ಪತ್ರಿಕಾ ಪ್ರಕಟಣೆ

ಉತ್ತಮ ಸಮಾಜ ನಿರ್ಮಿಸಲು ನಿವೃತ್ತ ಪೊಲೀಸರ ಸಹಕಾರ ಅಗತ್ಯ : ಜಿ.ಎಸ್.ಗೋವಿಂದರಾಜು
:
ಅಪರಾಧ ರಹಿತ ಉತ್ತಮ ಸಮಾಜ ನಿರ್ಮಿಸಲು ನಿವೃತ್ತ ಪೊಲೀಸರ ಸಹಕಾರ ಅಗತ್ಯವೆಂದು ನಿವೃತ್ತ ಎ.ಎಸ್.ಐ. ಜಿ. ಎಸ್. ಗೋವಿಂದರಾಜು ಅವರು ಅಭಿಪ್ರಾಯಪಟ್ಟರು.
ಕೆಜಿಎಫ್‌ನ ಡಿ.ಎ.ಆರ್. ಪೊಲೀಸ್ ಕವಾಯಿತು ಮೈದಾನದಲ್ಲಿ ಶನಿವಾರದಂದು ನಡೆದ ಪೊಲೀಸ್ ಧ್ವಜ ದಿನಾಚರಣೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಧ್ವಜ ವಂದನೆ ಸ್ವೀಕರಿಸಿದ ಬಳಿಕ ಮಾತನಾಡುತ್ತಾ, ಅನುಭವಿ ಹಾಗೂ ಉತ್ತಮ ಸೇವೆ ಗೈದ ನಿವೃತ್ತ ಪೊಲೀಸ್ ಅಧಿಕಾರಿಗಳ, ಸಿಬ್ಬಂದಿಗಳ ಸಲಹೆ, ಸೂಚನೆಗಳಿಂದ ಅಪರಾಧಗಳನ್ನು ತಡೆಗಟ್ಟಲು ಸಾಧ್ಯವೆಂದು ಗೋವಿಂದರಾಜು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪೊಲೀಸ್ ಧ್ವಜ ಬಿಡುಗಡೆ ಮಾಡಿದ, ನಗರಸಭೆಯ ನಿವೃತ್ತ ಪೌರಾಯುಕ್ತ ವಿ.ಬಾಲಚಂದ್ರ ಅವರು ಮಾತನಾಡಿ, ಯಾವುದೇ ನಿವೃತ್ತ ಪೊಲೀಸರನ್ನು ಇಲಾಖೆಯು ಗೌರವಿಸಿ, ಸೂಕ್ತ ಸ್ಥಾನಮಾನ ದೊರಕಿಸಲು ಚಿಂತಿಸಬೇಕೆಂದು ಹಾಗೂ ನಿವೃತ್ತ ಪೊಲೀಸರಿಗೂ ಕ್ಯಾಂಟೀನ್ ಮತ್ತು ಆರೋಗ್ಯ ಭಾಗ್ಯ ಸೌಲಭ್ಯವನ್ನು ವಿಸ್ತರಿಸಬೇಕೆಂದು ಕೋರಿದರು.
ಜಿಲ್ಲಾ ರಕ್ಷಣಾಧಿಕಾರಿ ಹೆಚ್.ಆರ್. ಭಗವಾನ್‌ದಾಸ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ೧೯೬೫ರ ಏಪ್ರಿಲ್ ೨ ರಂದು ಕರ್ನಾಟಕ ಪೊಲೀಸ್ ಕಾಯ್ದೆಯು ಜಾರಿಗೆ ಬಂದಿದ್ದು, ಅಂದಿನಿಂದಲೇ ಪೊಲೀಸ್ ಧ್ವಜ ದಿನಾಚರಣೆಯನ್ನು ಪೊಲೀಸ್ ಕಲ್ಯಾಣ ದಿನವನ್ನಾಗಿ ಆಚರಿಸುತ್ತಿದ್ದು, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ತಂತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಯಾವುದೇ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾಗಿ ಬಗೆಹರಿಸಿಕೊಳ್ಳಬಹುದೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಜಿಎಫ್ ನ್ಯಾಯಾಲಯದ ನ್ಯಾಯಾಧೀಶರಾದ ಕೃಷ್ಣ, ರವಿಕುಮಾರ್, ಬೆಮೆಲ್ ನೌಕರರ ಸಂಘದ ಅಧ್ಯಕ್ಷ ರಾಜಶೇಖರನ್, ಜಿಲ್ಲಾ ಪಂಚಾಯ್ತಿ ಸದಸ್ಯ ನೂರಿ ಶಾಹಿದಾ, ಕನ್ನಡ ಸಂಘದ ಕಾರ್ಯದರ್ಶಿ ಎನ್.ಆರ್. ಪುರುಷೋತ್ತಮ, ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ವಿ.ರಾಮಪ್ಪ ಸೇರಿದಂತೆ ನಗರಸಭಾ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆರ್.ಪಿ.ಐ. ಕೆ.ಆರ್. ರಘು ನೇತೃತ್ವದಲ್ಲಿ ಡಿ.ಎ.ಆರ್. ಹಾಗೂ ನಾಗರೀಕ ಪೊಲೀಸರಿಂದ ಆಕರ್ಷಕ ರೀತಿಯಲ್ಲಿ ಪಥಸಂಚಲನ ನಡೆಯಿತು. ಅತಿಥಿಗಳು ಪೊಲೀಸ್ ಧ್ವಜಗಳನ್ನು ಬಿಡುಗಡೆಗೊಳಿಸಿ, ತಂತಮ್ಮ ದೇಣಿಗೆಯನ್ನು ನೀಡಿದರು.
ಪೊಲೀಸ್ ಪೇದೆ ಭೀಮಸೇನಕಾಂಬ್ಳೆ ಅವರಿಂದ ನಿರೂಪಣೆ ಹಾಗೂ ಡಿವೈಎಸ್ಪಿ ಪುಟ್ಟಮಾದಯ್ಯ ಅವರಿಂದ ವಂದನೆಗಳಾದವು.

 

02 KGF 01 (1)

02 KGF 01 (2)

02KGF 01 (3)

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s