ದಿನದ ಅಪರಾಧಗಳ ಪಕ್ಷಿನೋಟ 18 ನೇ ಏಪ್ರಿಲ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 17.04.2016 ರಂದು  ಸಂಜೆ 5.00 ಗಂಟೆಯಿಂದ ದಿನಾಂಕ 18.04.2016 ರ  ಬೆಳಗ್ಗೆ 10.00   ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 17.04.2016 ರಂದು ದೂರುದಾರರಾದ ಶ್ರೀ ಅಬ್ದುಲ್‌ ಮಜೀದ್‌ ಬಿನ್‌ ಅಮೀದ್‌,  ರೆಡ್ಡಿ ಲೇಔಟ್‌‌, ರಾಬರ್ಟ್‌‌ಸನ್‌‌ಪೇಟೆ ರವರು  ನೀಡಿದ  ದೂರಿನಲ್ಲಿ ದಿನಾಂಕ 16.04.2016 ರಂದು ರಾತ್ರಿ 07.30 ಗಂಟೆಯ ಸಮಯದಲ್ಲಿ ದೂರುದಾರರು ರೆಡ್ಡಿ ಲೇಔಟ್ ನಲ್ಲಿರುವ ಉಮ್ಮರ್ ರವರ ಮನೆಯ ಬಳಿ ಹೋದಾಗ,  ಆರೋಪಿ ನೂರ್ ಎಂಬುವರ ಕೈಯಲ್ಲಿದ್ದ ಕಬ್ಬಿಣದ ಕಂಬಿಯಿಂದ ದೂರುದಾರರಾದ ಅಬ್ದುಲ್‌ ಮಜೀದ್‌ ರವರಿಗೆ ತಲೆಗೆ  ಹೊಡೆದು ರಕ್ತಗಾಯ ಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :03

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 17.04.2016 ರಂದು ದೂರುದಾರರಾದ ಶ್ರೀ.ವಿಜಯಕುಮಾರ್‌ ಬಿನ್ ಮುನಿಯಪ್ಪ, ಕಾರಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ  ದಿನಾಂಕ 16.04.2016 ರಂದು ಮದ್ಯಾಹ್ನ1.30 ಗಂಟೆಗೆ ದೂರುದಾರರ ತಂದೆ ಮುನಿಯಪ್ಪ ರವರು ಬೆಮೆಲ್ ಬಸ್ ನಿಲ್ದಾಣದಲ್ಲಿ ಬಸ್ ಇಳಿದು, ಬೆಮೆಲ್ ಕಾರ್ಖಾನೆಯ ಮೈನ್ ಗೇಟ್ ಕಡೆಗೆ ಹೋಗಲು, ಬೆಮೆಲ್ ನಗರ ಪೊಲೀಸ್ ಠಾಣೆಯ ಮುಂಭಾಗ ನಡೆದುಕೊಂಡು ಹೋಗುತ್ತಿದ್ದಾಗ,  ಹಿಂದಿನಿಂದ KA08-R-5999 ರ ಸುಜಿಕಿ ಆಕ್ಸ್ ಸ್ ದ್ವಿಚಕ್ರವಾಹನದ ಸವಾರ, ಅವರ ವಾಹನ್ನು ಬಂಗಾರಪೇಟೆ-ಕೆ.ಜಿ.ಎಫ್ ಮುಖ್ಯರಸ್ತೆಯಲ್ಲಿ ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುನಿಯಪ್ಪ ರವರಿಗೆ ಡಿಕ್ಕಿಹೊಡೆಸಿದ್ದರಿಂದ ತಲೆಗೆ ಗಾಯಗಳಾಗಿರುತ್ತದೆ.

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.ದಿನಾಂಕ 17.04.2016 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ ದೂರುದಾರರಾದ  ಶ್ರೀ. ವೆಂಕಟಕೃಷ್ಣ ರವರ ತಂದೆ ನಾರಾಯಣಗೌಡರವರನ್ನು ಅವರ ದ್ವಿಚಕ್ರ ವಾಹನ ಸಂ. ಕೆ.ಎ. 08-ಆರ್-5797 ರಲ್ಲಿ ಹಿಬದಿಯಲ್ಲಿ ಕುಳ್ಳರಿಸಿಕೊಂಡು ಎ. ಮೋತಕಪಲ್ಲಿ ಗ್ರಾಮಕ್ಕೆ ಹೋಗಲು, ಕ್ಯಾಸಂಬಳ್ಳಿ ಮುಖ್ಯ ರಸ್ತೆಯ ಬಸವನಗುಡಿ ತಿರುವು ರಸ್ತೆಯ ಬಳಿ ಹೋಗುತ್ತಿದ್ದಾಗ. ರಾಜ್ ಪೇಟೆ ರೋಡ್ ಕಡೆಯಿಂದ ಲಾರಿ ಸಂಖ್ಯೆ ಕೆ.ಎ-07-ಎ-477 ರ  ಚಾಲಕ ಅವರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಃನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರು ಮತ್ತು ಅವರ ತಂದೆ ನಾರಾಯಣಗೌಡರಿಗೆ ಕೆಳಗೆ ಬಿದ್ದು, ನಾರಾಯಣಗೌಡರಿಗೆ ಬಾರಿ ಗಾಯಗಳಾಗಿ ಬೆಂಗಳೂರಿನ ನಿಮಾನ್ಸ್‌ ಅಸ್ಪತ್ರೆಗೆ ದಾಖಲಿಸಿದ್ದು, ಅಸ್ಪತ್ರೆಯಲ್ಲಿ ನಾರಾಯಣಗೌಡ 60 ವರ್ಷ, ರವರು ಮೃತಪಟ್ಟಿರುತ್ತಾರೆ.

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 17.04.2016 ರಂದು ದೂರುದಾರರಾದ ಶ್ರೀ ಶಷ್ಮುಗಂ ಬಿನ್‌  ಗೋಪಾಲಗೌಂಡರ್‌, 52 ವರ್ಷ, ಬೆನ್ನವಾರ ಗ್ರಾಮ ರವರು ನೀಡಿದ ದೂರಿನಲ್ಲಿ   ದಿನಾಂಕ 17.04.2016 ರಂದು ಸಂಜೆ 5.-00 ಗಂಟೆಗೆ   ಕೆ.ಜಿ.ಎಫ್ ಕಡೆಯಿಂದ ದ್ವಿ ಚಕ್ರ ವಾಹನ ಹೀರೋ ಹಂಡಾ ಸ್ಪ್ಲೆಂಡರ್‌ ಸಂಖ್ಯೆ ಎಪಿ-03-ಎಜಿ-2649 ರಲ್ಲಿ  ಶಂಕರ್ ಬಿನ್ ವೆಂಕಟೇಶಪ್ಪ, ವಯಸ್ಸು 40  ಬೆನ್ನವಾರ ಗ್ರಾಮ ರವರು ರಾಮಾಪುರ ಗ್ರಾಮದ ಬಳಿ ಹೋಗುತ್ತಿದ್ದಾಗ,  ಕ್ಯಾಸಂಬಳ್ಳಿ ಕಡೆಯಿಂದ  ದ್ವಿ ಚಕ್ರ ವಾಹನ  ಬಜಾಜ್ ಡಿಸ್ಕವರಿ ಸಂಖ್ಯೆ ಕೆಎ-08-ಕ್ಯೂ-4776 ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಶಂಕರ್ ರವರ ಬರುತ್ತಿದ್ದ ದ್ವಿ ಚಕ್ರವಾಹನಕ್ಕೆ ಡಿಕ್ಕಿಹೊಡೆದ ಪ್ರಯುಕ್ತ ಶಂಕರ್  40 ವರ್ಷ, ರವರಿಗೆ  ತಲೆಗೆ  ರಕ್ತಗಾಯಗಳಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾರೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

 

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s