ದಿನದ ಅಪರಾಧಗಳ ಪಕ್ಷಿನೋಟ 21 ನೇ ಏಪ್ರಿಲ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 20.04.2016 ರಂದು  ಸಂಜೆ  05.00 ಗಂಟೆಯಿಂದ ದಿನಾಂಕ 21.04.2016 ರ  ಬೆಳಿಗ್ಗೆ  10.00   ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 02

ಕಾಮಸಮುದ್ರಂ ಪೊಲೀಸ್‌ ಠಾಣೆ ಸರಹದ್ದಿನಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.ದಿನಾಂಕ 20.04.2016 ರಂದು ದೂರುದಾರರಾದ ಶ್ರೀ. ವಿಜಯಕುಮಾರ್‌ ಬಿನ್‌ ವೆಂಕಟಸ್ವಾಮಿ, ಮಾಲೂರು ರವರು  ನೀಡಿದ ದೂರಿನಲ್ಲಿ ದಿನಾಂಕ 12.04.2016 ರಂದು ಬೆಳಿಗ್ಗೆ ಸುಮಾರು 9.15 ಗಂಟೆಯಲ್ಲಿ ದೂರುದಾರರು ದ್ವಿಚಕ್ರ ವಾಹನ ಹೀರೋ ಸ್ಪ್ಲೆಂಡರ್ ಪ್ರೋ ಸಂಖ್ಯೆ TN-70-Q-2611 ರ ಹಿಂಭಾಗದಲ್ಲಿ ಚಂದ್ರಶೇಖರ್ ಎಂಬುವರನ್ನು ಕುಳ್ಳರಿಸಿಕೊಂಡು ಮರಾಠಾ ಹೊಸಹಳ್ಳಿ ಕಡೆಯಿಂದ ಬೇರಿಕೈ ಕಡೆಗೆ ಹೋಗಲು ಗುಟ್ಟಹಳ್ಳಿ ಬಳಿ ರಸ್ತೆಯ ಎಡಭಾಗದಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬೇರಿಕೆ ಕಡೆಯಿಂದ ಆರೋಪಿಯು ಮಹೀಂದ್ರಾ Pickup ಸಂಖ್ಯೆ TN-29-AY-4891 ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿಜಯಕುಮಾರ್‌  ಮತ್ತು ಚಂದ್ರಶೇಖರ್ ಇಬ್ಬರೂ ವಾಹನ ಸಮೇತ ಕೆಳಗೆ ಬಿದ್ದಿದ್ದರಿಂದ  ಚಂದ್ರಶೇಖರ್‌ ರವರಿಗೆ   ರಕ್ತಗಾಯವಾಗಿರತ್ತೆ.

ಚಾಂಪಿಯನ್‌‌ರೀಫ್ಸ್‌ ಪೊಲೀಸ್‌ ಠಾಣೆ ಸರಹದ್ದಿನಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 20.04.2016 ರಂದು ದೂರುದಾರರಾದ ಶ್ರೀ.ನಾರಾಯಣಕುಟ್ಟಿ ಬಿನ್‌ ತಮಿಳ್‌ ನಾಯರ್‌, ಆಂಡ್ರಸನ್‌ಪೇಟೆ ರವರು ನೀಡಿದ ದೂರಿನಲ್ಲಿ  ದಿನಾಂಕ: 13.03.2016 ರಂದು ರಾತ್ರಿ ದೂರುದಾರರ ಮಗನಾದ ರಾಜೇಶ್, 37 ವರ್ಷ ಎಂಬುವನು ಬೆಮಲ್ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುವವಾಗ ಹಿರೋ ಹೋಂಡಾ ಸಿ.ಡಿ. 100 ದ್ವಿಚಕ್ರ ವಾಹನ ಸಂಖ್ಯೆ. ಕೆಎ04-ಡಬ್ಲು-6880 ರಲ್ಲಿ ರಾತ್ರಿ ಸುಮಾರು 08.00 ಗಂಟೆಯಲ್ಲಿ ಟಾಪ್ ಲೈನ್ ರಸ್ತೆಯಲ್ಲಿ ವಾಹನ ಚಲಾಯಿಸಿಕೊಂಡು ಬರುತ್ತಿದ್ದಾಗ ಆಯತಪ್ಪಿ ಸ್ಕಿಡ್ ಆಗಿ ವಾಹನ ಸಮೇತ ಕೆಳಗೆ ಬಿದ್ದಿದ್ದು ಆಗ ರಾಜೇಶ್ ಗೆ ತಲೆಯ ಮುಂಭಾಗ, ಹಣೆಗೆ, ಕೈ ಮತ್ತು ಕಾಲುಗಳಿಗೆ ತರುಚಿದ ಗಾಯಗಳಾಗಿದ್ದು, ಆಗ ಕೆ.ಜಿ.ಎಫ್ ಜನರಲ್ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾನೆ.  ನಂತರ ಗಾಯಗಳು ವಾಸಿ ಮಾಡಿಕೊಂಡು ಕೆಲಸಕ್ಕೆ ಹೋಗುತ್ತಿದ್ದು,  ದಿನಾಂಕ: 19.04.2016 ರಂದು ಬೆಳಗ್ಗೆ ತಲೆ ನೋಯುತ್ತಿದೆ ಎಂದು ಹೇಳುತ್ತಿದ್ದವನು ಪ್ರಜ್ಞಾಹೀನನಾಗಿದ್ದು ತಕ್ಷಣ ಚಿಕಿತ್ಸೆ ಸಲುವಾಗಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಆಗ ವೈದ್ಯರ ಬಳಿ ಈ ಹಿಂದೆ ದಿನಾಂಕ: 15.03.2016 ರಂದು ದ್ವಿ ಚಕ್ರ ವಾಹನದಲ್ಲಿ  ಬಿದ್ದಿದ್ದ ವಿಷಯವನ್ನು ತಿಳಿಸಿರುತ್ತಾರೆ. ಮೃತ  ರಾಜೇಶ್ ದಿನಾಂಕ: 20.04.2016 ರಂದು ಸಂಜೆ ಸುಮಾರು 04.30 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ.

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s