ದಿನದ ಅಪರಾಧಗಳ ಪಕ್ಷಿನೋಟ 11 ನೇ ಏಪ್ರಿಲ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 10.04.2016 ರಂದು  ಸಂಜೆ 5.00 ಗಂಟೆಯಿಂದ ದಿನಾಂಕ 11.04.2016 ರ  ಬೆಳಗ್ಗೆ 10.00   ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :02

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ ದಿನಾಂಕ 10.04.2016 ರಂದು ದೂರುದಾರರಾದ ಶ್ರೀ.ಚಂಗಲರಾಯ ಬಿನ್‌ ಚಿನ್ನಯ್ಯ 21 ವರ್ಷ, ನೀಲಗಿರಿಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರಿಗೂ ಮತ್ತು ಆರೋಪಿಗಳಾದ  ನಾರಾಯಣಸ್ವಾಮಿ ಮತ್ತು ಅಮರಾವತಿ ನೀಲಗಿರಿಹಳ್ಳಿ ಗ್ರಾಮ ಎಂಬುವರ ಕೊಳವೆ ಬಾವಿ ವಿಚಾರದಲ್ಲಿ  ಆಗಾಗ ಗಲಾಟೆಗಳು ಮಾಡಿಕೊಳ್ಳುತ್ತಿದ್ದು, ದಿನಾಂಕ 10.04.2016 ರಂದು ಬೆಳಗ್ಗೆ 10.30 ಗಂಟೆಯಲ್ಲಿ ದೂರುದಾರರು ನೀಲಗಿರಿಪಲ್ಲಿಯಲ್ಲಿರುವ ಅವರ ವಾಸದ ಮನೆಯಲ್ಲಿ ಕಿಟಕಿಯ ಪಕ್ಕದಲ್ಲಿ ಮಲಗಿರುವಾಗ   ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂಧ  ದೂರುದಾರರ ಮನೆಯ ಕಿಟಕಿಯ ಬಳಿ ಆರೋಪಿಗಳಾದ  ನಾರಾಯಣಸ್ವಾಮಿ ಮತ್ತು ಅಮರಾವತಿ ಬಂದು  ಕಿಟಕಿಯ ಮುಖಾಂತರ ಸೀಮೆ ಎಣ್ಣೆಯನ್ನು ಕಾಲುಗಳ ಮೇಲೆ ಮತ್ತು  ಕೈಗಳ ಮೇಲೆ  ಎರಚಿ ಬೆಂಕಿಕಡ್ಡಿಗಳಿಂದ ಬೆಂಕಿ ಅಂಟಿಸಿ  ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ.

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ ದಿನಾಂಕ 10.04.2016 ರಂದು ದೂರುದಾರರಾದ ಶ್ರೀಮತಿ ಅಮರಾವತಿ ಮತ್ತು ನಾರಾಯಣಸ್ವಾಮಿ ನೀಲಗಿರಿಹಳ್ಳಿ ರವರು ನೀಡಿದ ದೂರಿನಲ್ಲಿ  ದೂರುದಾರರಿಗೂ ಮತ್ತು ಆರೋಪಿಗಳಾದ ರಘು ಮತ್ತು ಅಮರೇಶ್‌ ರವರಿಗೂ  ಕೊಳವೆ ಬಾವಿ ವಿಚಾರದಲ್ಲಿ ಈ ಮೊದಲಿನಿಂದಲೂ ಗಲಾಟೆಗಳು ನಡೆದಿದ್ದು , ದಿನಾಂಕ 10.04.2016 ರಂದು ಬೆಳಗ್ಗೆ 10.00 ಗಂಟೆಯಲ್ಲಿ ದೂರುದಾರರು ಮತ್ತು ಅವರ ಗಂಡ ನೀಲಗಿರಿಪಲ್ಲಿಯಲ್ಲಿರುವ ಅವರ ವಾಸದ ಮನೆಯ ಬಳಿ ಇರುವಾಗ  ಆರೋಪಿಗಳು ಏಕೋದ್ದೇಶದಿಂದ ದೂರುದಾರರ ಮನೆಯ ಬಳಿ ಬಂದು ದೂರುದಾರರ ಗಂಡನನ್ನು ಕುರಿತು  ಕೆಟ್ಟ ಮಾತುಗಳಿಂದ ಬೈದು ಜಗಳ ನಡೆಯುವುದಕ್ಕೆ ನಿನ್ನ ಹೆಂಡತಿಯೆ ಕಾರಣ ಎಂದು ಗಲಾಟೆ ಮಾಡಿ  ಸೀಮೆ ಎಣ್ಣೆ ಕ್ಯಾನ್ ತೆಗೆದುಕೊಂಡು ಬಂದು ಕೊಲೆ ಮಾಡುವ ಉದ್ದೇಶದಿಂದ ದೂರುದಾರರ ಮೈ ಮೇಲೆ ಸೀಮೆ ಎಣ್ಣೆಯನ್ನು ಸುರಿದು ಬೆಂಕಿ ಇಡಲು ಪ್ರಯತ್ನಿಸಿ  ಕೈಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : 01

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s