ದಿನದ ಅಪರಾಧಗಳ ಪಕ್ಷಿನೋಟ 5 ನೇ ಏಪ್ರಿಲ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 04.04.2016 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ: 05.04.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :01

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಸಾಮಾನ್ಯ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 04.04.2016 ರಂದು  ಸಂಜೆ  06.30 ಗಂಟೆ  ಸಮಯದಲ್ಲಿ  ಉರಿಗಾಂ ಪೊಲೀಸ್‌ ಠಾಣೆಯ ಸಿಬ್ಬಂದಿಗಳು ನಗರ ಗಸ್ತಿನಲ್ಲಿರುವಾಗ ಉರಿಗಾಂನ  ಆಲಗಪ್ಪ ಯೂನಿವರ್ಸಿಟಿ  ಬಳಿ ಅಜ್ಜಪನಹಳ್ಳಿ  ರಸ್ತೆಯಲ್ಲಿ  ಗಸ್ತು ಮಾಡುತ್ತಿದ್ದಾಗ  ಅಜ್ಜಪನಹಳ್ಳಿ ಕಡೆಯಿಂದ  ಒಂದು ಆಟೋ ಸಂಖ್ಯೆ ಕೆ ಎ 02 ಸಿ-1856 ರ ಚಾಲಕನು  ಪೊಲೀಸರನ್ನು ನೋಡಿ ಆಟೋವನ್ನು ನಿಲ್ಲಿಸಿ ಇಳಿದು ಓಡಲು ಪ್ರಯತ್ನಿಸಿದ್ದು, ಆಟೋ ಸಂಖ್ಯೆ ಕೆ ಎ 02 ಸಿ-1856  ರಲ್ಲಿ ನೋಡಲಾಗಿ  ಆಟೋದಲ್ಲಿ 100 ಮೀಟರ್ ಉದ್ದದ ಮೋಟಾರ್ ಗೆ ಅಳವಡಿಸಿದ  ಕೇಬಲ್  ವೈರ್ ಇದ್ದು,  ಎಲ್ಲಿಯೋ ಕಳ್ಳತನ ಮಾಡಿಕೊಂಡು  ಬಂದಿರಬಹುದೆಂದು ಅನುಮಾನಗೊಂಡು, ಆಟೋಚಾಲಕನನ್ನು ವಿಚಾರಣೆಗೊಳಪಡಿಸಲಾಗಿ ಸದರಿ ವ್ಯಕ್ತಿಯು ಯಾವುದೇ ಸಮಂಜಸವಾದ ಉತ್ತರ ನೀಡಿರುವುದಿಲ್ಲ.ಸದರಿ ಆಸಾಮಿಯ ಹೆಸರು  ಮತ್ತು ವಿಳಾಸ ಕೇಳಲಾಗಿ ತೊದಳುತ್ತಾ ಅವರ ಹೆಸರು ರಾಬರ್ಟ್  ಬಿನ್ ಸಲಮಾನ್  ,ವಯಸ್ಸು 40 ವರ್ಷ ವಾಸ ಸುಸೈಪಾಳ್ಯಂ ,ಆಂಡ್ರಸನ್ ಪೇಟೆ  ,ಕೆ,ಜಿ,ಎಪ್ ಎಂತಾ ತಿಳಿಸಿದ್ದು,  ಆರೋಪಿಯ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : 01

ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ 04.04.2016ರಂದು ದೂರುದಾರರಾದ ಶ್ರೀ .  ಬಾಬು ಬಿನ್‌ ಲೋಗನಾಥನ್‌ ಕೃಷ್ಣಗಿರಿ ಲೈನ್‌ ಮಾರಿಕುಪ್ಪಂ ರವರು ನೀಡಿದ ದೂರಿನಲ್ಲಿ  ದೂರುದಾರರಿಗೂ ಮತ್ತು ಆರೋಪಿ  ಗೋಪಿರವರ ಮದ್ಯೆ ಹಳೆ ವೈಷ್ಯಮ್ಯಗಳಿದ್ದು, ಈ ವಿಚಾರದಲ್ಲಿ ಅಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದು, ದಿನಾಂಕ.04.04.2016 ರಂದು ಬೆಳಿಗ್ಗೆ 08-15 ಗಂಟೆಯಲ್ಲಿ ದೂರುದಾರರ ಮನೆ ಮುಂದೆ ನಿಂತಿರುವಾಗ  ಆರೋಪಿ ಗೋಪಿ ಮತ್ತು ಇತರರು  ಅವರ ಮನೆ ಬಳಿ ಹೋಗಿ ಏಕಾ-ಏಕಿ ದೂರುದಾರರ ಮೇಲೆ ಜಗಳಕ್ಕೆ  ಮಾಡಿ  ಕಲ್ಲಿನಿಂದ ಹೊಡೆದು ರಕ್ತ ಗಾಯಪಡಿಸಿ ದೂರುದಾರರನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 04.04.2016 ರಂದು ದೂರುದಾರರಾದ ಶ್ರೀ  ಸತ್ಯಕುಮಾರ್‌ ಬಿನ್‌ ಸೀತಾರಾಮನ್‌  ಹೆನ್ರೀಸ್‌ ಲೈಲ್‌ ಉರಿಗಾಂ ರವರು ನೀಡಿದ ದೂರಿನಲ್ಲಿ ದೂರುದಾರರ ಮಗನಾದ ತಿಲಕ್ ರಾಜ್ ರವರು ದಿನಾಂಕ31.03.2016 ರಂದು ರಾತ್ರಿ 10.30 ಗಂಟೆಯಲ್ಲಿ ಅವರ ದ್ವಿಚಕ್ರ ವಾಹನ ಹಿರೋ ಹೋಂಡಾ ಸ್ಲೆಂಡರ್ ಪ್ರೋ ನೊಂದಣಿ ಸಂಖ್ಯೆ ಕೆ.ಎ-08 ಯು-0811 ರಲ್ಲಿ ಕೆ.ಜಿ.ಎಫ್-ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿರುವ ನ್ಯಾಯಾಲಯದ ಮುಂಭಾಗ ಹೋಗುತ್ತಿದ್ದಾಗ ಆಟೋರಿಕ್ಷಾ ಸಂಖ್ಯೆ ಕೆ.ಎ-03 ಬಿ-8761ರ ಚಾಲಕನು ಅವರ ವಾಹನವನ್ನು ಅತಿವೇಗ ಮತ್ತು ಅಜಾಗೂರುಕತೆಯಿಂದ ಚಲಾಯಿಸಿಕೊಂಡು ಬಂದು ತಿಲಕ್ ರಾಜ್ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ  ಪರಿಣಾಮ  ತಿಲಕ್ ರಾಜ್ ರವರ ಬಲಗಾಲಿನ ತೊಡೆಗೆ, ಮೊಣಕಾಲಿನ ಮೇಲೆ, ಕಣ್ಣಿನ ಹುಬ್ಬಿನ ಮೇಲೆ, ರಕ್ತಗಾಯಗಳಾಗಿರುತ್ತದೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s