ದಿನದ ಅಪರಾಧಗಳ ಪಕ್ಷಿನೋಟ 27ನೇ ಮಾರ್ಚ್ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:26.03.2016 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ: 27.03.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ‌ಇಲ್ಲ

-ಅಪಹರಣ :ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : 01

ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ ಜಿ.ಅಭಿಲಾಷ್ (32) ಬಿನ್ ವಿ.ಗೋವಿಂದಪ್ಪ, ವಾಸ: 3ನೇ ಕ್ರಾಸ್, ಕುವೆಂಪು ನಗರ, ದಾಸರಹೊಸಹಳ್ಳಿ, ಬಂಗಾರಪೇಟೆ ತಾಲ್ಲೂಕು, ಕೆ.ಜಿ.ಎಫ್. ಇವರ ತಂಗಿ ಕು. ನೇತ್ರಾ. ಜಿ, 23 ವರ್ಷ ಎಂಬಾಕೆಯು ಜಿ.ವಿ.ಐ.ಟಿ ಕಾಲೇಜಿನಲ್ಲಿ 2ನೇ ಸೆಮಿಸ್ಟರ್ ಎಂ.ಕಾಂ ವ್ಯಾಸಂಗ ಮಾಡುತ್ತಿದ್ದು, ದಿನಾಂಕ: 23-03-2016 ರಂದು ಬೆಳಿಗ್ಗೆ 09.00 ಗಂಟೆಗೆ ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದು, ಸಂಜೆ ಮನೆಗೆ ವಾಪಸ್ ಬಾರದೇ ಕಾಣೆಯಾಗಿರುತ್ತಾಳೆ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 02

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.   ಈ ಪ್ರಕರಣದ ದೂರುದಾರರಾದ ಶ್ರೀ ಸೋಮಸುಂದರ ಪ್ರಸಾದ್ (59) ಬಿನ್ ಲೇಟ್. ರಾಮಚಂದ್ರಪ್ರಸಾದ್, ಎ.ಎಸ್.ಐ., ಬಂಗಾರಪೇಟೆ ಪೊಲೀಸ್ ಠಾಣೆ, ಕೆ.ಜಿ.ಎಫ್. ಘಟಕ ಇವರು, ದಿನಾಂಕ:24.03.2016 ರಂದು ರಾತ್ರಿ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದ ಜಾತ್ರೆ ಬಂದೋಬಸ್ತ್ ಕರ್ತವ್ಯವನ್ನು ಮುಗಿಸಿಕೊಂಡು ದಿನಾಂಕ:25.03.2016 ರಂದು ಬೆಳಿಗ್ಗೆ 5.00 ಗಂಟೆ ಸಮಯದಲ್ಲಿ ರಾಬರ್ಟ್ ಸನ್ ಪೇಟೆ ಪೊಲಿಸ್ ಠಾಣೆಯಲ್ಲಿ ವರದಿ ಮಾಡಲು ಎಸ್.ಎಸ್.ಆರ್. ಖಾಸಗಿ ಬಸ್ ವಾಹನ ಸಂಖ್ಯೆ: ಕೆಎ-08-5373 ಅನ್ನು ಹತ್ತಿ ಸೀಟಿನಲ್ಲಿ ಕುಳಿತಿರುವಾಗ ಬೆಳಿಗ್ಗೆ ಸುಮಾರು 5.30 ಗಂಟೆ ಸಮಯದಲ್ಲಿ ಸೂರಜ್ ಮಲ್ ವೃತ್ತದಲ್ಲಿ ವೇಗವಾಗಿ ಬಲಕ್ಕೆ ತಿರುಗಿಸಿದಾಗ ಸೀಟಿನಲ್ಲಿ ಕುಳಿತ್ತಿದ್ದ  ದೂರುದಾರರು ಬಾಗಿಲ ಮೂಲಕ ಕೆಳಗೆ ಬಿದ್ದು ಎಡಕೈನ ಭುಜದ ಕೆಳಗೆ ಊತಗಾಯವಾಗಿರುತ್ತೆ. ಮತ್ತು ಎಡಗಾಲಿನ ಮೊಣಕಾಲಿನ ಮೇಲೆ ತರಚಿದ ಗಾಯವಾಗಿರುತ್ತೆ ಹಾಗೂ ಬಸ್ಸಿನ ಚಾಲಕ ಬಸ್ಸನ್ನು ನಿಲ್ಲಿಸದೆ ಹೊರಟು ಹೋಗಿರುತ್ತಾನೆ.   ಬಸ್ಸಿನ ಚಾಲಕನ ಹೆಸರು ವಿಳಾಸ ತಿಳಿಯಬೇಕಿದೆ.

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ ಎಂ.ಸಂಜಯ್ (26) ಬಿನ್ ಮುರಳಿ,  ವಾಸ ನಂ. 639, ಕೆ.ಎಸ್.ಆರ್‍.ಟಿ. ಡಿಪೋ ಸಮೀಪ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್. ಇವರು, ದಿನಾಂಕ 25.03.2016 ರಂದು ರಾತ್ರಿ 08.30 ಗಂಟೆಯಲ್ಲಿ ಗುಡ್ ಪ್ರೈಡೇ ಪ್ರಯುಕ್ತ ರಾಬರ್ಟ್ ಸನ್ ಪೇಟೆ ಠಾಣಾ ಸರಹದ್ದಿನ ಸಂತ ತೇರೆಸಾ ಚರ್ಚಿನಲ್ಲಿ ಪ್ರಾರ್ಥನೆ ಮುಗಿಸಿಕೊಂಡು, ಮನೆಗೆ ವಾಪಸ್ಸು ಹೋಗುವ ಸಲುವಾಗಿ ಯಮಹಾ ಆರ್.ಎಕ್ಸ್ ದ್ವಿಚಕ್ರ ವಾಹನದ ನೊಂದಣಿ ಸಂಖ್ಯೆ ಕೆ.ಎ-08 ಹೆಚ್-2112 ರಲ್ಲಿ ಕೆ.ಜಿ.ಎಫ್-ಕುಪ್ಪಂ ಮುಖ್ಯರಸ್ತೆಯಲ್ಲಿರುವ ಮಂಜುಶ್ರೀ ಆಸ್ಪತ್ರೆಯ ಮುಂಭಾಗದ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ, ಎದುರುಗಡೆಯಿಂದ ಕಪ್ಪು ಬಣ್ಣದ ಹೋಂಡಾ ಯುನಿಕಾರ್ನ್ ದ್ವಿಚಕ್ರದ ವಾಹನದ ಸವಾರನು (ಹೆಸರು ವಿಳಾಸ ಗೊತ್ತಿಲ್ಲ), ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗೂರುಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಎದುರುಗಡೆ ಡಿಕ್ಕಿ ಪಡಿಸಿದ್ದರಿಂದ, ದೂರುದಾರರಿಗೆ ರಕ್ತಗಾಯಗಳಾಗಿರುತ್ತವೆ.

-ಭದ್ರತಾ ಕಾಯ್ದೆ : ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸ್ಪೋಟಕ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 25.03.2016 ರಂದು ಮಲಿಯಾಳಿ ಕಮಿಟಿ ವತಿಯಿಂದ ಶ್ರೀ ಪ್ರಸನ್ನಲಕ್ಷ್ಮೀವೆಂಕಟರಮಣ ಸ್ವಾಮಿಯ ಹಂಸ ವಾಹನೋತ್ಸವ ಕಾರ್ಯಕ್ರಮದ ಅಂಗವಾಗಿ ಸುರೇಶ್‌ಕುಮಾರ್‍ ಅಲಿಯಾಸ್ ದಾಡಿ ಸುರೇಶ್, ಆರ್ಗನೈಜರ್‍, ಕ್ಯ್ರಾಕರ್‌ ಶೋ, ರಾಬ್ಟ್‌‌ಸನ್‌ಪೇಟೆ, ಕೆ.ಜಿ.ಎಫ್. ಇವರು ಕಿಂಗ್ ಜಾರ್ಜ್ ಹಾಲ್ ಆವರಣದ ಪಾರ್ಕಿನಲ್ಲಿ ಬಾಣ ಬಿರುಸುಗಳ(ಪಟಾಕಿ) ಹಚ್ಚುವ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ದೂರುದಾರರಾದ ಶ್ರೀ ಕಾರ್ತಿಕ್ (19) ಬಿನ್ ಎಲ್.ರವಿ, ವಾಸ: ಗಣೇಶಪುರಂ, ರಾಬ್ಟ್‌‌ಸನ್‌ಪೇಟೆ, ಕೆ.ಜಿ.ಎಫ್. ಇವರು  ಮತ್ತು ಇವರ ತಂದೆಯ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮಾಡುವ ಪ್ರತಾಪ್ (20) ರವರೊಂದಿಗೆ ಪಟಾಕಿ ಹಚ್ಚುವುದನ್ನು ನೋಡುವ ಸಲುವಾಗಿ ಕಿಂಗ್ ಜಾರ್ಜ್ ಹಾಲ್ ಬಳಿ ಇರುವ ಸುಮನ್ ಕಲ್ಯಾಣ ಮಂಟಪದ ಬಳಿ ನಿಂತುಕೊಂಡಿದ್ದಾಗ ರಾತ್ರಿ ಸುಮಾರು 02.15 ಗಂಟೆಯ ಸಮಯದಲ್ಲಿ ಪಟಾಕಿಗಳು ಆಗಸದಲ್ಲಿ ಸ್ಟೋಟಗೊಂಡು ಬಣ್ಣದ ಚಿತ್ತಾರ ಮೂಡಿ ಬರುತ್ತಿದ್ದು, ಆ ಸಮಯದಲ್ಲಿ ಅವರು ಹಚ್ಚಿದ ಪಟಾಕಿ ಮೇಲೆ ಹೋಗದೆ ದಿಕ್ಕು ತಪ್ಪಿ, ದೂರುದಾರರು ನಿಂತಿರುವ ಸ್ಥಳದಲ್ಲಿ ಬಂದು ಸ್ಪೋಟಗೊಂಡಿದ್ದರಿಂದ ದೂರುದಾರರ ಬಲಗಾಲಿನ ಮೂರು ಬೆರಳುಗಳಿಗೆ, ಎಡಗಾಲಿನ ಮೊಣ ಕಾಲಿನ ಕೆಳಭಾಗದಲ್ಲಿ ರಕ್ತಗಾಯಗಳಾಗಿರುತ್ತವೆ ಮತ್ತು ಪ್ರತಾಪ್ ರವರ ಎರಡು ಕಾಲುಗಳಿಗೂ ಸಹ ರಕ್ತಗಾಯಗಳಾಗಿದ್ದು, ಇನ್ನೂ ಸುಮಾರು 07 ರಿಂದ 08 ಜನರಿಗೆ ಇದೇ ರೀತಿ ಪಟಾಕಿ ಸಿಡಿತದಿಂದ ಗಾಯಗಳಾಗಿರುತ್ತದೆ.   ಅದ್ದರಿಂದ ಪಟಾಕಿ ಹಚ್ಚುವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಸುರೇಶ್ ಕುಮಾರ್@ದಾಡಿ ಸುರೇಶ್ ರವರು ಮುಂಜಾಗ್ರತಾ ಕ್ರಮಗಳನ್ನು ವಹಿಸದೇ ನಿರ್ಲಕ್ಷತನದಿಂದ ಪಟಾಕಿ ಹಚ್ಚಿದರಿಂದ ಇಂತಹ ಘಟನೆ ನಡೆದಿರುತ್ತದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s