ದಿನದ ಅಪರಾಧಗಳ ಪಕ್ಷಿನೋಟ 12 ನೇ ಏಪ್ರಿಲ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 11.04.2016 ರಂದು  ಸಂಜೆ 5.00 ಗಂಟೆಯಿಂದ ದಿನಾಂಕ 12.04.2016 ರ  ಬೆಳಗ್ಗೆ 10.00   ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :02

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 11.04.2016 ರಂದು ದೂರುದಾರರಾದ ಶ್ರೀ. ಶೇಖ್‌ ಅಬ್ದುಲ್‌  ಶೇಖ್‌ ಹುಸೇನ್‌ ಸಾಬ್‌  ಮರಗಲ್‌ ಗ್ರಾಮ ರವರು ನೀಡಿದ ದೂರಿನಲ್ಲಿ  ದಿನಾಂಕ 10.04.2016 ರಂದು  3.30 ಗಂಟೆಯಲ್ಲಿ ದೂರುದಾರರು  ಶಂಕರ್ ಮಿಲ್  ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಕೋಲಾರ ಕಡೆಯಿಂದ ಆರೋಪಿಯು ಅಪ್ಪಾಚಿ ದ್ವಿಚಕ್ರ ವಾಹನ ಸಂಖ್ಯೆ KA-53, L-1544  ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರು ರಸ್ತೆಯ ಮೇಲೆ ಬಿದ್ದು ರಕ್ತಗಾಯವಾಗಿರುತ್ತೆ. ಆರೋಪಿಯು ವಾಹನವನ್ನು ನಿಲ್ಲಿಸದೇ  ಪಾರಾರಿಯಾಗಿರುತ್ತಾರೆ.

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 11.04.2016 ರಂದು ದೂರುದಾರರಾದ ಶ್ರೀ. ಚೊಟೆ ಸಾಬ್‌ ಬಿನ್‌  ಸಾಬ್‌ಜಾನ್‌  ಗೌತಮ ನಗರ ಬಂಗಾರಫೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ 10.04.2016 ರಂದು 10.30 ಗಂಟೆಯಲ್ಲಿ  ದೂರುದಾರರು ಅವರ ವಾಹನ ಸಂಖ್ಯೆ  TVS XL NO-KA-05, EE-8719  ನ್ನು ಬೂದಿಕೋಟೆ ರೈಲ್ವೆ ಗೇಟ್ ಕಡೆಯಿಂದ ಬೂದಿಕೋಟೆ ಕಡೆಗೆ ಹೋಗುತ್ತಿದ್ದಾಗ ಆರೋಪಿಯು ಕರಿಶ್ಮಾ ದ್ವಿಚಕ್ರ ವಾಹನ ಸಂಖ್ಯೆ-KA-07, Q-4260 ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆರ ಡಿಕ್ಕಿ ಹೊಡೆದ ಪರಿಣಾಮ  ದೂರುದಾರರು ವಾಹನ ಸಮೇತ ಕೆಳಗೆ ಬಿದ್ದು ತಲೆಯ ಹಿಂಭಾಗ ರಕ್ತ ಗಾಯವಾಗಿರುತ್ತೆ., ಆರೋಪಿಯು ದ್ವಿಕ್ರವಾಹನವನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿರುತ್ತಾರೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :01

ರಾಟರ್ಬ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಗ್ಯಾಸ್‌ ಸಿಲೆಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಪ್ರಕರಣ ದಾಖಲಾಗಿರುತ್ತದೆ  ದಿನಾಂಕ 11.04.2016 ರಂದು ಸಂಜೆ 6.15 ಗಂಟೆಗೆ ದೂರುದಾರರಾದ ಶ್ರೀ. ಎಸ್‌ಆರ್‌. ಜಗದೀಶ್‌, ಪೊಲೀಸ್‌ ಇನ್ಸ್‌ಪೆಕ್ಟರ್‌, ರಾಬರ್ಟ್‌‌ಸನ್‌ಪೇಟೆ ರವರಿಗೆ ಬಂದ ಮಾಹಿತಿ ಮೇರೆಗೆ  ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣಾ ಸರಹದ್ದಿನ ಮಿನಿ ಇಬ್ರಾಹಿಂ ರಸ್ತೆಯಲ್ಲಿರುವ ಹೆಚ್.ಎಂ.ಎಸ್ ಪ್ಲೋರ್ ಮಿಲ್ ನಲ್ಲಿ ಅಕ್ರಮವಾಗಿ ಯಾವುದೇ ಅನುಮತಿ ಪಡೆಯದೇ ಹಾಗೂ ಜನ ವಸತಿ ಇರುವ ಪ್ರದೇಶಗಳಲ್ಲಿ ಸುರಕ್ಷಿತ ಕ್ರಮಗಳನ್ನು ಅನುಸರಿಸದೆ, ಸ್ಪೋಟಕ ವಸ್ತುವಾದ ಎಲ್.ಪಿ.ಜಿ ಸಿಲಿಂಡರ್ ಗಳನ್ನು ದಾಸ್ತಾನು ಮಾಡಿಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಿರುತ್ತಾರೆ.

-ಅಸ್ವಾಭಾವಿಕ ಮರಣ :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 11.04.2016 ರಂದು ದೂರುದಾರರಾದ ಶ್ರೀಮತಿ ಪದ್ಮ, ಬೂದಿಕೋಟೆ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರ ತಂಗಿಯಾದ ಕುಮಾರಿ ದಿವ್ಯ ರವರು  ಬಂಗಾರಪೇಟೆ ಗಾರ್ಮೆಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದು,  ದಿವ್ಯ ರವರಿಗೆ 3 ವರ್ಷದಿಂದ ಹೊಟ್ಟೆ ನೋವು ಬರುತ್ತಿದ್ದು,  ದಿನಾಂಕ 11.04.2016 ರಂದು ರಾತ್ರಿ  ಮನೆಯವರು ಎಲ್ಲರೂ ಊಟ ಮಾಡಿ ಮಲಗಿರುವಾಗ 10.00 ಗಂಟೆ ಸಮಯದಲ್ಲಿ ದಿವ್ಯ ರವರಿಗೆ ವೀಪರಿತವಾದ ಹೊಟ್ಟೆ ನೋವು ಬಂದಿದ್ದರಿಂದ ಸೀಮೆ ಎಣ್ಣೆ  ಸುರಿದುಕೊಂಡು ಬೆಂಕಿಹಚ್ಚಿಕೊಂಡಿದ್ದು,  ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ  ದಿನಾಂಕ 11.04.2016 ರಂದು ದಿವ್ಯ ರವರು ಮೃಪಟ್ಟಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s