ದಿನದ ಅಪರಾಧಗಳ ಪಕ್ಷಿನೋಟ 27ನೇ ಮಾರ್ಚ್‌ 2016 ಸಂಜೆ

 ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ  ದಿನಾಂಕ: 27.03.2016 ರಂದು  ಬೆಳಿಗ್ಗೆ  10. 00 ಗಂಟೆಯಿಂದ  ಸಂಜೆ 5.00   ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :01

ಚಾಂಪಿಯನ್‌ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 27.03.2016 ರಂದು ಬೆಳಿಗ್ಗೆ 06.30 ಗಂಟೆಗೆ ದೂರುದಾರರಾದ ಶ್ರೀಮತಿ ಗ್ಲೋರಿಯ ಕೋಂ ಸಾಮಸಾನ್‌  48 ವರ್ಷ, ನಂ 89 ಬಿ ಬ್ಲಾಕ್‌, ಚಾಂಪಿಯನ್‌ರೀಫ್ಸ್‌ ರವರು ನೀಡಿದ ದೂರಿನಲ್ಲಿ  ಈಗ್ಗೆ 01 ತಿಂಗಳ ಹಿಂದೆ ಚೀಟಿಗಳನ್ನು ಎತ್ತಿ ಚೀಟಿಯಿಂದ ಬಂದ ಹಣವನ್ನು 2,25,000/-ರೂ ಗಳನ್ನು ನಮ್ಮ ಮನೆಯ ಬೀರುವಿನ ಲಾಕರ್ ನಲ್ಲಿ ಇಟ್ಟಿದ್ದೆವು. ದಿನಾಂಕ:26-03-2016 ರಂದು ರಾತ್ರಿ ಅವರ ಮನೆಗೆ ಬೀಗ ಹಾಕಿಕೊಂಡು ಈಸ್ಟರ್ ಪ್ರಾರ್ಥನೆ ಸಲುವಾಗಿ ವಿಕ್ಟರಿ ಚರ್ಚ್ ಗೆ  ಕುಟುಂಬದೊಂದಿಗೆ ಹೋಗಿದ್ದು ಪ್ರಾರ್ಥನೆ ಮುಗಿಸಿಕೊಂಡು ದಿನಾಂಕ:27.03.2016 ರಂದು ಬೆಳಗಿನ ಜಾವ ಸುಮಾರು 4-10 ಗಂಟೆಗೆ  ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲು ತೆರೆದಿದ್ದು  ಯಾರೋ ಕಳ್ಳರು ಬೀರು ತೆರೆದು ಬೀರುವಿನ ಲಾಕರ್ ನಲ್ಲಿ ಇಟ್ಟಿದ್ದ ನಗದು ಹಣ 2,25.000/- ರೂ ಮತ್ತು 05 ಗ್ರಾಂ ನ ಒಂದು ಜೊತೆ ಬಂಗಾರದ ಓಲೆ, ಜುಮುಕಿ ಬೆಲೆ ಸುಮಾರು 10,000/- ರೂ ಮತ್ತು ಹಳೆ ನೋಕಿಯಾ ಮೊಬೈಲ್‌ ಬೆಲೆ ಸುಮಾರು 500/- ರೂ ಇವುಗಳ ಒಟ್ಟು ಬೆಲೆ 2,35,500/- ರೂ ಬೆಲೆಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರ.

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ‌ಇಲ್ಲ

-ಅಪಹರಣ :ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ :01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹುಡುಗ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 27.03.2016 ರಂದು ದೂರುದಾರಾದ ಶ್ರೀಮತಿ ಐಶ್ರತ್‌ಉನ್ನಿಸಾ ಕೋಂ  ಅಬ್ದುಲ್‌ ಖುದ್ದೂಸ್‌ ಸುಮತಿ ನಗರ ರಾಬರ್ಟ್‌‌ಸನ್‌‌ಪೇಟೆ ರವರು ನೀಡದ ದೂರಿನಲ್ಲಿ ದೂರುದಾರರ ಮಗನಾದ ಶ್ರೀ.ದಾನೀಶ್.ಕೆ, ವಯಸ್ಸು 26 ವರ್ಷ ರವರು  ಮಾನಸಿಕ ಅಸ್ವಸ್ಥನಾಗಿದ್ದು, ದಿನಾಂಕ 26.03.2016 ರಂದು ಮಧ್ಯಾಹ್ನ 02.00 ಗಂಟೆಯಲ್ಲಿ ಅವರ ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆಂದು ಹೇಳಿ ಹೋದವನು, ಪುನಃ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾನೆ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s