ದಿನದ ಅಪರಾಧಗಳ ಪಕ್ಷಿನೋಟ 31ನೇ ಮಾರ್ಚ್ 2016

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ  ದಿನಾಂಕ: 30.03.2016 ರಂದು ಸಂಜೆ 5.00  ಗಂಟೆಯಿಂದ ದಿನಾಂಕ: 31.03.2016 ರಂದು ಸಂಜೆ 5.00  ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ‌ಇಲ್ಲ

-ಅಪಹರಣ :ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಂದರಪ್ಪ ಬಿನ್ ಮುನಿಯಪ್ಪ, ತಿಪ್ಪಸಂದ್ರ ಗ್ರಾಮ, ಮಾಲೂರು ತಾಲ್ಲೂಕು ರವರ  ಹೆಂಡತಿಯಾದ ಶ್ರೀಮತಿ ವಾಣಿ, 30 ವರ್ಷ ಎಂಬುವರು  ತಿಪ್ಪಸಂದ್ರ ಗ್ರಾಮದಿಂದ ಇಬ್ಬರೂ ಮಕ್ಕಳೊಂದಿಗೆ ತವರು ಮನೆಯಾದ ಹುಣಸನಹಳ್ಳಿ ಗ್ರಾಮಕ್ಕೆ ಬಂದು, ಇಬ್ಬರು ಮಕ್ಕಳನ್ನು ತವರು ಮನೆಯಲ್ಲಿ ಬಿಟ್ಟು ದಿನಾಂಕ 13-03-2016  ರಂದು ಸಂಜೆ 5-00 ಗಂಟೆಗೆ ಹುಣಸನಹಳ್ಳಿ ಗ್ರಾಮದಿಂದ ಕೋಲಾರಕ್ಕೆ  ತಮ್ಮನ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಮನೆಗೆ ವಾಪಸ್ಸು ಬರದೆ ಕಾಣೆಯಾಗಿರುತ್ತಾರೆ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಂಕರ್‍ ಬಿನ್ ರಂಗನಾಥನ್, ಸೇಠ್ ಲೈನ್, ಮಾರಿಕುಪ್ಪಂ, ಕೆ.ಜಿ.ಎಫ್,  ಲಾಜರ್,  ಮನೋಹರ್ ಮತ್ತು ಶಿವರಾಮ್ ರವರು  ದಿನಾಂಕ 30.03.2016 ರಂದು ರಾತ್ರಿ 9-15 ಗಂಟೆಯಲ್ಲಿ  ಕುಪ್ಪಂನಿಂದ ಕೆ.ಜಿ.ಎಫ್ ಗೆ ಬರಲು ಲಗೇಜ್ ಆಟೋ ಸಂಖ್ಯೆ ಕೆ.ಎ-04-ಸಿ-5620 ರಲ್ಲಿ   ಚಿಕ್ಕಕಲ್ಲಹಳ್ಳಿ ಸಮೀಪದ ಬ್ರಿಜ್ ಬಳಿ ಬರುತ್ತಿದ್ದಾಗ ಸದರಿ ಆಟೋಚಾಲಕ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಳ್ಳದಲ್ಲಿ ಬೀಳಿಸಿದ್ದರಿಂದ ಸದರಿ ಲಗೇಜ್ ಆಟೋ ಪಲ್ಟಿ ಹೊಡೆದು ಆಟೋದಲ್ಲಿದ್ದ ಲಾಜರ್,  ಮನೋಹರ್ ಮತ್ತು ಶಿವರಾಮ್ ರವರಿಗೆ  ರಕ್ತಗಾಯಗಳಾಗಿರುತ್ತೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : 01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣ ದಾಖಲಾಗಿರುತ್ತದೆ. ದೂರುದಾರರಾದ ಮುನಿರೆಡ್ಡಿ ಬಿನ್ ಚಿನ್ನಮುನಿರೆಡ್ಡಿ, ಕನಮಾಕನಪಲ್ಲಿ ಗ್ರಾಮ, ಶಾಂತಿಪುರಂ ಮಂಡಲ್, ಚಿತ್ತೂರು ಜಿಲ್ಲೆ, ಆಂದ್ರಪ್ರದೇಶ ರವರ ಮಗಳಾದ ಚಂದ್ರಕಲಾ @ ಚಂದ್ರಮ್ಮ,  24, ಅಲ್ಲಿಕುಂಟೆ ಕದಿರೇನಹಳ್ಳಿ ಗ್ರಾಮ ರವರಿಗೆ ಆಗಾಗ ಹೂಟ್ಟೆನೋವು ಬರುತ್ತಿದ್ದು ವೈಧ್ಯರ ಬಳಿ ತೋರಿಸಿದರೂ ವಾಸಿಯಾಗದೇ ಇದ್ದುದರಿಂದ ದಿನಾಂಕ:30/03/2016 ರಂದು ಬೆಳಿಗ್ಗೆ 8:00 ಗಂಟೆಯ ಸಮಯದಲ್ಲಿ ಹೋಟ್ಟೆನೋವು ತಾಳಲಾರದೇ  ಅಲ್ಲಿಕುಂಟೆ ಕದಿರೇನಹಳ್ಳಿ ಗ್ರಾಮದ ಮನೆಯಲ್ಲಿ  ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s