ದಿನದ ಅಪರಾಧಗಳ ಪಕ್ಷಿನೋಟ 01 ನೇ ಏಪ್ರಿಲ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:31.03.2016 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ: 01.04.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌01

ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ ದಿನಾಂಕ: 31.03.2016 ರಂದು ದೂರುದಾರಾದ ಶ್ರೀ ಮತಿ ತಂಗ ಪರಿಮಳ ಕೋಂ  ಪುಷ್ಪರಾಜ್‌  ಸುಮತಿ ನಗರ ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ ಆರೋಪಿಗಳಾದ  ವಿಜಯ, ಲೋಗನಾಥನ್‌,  ಅಮ್ಮು, ಶೈಲಾ, ಮತ್ತು ಸುರೇಶ್‌ ಎಂಬುವರುಗಳು  10 ವರ್ಷಗಳಿಂದ ದೂರುದಾರರ ಮನೆಯನ್ನು ಲಿಭೋಗ್ಯಕ್ಕೆ ಹಾಕಿಕೊಂಡು ವಾಸವಾಗಿದ್ದು, ದಿನಾಂಕ: 20.02.2015 ರಂದು ಆರೋಪಿಗಳು ಮನೆಯನ್ನು ಖಾಲಿ ಮಾಡಿಕೊಂಡು ಹೋಗಿದ್ದು, ಆ ಸಮಯದಲ್ಲಿ ದೂರುದಾರರು ಆರೋಪಿಗಳ ಹತ್ತಿರ ರೂ 40,000/-ಗಳನ್ನು ಕೈಸಾಲವಾಗಿ ಪಡೆದುಕೊಂಡಿದ್ದು ದೂರುದಾರರು ಶೇಖಡಾ 10 ರಂತೆ ಬಡ್ಡಿಯನ್ನು ನೀಡಿ ಹಣವನ್ನು ಕೊಟ್ಟಿದ್ದರೂ ಸಹ ಆರೋಪಿಗಳು ದೂರುದಾರರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಪ್ರಾಣ ಬೆದರಿಕೆ ಹಾಕಿ ಹಣವನ್ನು ನೀಡುವಂತೆ ಹೇಳಿ ದೂರುದಾರಿಂದ ಆರೋಪಿಗಳು ಬಂಗಾರದ ವಡವೆಗಳನ್ನು ಬೆಲೆ 6,00,000/- ರೂ ಬಾಳತಕ್ಕದ್ದನ್ನು ಪಡೆದುಕೊಂಡು 3,00,000/- ರೂಗಳು ಕೊಟ್ಟರೆ ತನ್ನ ವಡವೆಗಳನ್ನು ಮತ್ತು ಕಾಗದ ಪತ್ರಗಳನ್ನು ವಾಪಸ್ಸು ಕೊಡುವುದಾಗಿ ಡಿಮ್ಯಾಂಡ್ ಮಾಡುತ್ತಿದ್ದು ದೂರುದಾರರಿಗೆ ಆರೋಪಿಗಳು ಮೋಸ ಮಾಡಿ ಖಾಲಿ ಪೇಪರ್ ಗಳಲ್ಲಿ ಸಹಿಗಳನ್ನು ಹಾಕಿಸಿಕೊಂಡು ಸುಮಾರು 6 ಲಕ್ಷ ಬೆಲೆ ಬಾಳುವ ಒಡವೆಗಳನ್ನು ಪಡೆದುಕೊಂಡು ಮೋಸ ಮಾಡಿರುತ್ತಾರೆ. .

-ಹಲ್ಲೆ : ‌01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂ 31.03.2016 ರಂದು ದೂರುದಾರರಾದ ಶ್ರೀ ಕುಮಾರ್‌ ಬಿನ್‌  ಕೋದಂಡರೆಡ್ಡಿ  ಲಕ್ಷ್ಮೀಸಾಗರ ರವರು ನೀಡಿದ ದೂರಿನಲ್ಲಿ ದಿನಾಂಕ 31.03.2016 ರಂದು ರಾತ್ರಿ 7.30 ಗಂಟೆಯಲ್ಲಿ ದೂರುದಾರರು ಆಂಡ್ರಸನ್ ಪೇಟೆಗೆ ಬಂದಿದ್ದು ಅಲ್ಲಿ ಆರೋಪಿ ಕುಟ್ಟಿ ಪಂಡಾರ ಲೈನ್‌ ಮಾರಿಕುಪ್ಪಂ  ರವರು ಏಕಾಎಕಿ ಜಗಳಕಾದು  ಕೆಟ್ಟ ಮಾತುಗಳಿಂದ ಬೈದ್ದು ಕೈಗಳಿಂದ ಹೊಡೆದು ರಕ್ತ ಗಾಯ ಪಡಿಸಿ ಸಾಯಿಸುತ್ತೇನೆಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಅಪಹರಣ :ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ :01

ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಭದ್ರತಾ ಕಾಯ್ದೆ  ಪ್ರಕರಣ ದಾಖಲಾಗಿರುತ್ತದೆ  ದಿನಾಂಕ: 31.03.2016 ರಂದು ರಾತ್ರಿ 8.00 ಗಂಟೆ ದೂರುದಾರರಾದ ಶ್ರೀ ಗೋಪಾಲ್ ಸಿಂಗ್‌ ಮತ್ತು ಶ್ರೀ.ಗಜೇಂದ್ರ, ರವರಿಗೆ ಶ್ರೀ.ಪ್ರಸನ್ನ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವರ ಜಾತ್ರೆಯ ಪ್ರಯುಕ್ತ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣಾ ವಿಶೇಷ ರಾತ್ರಿ ಗಸ್ತಿಗೆ ಠಾಣಾದಿಕಾರಿಗಳು ನೇಮಿಸಿದ್ದು, ಅದರಂತೆ ಅವರುಗಳು ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯ ಸರಹದ್ದಿನಲ್ಲಿರುವ ಜೂನಿಯರ್ ಕಾಲೇಜ್ ಆವರಣದ ಕತ್ತಲಲ್ಲಿ ಯಾರೋ ಆಸಾಮಿಗಳು ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಕುಳಿತ್ತಿದ್ದವನು ಪೊಲೀಸರನ್ನು ನೋಡಿ ಓಡಲು ಪ್ರಯತ್ನಿಸಿದ್ದು, ಆಗ ಅನುಮಾನ ಬಂದು ಸದರಿಯವರನ್ನು ಸುತ್ತುವರೆದು ಹಿಡಿದುಕೊಂಡು ಅಲ್ಲಿಂದ ಓಡಲು ಪ್ರಯತ್ನಿಸಿದ್ದಕ್ಕೆ ಕಾರಣವನ್ನು ಮತ್ತು ಆತರ ಹೆಸರು ವಿಳಾಸಗಳನ್ನು ಕೇಳಲಾಗಿ ತೊದಲುತ್ತಾ  ಆತನ ಹೆಸರು  ಅಸ್ಲಾಮ್‌ 19ವರ್ಷ, ನಡಂಪಲ್ಲಿ ಗ್ರಾಮ ಮತ್ತು  ವಿಜಯಕುಮಾರ್‌ 19 ವರ್ಷ ಸಂಜಗಾಂದಿ ನಗರ ಎಂದು ತಿಳಿಸಿದ್ದು ಸದರಿ ಅಸಾಮಿಗಳು ಆಸಮಯದಲ್ಲಿ ಅಲ್ಲಿ ಕಳವು ಮಾಡುಲು ಹೊಂಚು ಹಾಕುತ್ತಿರಬಹುದೆಂದು ಅನುಮಾನ ಬಂದಿದ್ದರಿಂದ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಿರುತ್ತಾರೆ.

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 31.03.2016 ರಂದು ದೂರುದಾರರಾದ ಶ್ರೀ  ವೇಣುಗೋಪಾಲ್‌ ಬಿನ್‌ ಪೊನಣ್ಣ  ಬಾರತ್‌ ನಗರ ರವರು ನೀಡಿದ ದೂರಿನಲ್ಲಿ ದೂರುದಾರರ ಮಗಳಾದ ಶರ್ಮಿಳಾ ಕುಮಾರಿ.ವಿ 40  ವರ್ಷ,  ರವರಿಗೆ 5 ವರ್ಷಗಳಿಂದ ಮಾನಸಿಕ ಕಾಯಿಲೆ ಇದ್ದು ವೇಲೂರು ಸಿಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು ಸಹ ಕಾಯೆಲೆ  ವಾಸಿಯಾಗದೆ ಇದ್ದ ಕಾರಣ ದಿನಾಂಕ 31.03.2016 ರಂದು ಬೆಳಿಗ್ಗೆ 10.00 ಗಂಟೆಗೆ ಪಿ.ಇ.ಎಸ್  ಆಸ್ಪತ್ರೆ  ಕುಪ್ಪಂಗೆ ದಾಖಲಿಸಿದ್ದು, ಅಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s