ದಿನದ ಅಪರಾಧಗಳ ಪಕ್ಷಿನೋಟ 18 ನೇ ಏಪ್ರಿಲ್‌ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 18.04.2016 ರಂದು  ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 18.04.2016 ರ  ಸಂಜೆ 05.00   ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 18.04.2016 ರಂದು ದೂರುದಾರರಾದ ಶ್ರೀ.  ಮದನ್‌ಲಾಲ್‌ ಬಿನ್‌ ಬಾಬುಲಾಲ್‌ , ಸಂದರಪಾಳ್ಯ ಗ್ರಾಮ ರವರು ನ್ಯಾಯಾಲಯದಲ್ಲಿ ನೀಡಿದ ದೂರಿನಲ್ಲಿ ದೂರುದಾರರಾದ  ಮದನ ಲಾಲ್ ರವರ ಬಳಿ ಆರೋಪಿ ನರೇಶ್‌ ಮತ್ತು ಇತರರು  ದಿನಾಂಕ. 31.08.2013 ರಂದು ವಾರ್ಷಿಕವಾಗಿ ಶೇಖಡ.24 ರಷ್ಟು ಬಡ್ಡಿಯಂತೆ 1 ಲಕ್ಷ ರೂ ಗಳನ್ನು ಚೆಕ್ ಸಂ. 669892 ರನ್ನು ನೀಡಿ ಸಾಲವನ್ನು ಪಡೆದುಕೊಂಡಿದ್ದು, ದೂರುದಾರರು ದಿ.13.01.2014 ರಂದು ಎಸ್.ಬಿ.ಎಂ ಸುಂಧರಪಾಳ್ಯ ಶಾಖೆಯಲ್ಲಿ ಖಾತೆ ಸಂ 64066030352 ರನ್ನು ಹೊಂದಿದ್ದು ಆರೋಫಿಯ ಚೆಕ್ಕನ್ನು ಹಣ ಸ್ವೀಕೃತಿಗಾಗಿ ಬ್ಯಾಂಕಿಗೆ ಹಾಕಿದಾಗ ಸದರಿಯವರ ಚೆಕ್ಕನ್ನು ಸಪ್ತಗಿರಿ ಗ್ರಾಮೀಣ ಬ್ಯಾಂಕ್ ಓಗು ಶಾಖೆ ವಿಕೋಟೆ ಮಂಡಲಂ ಕಳೂಹಿಸಿದಾಗ ಸದರಿ ಚೆಕ್ ನಕಲಿಯಾಗಿದ್ದು, ಇದರ ಬಗ್ಗೆ ದೂರುದಾರರು ಎಸ್.ಎ 100/2014 ರೀತ್ಯ ನೋಟಿಸ್ ಕಳೂಹಿಸಿದ್ದು ಆದರೆ ಆರೋಪಿಯು ದೂರುದಾರರಿಗೆ ಸಾಲದ ಹಣ ಮತ್ತು ಬಡ್ಡಿಯನ್ನು ನೀಡದೆ ನಕಲಿ ಚೆಕ್ಕನ್ನು ಕೊಟ್ಟು ಮೋಸ ಮಾಡಿ  ಕೈಗಳಿಂದ ಹೊಡೆದು ಕೆಟ್ಟ ಮಾತುಗಳಿಂದ ಬೈದು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರ.

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲೆ ದೌರ್ಜನ್ಯ ಪ್ರಕಣ ದಾಖಲಾಗಿರುತ್ತದೆ. ದಿನಾಂಕ 18.04.2016 ರಂದು ದೂರುದಾರರಾದ ಶ್ರೀಮತಿ ಧಿವ್ಯ ಕೊಂ. ಚೇತನ್‌‌ ಕುಮಾರ್‌ ಮುದುಗೂಳಿ ಗ್ರಾಮ ರವರು ನೀಡಿದ ದೂರಿನಲ್ಲಿ ಈಗ್ಗೆ ಸುಮಾರು ಹನ್ನೊಂದು ತಿಂಗಳ ಹಿಂದೆ ದೂರುದಾರರು  ಆರೋಪಿ ಚೇತನ್‌ ಕುಮಾರ್‌ ರವರೊಂದಿಗೆ ಮದುವೆಯಾಗಿ ಇಬ್ಬರೂ ಅನ್ಯೋನ್ಯವಾಗಿ ಜೀವನ ಮಾಡಿಕೊಂಡಿದ್ದು, ಈಗ್ಗೆ ಸುಮಾರು ಹತ್ತು ತಿಂಗಳಿನಿಂದ ಆರೋಪಿ ಚೇತನ್‌ ಮತ್ತು  ತಾಯಿ ಮುನಿಯಮ್ಮ ರವರು ಸಂಸಾರದ ವಿಚಾರದಲ್ಲಿ ದೂರುದಾರರೊಂದಿಗೆ ಜಗಳ ಕಾದು, ಕೆಟ್ಟ ಮಾತುಗಳಿಂದ ಬೈದು ಹೊಡೆದಿದ್ದು,  ತವರುಮನೆಯಿಂದ ವರದಕ್ಷಿಣೆಯಾಗಿ 50,000/-ರೂ ಹಣ ಮತ್ತು ಚಿನ್ನದ ವಡವೆಗಳನ್ನು ತರುವಂತೆ ಒತ್ತಾಯ ಮಾಡುತ್ತಿದ್ದು, ದಿನಾಂಕ 16.04.2016 ರಂದು ರಾತ್ರಿ ಮತ್ತೆ ತವರುಮನೆಯಿಂದ ವರದಕ್ಷಿಣೆಯಾಗಿ ಹಣ ಮತ್ತು ಚಿನ್ನದ ವಡವೆಗಳನ್ನು ತರುವಂತೆ ಗಲಾಟೆ ಮಾಡಿರುತ್ತಾರೆ.

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : 01

ಆಂಡ್ರಸನ್‌‌ಪೇಟೆ  ಪೊಲೀಸ್‌ ಠಾಣೆಯಲ್ಲಿ ಅಸ್ವಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 18.04.2016 ರಂದು ದೂರುದಾರರಾದ ಶ್ರೀ ಅನಂದ ಬಿನ್‌ ವೆಂಕಟೇಶಪ್ಪ ಕ್ಯಾಸಂಬಳ್ಳಿ ಗ್ರಾಮ ರವರು ನೀಡದ ದೂರಿನಲ್ಲಿ ದಿನಾಂಕ:18.04.2016 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಸುಮಾರು 60 ವರ್ಷ ವಯಸ್ಸಿನ ಅನಾಮಧೇಯ ಹೆಂಗಸ್ಸು ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಮಜರಾ ರಾಮಪುರ ಬಳಿ  ಕೆರೆಯ ನೀರಿನಲ್ಲಿ ಬಿದ್ದು ಮೃತಪಟ್ಟಿರುತ್ತಾರೆ. ಮೃತ ದೇಹವನ್ನು ರಾಬರ್ಟ್‌‌ಸನ್‌ಪೇಟೆ ಜನರಲ್‌ ಅಸ್ಪತ್ರೆಯ ಶವಗಾರದಲ್ಲಿ ಇಟ್ಟಿರುತ್ತಾರೆ.

 

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s