ದಿನದ ಅಪರಾಧಗಳ ಪಕ್ಷಿನೋಟ 17ನೇ ಏಪ್ರಿಲ್ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 17.04.2016 ರಂದು  ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ 17.04.2016 ರ  ಸಂಜೆ 05.00   ಗಂಟೆಯವರೆಗೆ   ದಾಖಲಾಗಿರುವ ಪ್ರಕರಣಗಳ ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೆಮಲ್‌ ಮೈನ್‌ ಗೇಟ್‌ ಸೈಕಲ್‌ ಸ್ಟಾಂಡ್‌ ಬಳಿ ನಡೆದಿರುತ್ತದೆ. ಶ್ರೀ. ಕಿರಣ್‌ ಬಿನ್‌ ಶ್ರೀರಾಮನ್‌, ಎಂ.ವಿ. ನಗರ, ಬೆಮೆಲ್‌ನಗರ ವಾಸಿ ರವರು ದಿನಾಂಕ 13.04.016 ರಂದು ಬೆಳಿಗ್ಗೆ 6.30 ಗಂಟೆಗೆ ತನ್ನ ಕೆಎ04 ವೈ 0197 ಸುಜಿಕಿ ಪಿಯರೋ ದ್ವಿಚಕ್ರವಾಹನವನ್ನು ಬೆಮೆಲ್ ಕಾರ್ಖಾನೆಯ ಮೈನ್ ಗೇಟ್ ಸ್ಟ್ಯಾಂಡ್ ನಲ್ಲಿ ನಿಲ್ಲಿಸಿ ಬೆಂಗಳೂರಿಗೆ  ಕೆಲಸಕ್ಕೆ ಹೋಗಿದ್ದು, ರಾತ್ರಿ 8.15 ಗಂಟೆಗೆ ವಾಪಸ್ಸು ಬಂದು ಸ್ಟ್ಯಾಂಡ್ ನಲ್ಲಿ  ತನ್ನ ದ್ವಿಚಕ್ರಚವಾಹನವನ್ನು ತೆಗೆದುಕೊಳ್ಳಲು ಹೋಗಿ ನೋಡಿದಾಗ, ದ್ವಿಚಕ್ರವಾಹನ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೆ ಇದ್ದು, ಯಾರೋ ಆಸಾಮಿಗಳು ಸದರಿ ವಾಹನವನ್ನು ಕಳವುಮಾಡಿಕೊಂಡು ಹೋಗಿರುತ್ತಾರೆಂತ ದೂರು. ಇದರೆ ಬೆಲೆ ಸುಮಾರು 15,000/- ರೂಗಳು ಬಾಳುತ್ತೆ.

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ಘೋರ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬ್ಯಾಟರಾಯನಹಳ್ಳಿಯಲ್ಲಿ ನಡೆದಿರುತ್ತದೆ. ದಿನಾಂಕ 17.04.2016 ರಂದು ಬೆಳಿಗ್ಗೆ 09.30 ಗಂಟೆಯಲ್ಲಿ ಇದೇ         ಗ್ರಾಮದ ವಾಸಿಯಾದ  ನಾರಾಯಣಮ್ಮ,  65  ವರ್ಷ, ರವರು  ಗ್ರಾಮದ ಪುಷ್ಪ ರವರ ಮನೆಯ ರಸ್ತೆಯ ಎಡ ಬದಿಯಲ್ಲಿ  ನಡೆದುಕೊಂಡು ಹೋಗುತ್ತಿರುವಾಗ ಕೆ.ಎ-53 ಜಡ್ 6682 ರ ಚಾಲಕ ರಘುನಾಥ್ @ ಆಂಜಿ ಬಿನ್ ರಮೇಶ್, 24 ವರ್ಷ, ಬ್ಯಾಟರಾಯನಹಳ್ಳಿ ಗ್ರಾಮದ ವಾಸಿ ಸದರಿ ಕಾರನ್ನು ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸದರಿ ಕಾರಿನ  ಮುಂದಿನ ಬಲ ಚಕ್ರ ಹೊಡೆದು ಕಾರು ನಿಯಂತ್ರಣ ತಪ್ಪಿ ನಾರಾಯಣಮ್ಮ ರವರಿಗೆ ಡಿಕ್ಕಿ ಹೊಡೆದರಿಂದ ನಾರಾಯಣಮ್ಮ ರವರು ಕೆಳಗೆ ರಸ್ತೆ ಮೇಲೆ ಬಿದ್ದು ತಲೆಗೆ ರಕ್ತಗಾಯವಾದ್ದರಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾರೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s