಿಗೆ ಎಡಭುಜ, ಎಡ ಪಕ್ಕೆಲುಬು, ಎಡಕಾಲಿನ ಪಾದದ ಬೆರಳುಗಳ ಬಳಿ, ಎಡ ಮೊಣಕೈ ಮೇಲೆ ರಕ್ತಗಾಯಗಳಾಗಿರುತ್ತೆ.

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : 01

ಚಾಂಪಿಯನ್‌ ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಎನ್‌.ಐ.ಆರ್‌.ಎಂ. ಆಫೀಸ್‌ ಬಳಿ ನಡೆದಿರುತ್ತದೆ.    ದಿನಾಂಕ:24-04-2016 ರಂದು ಬೆಳಿಗ್ಗೆ 6-30 ಗಂಟೆಗೆ  ದೂರುದಾರರಾದ ಶ್ರೀಮತಿ. ಜುಲಿಯಾ ಬಿನ್‌ ಮೋಹನ್‌,  ಹೆಚ್‌. ಬ್ಲಾಕ್‌, ಚಾಂಪಿಯನ್‌ ರೀಫ್ಸ್‌, ಕೆ.ಜಿ.ಎಫ್‌ ರವರ ಪತಿಯಾದ ಶ್ರೀ.ಮೋಹನ್‌ ರವರು ಎನ್.ಐ.ಆರ್.ಎಂ. ಬಂಗ್ಲೋ ಬಳೀ ಸೆಕ್ಯೂರಿಟಿ ಕೆಲಸಕ್ಕೆಂದು ಹೋದವರು ಎನ್.ಐ.ಆರ್.ಎಂ ಬಂಗ್ಲಾ ಬಳಿ ತಲೆ ಚಕ್ಕರ್ ಬಂದು ಕೆಳಗೆ ಕುಸಿದು  ಬಿದಿದ್ದು,  ಮೋಹನ್‌ ರವರ ಜೊತೆಯಲ್ಲಿ ಕೆಲಸ ನಿರ್ವಹಿಸುವ ಆರ್ಮುಗಂ ಎಂಬುವರು   ಚಿಕಿತ್ಸೆ ಸಲುವಾಗಿ ರಾಜೇಂದ್ರ ಕುಮಾರ್ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದು  ವೈದ್ಯರು ರಾ.ಪೇಟೆ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದು ಅದರಂತೆ ಮೋಹನ್ ರವರನ್ನು ರಾ.ಪೇಟೆ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಬಳಿ ತೋರಿಸಲಾಗಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s