ದಿನದ ಅಪರಾಧಗಳ ಪಕ್ಷಿನೋಟ 10 ನೇ ಏಪ್ರಿಲ್‌ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 10.04.2016 ರಂದು ಬೆಳಗ್ಗೆ 10.00  ಗಂಟೆಯಿಂದ ಸಂಜೆ 5.00  ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : 02

ರಾಬರ್ಟ್‌ಸನ್‌‌ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 10.04.2016 ರಂದು ದೂರುದಾರರಾದ ಶ್ರೀ ಮುರಳಿ ಕೆ.ಪಿ.  ಬಿನ್‌ ಪ್ರಬಾಕರನ್‌,  ಕಾರೋನೇಷನ್‌ ಟೌನ್‌ , ರಾಬರ್ಟ್‌‌ಸಬ್‌‌ಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ 09.04.2016 ರಂದು ರಾತ್ರಿ 9.15 ಗಂಟೆಯಲ್ಲಿ ರಾಬರ್ಟ್ ಸನ್ ಪೇಟೆಯ ಬಿ.ಎಂ ರಸ್ತೆಯಲ್ಲಿರುವ ಸುಪ್ರಿಂ ಕಾಂಪ್ಲೆಕ್ಸ್ ನ 2ನೇ ಹಂತಸ್ತಿನಲ್ಲಿರುವ ದೂರುದಾರರು ಅವರ ಕಛೇರಿಗೆ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ 10.04.2016 ರಂದು ಬೆಳಿಗ್ಗೆ 09.40 ಗಂಟೆಯಲ್ಲಿ ಕಛೇರಿಗೆ ಬಂದು ನೋಡಲಾಗಿ, ಕಛೇರಿಗೆ ಅಳವಡಿಸಿದ್ದ, ಬೀಗವನ್ನು ಯಾರೋ ಕಳ್ಳರು, ಯಾವುದೋ ಆಯುಧದಿಂದ ಕಿತ್ತು, ಒಳಗೆ ಪ್ರವೇಶಿಸಿ ಕಛೇರಿಯ ಡ್ರಾನಲ್ಲಿದ್ದ ರೂ 540/-ಗಳ ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನಕಳುವಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 09.04.2016 ರಂದು ರಾತ್ರಿ 10.15 ಗಂಟೆಯಲ್ಲಿ ದೂರುದಾರರಾದ ಡಾ: ಸಿ.ಧನಶೇಖರನ್ (66), ವಾಸ: # ಎ/116, ಭಾರತ್‌ನಗರ, ಬೆಮಲ್‌ನಗರ, ಕೆ.ಜಿ.ಎಫ್. ಇವರು ರಾಬರ್ಟ್ ಸನ್ ಪೇಟೆಯ ಬಿ.ಎಂ ರಸ್ತೆಯಲ್ಲಿರುವ ಸುಪ್ರಿಂ ಕಾಂಪ್ಲೆಕ್ಸ್ ನ 2ನೇ ಅಂತಸ್ತಿನಲ್ಲಿರುವ ದೀಪಕ್ ಐ ಕ್ಲಿನಿಕ್ ಗೆ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ 10.04.2016 ರಂದು ಬೆಳಿಗ್ಗೆ 10.40 ಗಂಟೆಯಲ್ಲಿ ಬಂದು ನೋಡಲಾಗಿ, ಸದರಿ ಕ್ಲಿನಿಕ್ ಗೆ ಅಳವಡಿಸಿದ್ದ ಬೀಗವನ್ನು ಯಾರೋ ಕಳ್ಳರು, ಯಾವುದೋ ಆಯುಧದಿಂದ ಬಲವಂತವಾಗಿ ಕಿತ್ತು, ಒಳಗೆ ಪ್ರವೇಶಿಸಿ ಕ್ಲಿನಿಕ್‌ನಲ್ಲಿ ಡ್ರಾಗಳಲ್ಲಿದ್ದ ರೂ. 2,01,700/-ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ‌01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 10.04.2016 ರಂದು ದೂರುದಾರರಾದ ಶ್ರೀ. ಶ್ರೀನಿವಾಸ ಮೂರ್ತಿ ಬಿನ್‌ ಕೃಷ್ಣಮೂರ್ತಿ 60 ವರ್ಷ, ದೊಡ್ಡಬಸವಾಡಿ, ಬೆಂಗಳೂರು ರವರು ನೀಡಿದ ದೂರಿನಲ್ಲಿ ಕದರಿಪುರ ಗ್ರಾಮ ಸರ್ವೆ ನಂ. 68 ರಲ್ಲಿ 23 ಗುಂಟೆ ಮತ್ತು ಸರ್ವೆ ನಂ 67 34 ಗುಂಟೆ ಜಮೀನಿದ್ದು ಸದರಿ ಜಮೀನು ಪಾಲಾರ್ ನದಿ ದಡದಲ್ಲಿದ್ದು ಸದರಿ ಜಮೀನಿನಲ್ಲಿ ಯಾರೋ ಟ್ರ್ಯಾಕ್ಟರ್ ಗಳ ಸಹಾಯದಿಂದ ಮಣ್ಣನ್ನು ತೆಗದು  ಜಮೀನಿನ ಫಲವತ್ತತೆಯನ್ನು ನಾಶಪಡಿಸಿದ್ದು ಈ ಕುರಿತು ದೂರುದಾರರಾದ ಜಯರಾಂ ರವರನ್ನು ಕೇಳಲಾಗಿ ಈಗ್ಗೆ 15 ದಿನಗಳ ಹಿಂದೆ ಆರೋಪಿಗಳಾದ  ಸೀನಪ್ಪ, ರಾಮಚಂದ್ರಪ್ಪ ಮತ್ತು ಶಂಕರ್‌ ರವರುಗಳು ಸದರಿ ಜಮೀನಿನಲ್ಲಿನ ಮಣ್ಣಿನ ಫಲವತ್ತತೆಯನ್ನು ನಾಶಪಡಿಸಿ ಸುಮಾರು 1 ಲಕ್ಷ ನಷ್ಟ ಉಂಟು ಮಾಡಿದ್ದು ಈ ವಿಚಾರವನ್ನು ದೂರುದಾರರು ದಿನಾಂಕ 10.04.2016ರಂದು ಮದ್ಯಾಹ್ನ 12.00 ಗಂಟೆಗೆ ಆರೋಪಿಗಳ ಮನೆಯ ಬಳಿ ಹೋಗಿ ಕೇಳಿದಕ್ಕೆ ಆರೋಪಿಗಳು ಉದ್ದೇಶಪೂರ್ವಕವಾಗಿ ದೂರುದಾರರನ್ನು ಕೆಟ್ಟ ಮಾತುಗಳಿಂದ ಬೈದು  ನಾವು ಆ ಜಮಿನಿನಲ್ಲಿ ಮಣ್ಣು ತೆಗೆಯುವುದೆ ನಮ್ಮ ಕೆಲಸಕ್ಕೆ ಅಡ್ಡಿ ಬಂದರೆ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s