ದಿನದ ಅಪರಾಧಗಳ ಪಕ್ಷಿನೋಟ 30ನೇ ಮಾರ್ಚ್ 2016 ಸಂಜೆ

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ  ದಿನಾಂಕ: 30.03.2016 ರಂದು  ಬೆಳಿಗ್ಗೆ  10. 00 ಗಂಟೆಯಿಂದ  ಸಂಜೆ 5.00   ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ‌01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ  ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 30.03.2016 ರಂದು ದೂರುದಾರರಾದ ಶ್ರೀ ರಮಣ ಬಿನ್‌ ಮುನಿಸ್ವಾಮಿಶೆಟ್ಟಿ  ಬೂದಿಕೋಟೆ ರವರು ನೀಡಿದ ದೂರಿನಲ್ಲಿ ದಿನಾಂಕ 17.03.2016 ರಂದು ಬೆಳಿಗ್ಗೆ 9.00 ಗಂಟೆ ಸಮಯದಲ್ಲಿ  ದೂರುದಾರರು ಅವರ ಜಮೀನಿನ ಬಳಿ ಹೋಗಿ ನೋಡಲಾಗಿ ಅದೇ ಗ್ರಾಮದ  ಎನ್.ಶ್ರೀನಿವಾಸ ಬಿನ್ ಲೇಟ್ ಕೋಲಾರ ನಾರಾಯಣಪ್ಪ ರವರು ಜೆ.ಸಿ.ಬಿ ವಾಹನ ಚಾಲಕ ಮತ್ತು ಟ್ರ್ಯಾಕ್ಟರ್ ಚಾಲಕರವರುಗಳು ಸೇರಿಕೊಂಡು ತಮ್ಮ ಜಮೀನಿನ ಬಳಿ ಸುಮಾರು 20 ಅಡಿಗಳಷ್ಟು ಜೆ.ಸಿ.ಬಿ ಯಿಂದ ಮಣ್ಣನ್ನು ತೆಗೆದು ಫಿಲ್ಟರ್ ಮಾಡುತ್ತಿದ್ದರು. ಈ ವಿಚಾರವನ್ನು  ಕೇಳಿದ್ದಕ್ಕೆ ಏಕೋದ್ದೇಶದಿಂದ ಮಚ್ಚು, ರಾಡು, ದೊಣ್ಣೆಗಳನ್ನು ಹಿಡಿದುಕೊಂಡು ಹೊಡೆಯಲು ಬಂದು ಕೆಟ್ಟ ಮಾತುಗಳಿಂದ ಬೈದು ಪ್ರಾಣಬೆದರಿಕೆ ಹಾಕಿರುತ್ತಾರೆ.

-ಅಪಹರಣ :ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ :ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ ಪಡಿಸಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 30.03.2016 ರಂದು ದೂರುದಾರರಾದ ಶ್ರೀ.ಪ್ರವೀಣ್‌  ಪೊಲೀಸ್‌ ಸಬ್‌ಇನ್ಸ್‌‌ಪೆಕ್ಟರ್‌ ಸಿಸಿಬಿ, ಬೆಂಗಳೂರು ರವರು ನೀಡಿದ ದೂರಿನಲ್ಲಿ  ದಿನಾಂಕ;30.03.2016 ರಂದು ಮದ್ಯಾಹ್ನ 12.05 ಗಂಟೆಗೆ ಬೆಂಗಳೂರಿನ  ವಿಧಾನಸೌಧ ಪೊಲೀಸ್ ಠಾಣೆ ಮೊ.ಸಂ 42/2016 ಕಲಂ 504,353.354 ಐ.ಪಿ.ಸಿ ಕೇಸಿನಲ್ಲಿ ಆರೋಪಿಯಾದ ಯೂಸೂಪ್ ಷರೀಪ್ ರವರನ್ನು ದಸ್ತಗಿರಿ ಮಾಡಲು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ,  ಸಿಬ್ಬಂದಿಗಳಾದ  ರಮೇಶ್ ಗೌಡ, ಚಂದ್ರಮೋಹನ್, ಪ್ರವೀಣ್, ಬಿ.ಪಿ ಜಬೀವುಲ್ಲಾ, ಮಹಾದೇವ್ರು ಬಂದು ಪೊಲೀಸ್ ಠಾಣೆಗೆ ತಿಳಿಸಿ ರಾಬರ್ಟ್ ಸನ್ ಪೇಟೆ ಪೊಲಿಸ್ ಠಾಣೆ ಪಿ.ಎಸ್.ಐ ರವರಾದ ಶ್ರೀ ಸೂರ್ಯ ಪ್ರಕಾಶ್ ಸಿಬ್ಬಂದಿಯವರಾದ ಪ್ರೇಮಲತಾ ರವರೊಂದಿಗೆ ರಾಬರ್ಟ್ ಸನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಬೆಳಿಗ್ಗೆ 11.30 ಗಂಟೆಗೆ ಹೋಗಿ ಹೊರಗೆ ಕಾಯುತ್ತಿದ್ದಾಗ ಬೆಳಿಗ್ಗೆ 11.45 ಗಂಟೆಗೆ ವೈದ್ಯಾದಿಕಾರಿಗಳು  ಯುಸೂಫ್‌ ಮತ್ತು  ಸಜಿಯ ರವರನ್ನು ಡಿಸ್ ಚಾರ್ಜ್ ಮಾಡಿದ್ದು ಆ ಸಮಯದಲ್ಲಿ ಆರೋಪಿ ಯುಸೂಪ್‌ ಎಂಬುವರು ಓಡಿ ಹೋಗಿ ತಪ್ಪಿಸಿ ಕೊಳ್ಳಲು ಪ್ರಯತ್ನಿಸಿದಾಗ ದೂರುದಾರರು ಹಾಗೂ ಜೊತೆಯಲ್ಲಿದ್ದ ಅದಿಕಾರಿ ಸಿಬ್ಬಂದಿಯವರು ಹಿಡಿದು ಕೊಂಡು ಜೀಪಿನಲ್ಲಿ ಕುಳ್ಳಿರಿಸಿದಾಗ ಆರೋಪಿ ಯುಸೂಫ್‌ , ಸಂಜಿಯ, ನಾಯಾಜ್‌,  ಇತರರು ಅಕ್ರಮ ಗುಂಪು ಕಟ್ಟಿ ಕೊಂಡು ಜೀಪಿಗೆ ಅಡ್ಡ ಹಾಕಿದ್ದು  ಸರ್ಕೆಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ  ಹಲ್ಮಾಲೆ ಮಾಡಿರುತ್ತುತಾರೆ.

-ಅಸ್ವಾಭಾವಿಕ ಮರಣ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣ ದಾಖಲಾಗಿರುತ್ತದೆ ದಿನಾಂಕ. 30.03.2016 ರಂದು ಮಧ್ಯಾಹ್ನ 2.15 ಗಂಟೆಗೆ ದೂರುದಾರರಾದ ಶ್ರೀ.ಚಲಪತಿ ಬಿನ್‌ ರಾಮಕೃಷ್ಣಪ್ಪ, ದಾಸೇನಹಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ದೂರುದಾರರ ಹೆಂಡತಿ ಮುನಿರತ್ನಮ್ಮ ರವರಿಗೆ ಈಗ್ಗೆ ಸುಮಾರು ಒಂದು ವಾರದಿಂದ ವಿಪರೀತವಾಗಿ  ಹೊಟ್ಟೆನೋವು ಬರುತ್ತಿದ್ದು ಇದರ ಬಗ್ಗೆ ಬೇತಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು ಗುಣಮುಖ ವಾಗದೆ  ದಿನಾಂಕ.29.03.2016 ರಂದು ಬೆಳಗ್ಗೆ 11.00 ಗಂಟೆ ಸಮಯದಲ್ಲಿ ವಿಪರೀತವಾಗಿ ಹೊಟ್ಟೆ ನೋವು ಬಂದು ತಾಳಲಾರದೆ ಮನೆಯಲ್ಲಿದ್ದ ಯಾವುದೊ ವಿಷಸೇವನೆ ಮಾಡಿದ್ದು ,ಅವರನ್ನು ಬೇತಮಂಗಳ ಅಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯ ಮೃತಪಟ್ಟಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s