ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:19.03.2016 ರಂದು ಸಂಜೆ 5.00 ಗಂಟೆಯಿಂದ ದಿನಾಂಕ: 20.03.2016 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.
-ಕೊಲೆ : ಇಲ್ಲ
-ಕೊಲೆಗೆ ಪ್ರಯತ್ನ : ಇಲ್ಲ
-ಡಕಾಯತಿ : ಇಲ್ಲ
-ಸುಲಿಗೆ : ಇಲ್ಲ
-ಕನ್ನ ಕಳುವು : 01
ಚಾಂಪಿಯನ್ ರೀಫ್ಸ್ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 19.03.2016 ರಂದು ದೂರುದಾರಾದ ಶ್ರೀ ಅರವಿಂದ್ ಕುಮಾರ್ ಬಿನ್ ದನಶೇಖರನ್ 31 ವರ್ಷ, ಎಂ.ವಿ ನಗರ ಬೆಮೆಲ್ ರವರು ನೀಡಿದ ದೂರಿನಲ್ಲಿ ದಿನಾಂಕ: 18.03.2016 ರಂದು ದೂರುದಾರರು ಮತ್ತು ಸಹಪಾಠಿಯಾದ ಇಲಿಮಾ ರವರು ಬೆಸ್ಕಾಂ ಸ್ಟೋರ್ ರೂಮ್ನಲ್ಲಿ 468 LED ಬಲ್ಬ್ ಗಳನ್ನು ಇಟ್ಟು ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ: 19.03.2016 ರಂದು ಬೆಳಿಗ್ಗೆ 09.45 ಗಂಟೆಗೆ ದೂರುದಾರರು ಹಾಗೂ ಸಹಪಾಠಿಯಾದ ಶ್ರೀಮತಿ. ರಾಧಿಕಾ ರವರೊಂದಿಗೆ ಸದರಿ ಸ್ಟೋರ್ ರೋಮ್ನ ಬೀಗಗಳನ್ನು ತೆಗೆಯಲು ನೋಡಿದಾಗ ಬಾಗಿಲಿಗೆ ಹಾಕಿದ್ದ ಬೀಗ ಇಲ್ಲದೇ ಇದ್ದು ಬಾಗಿಲು ತೆರೆದುಕೊಂಡಿದ್ದು ನೋಡಲಾಗಿ ಸುಮಾರು ಸುಮಾರು 46,800/- ರೂ ಬೆಲೆಬಾಳುವ 468 LED Bulbs ನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.
-ಕಳವು ಪ್ರಕರಣ : ಇಲ್ಲ
-ಸಾಮಾನ್ಯ ಕಳುವು :01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 19.03.2016 ರಂದು ದೂರುದಾರರಾದ ಶ್ರೀ. ವಿಶ್ವನಾಥ್ ಬಿನ್ ರಾಮಕೃಷ್ಣಗೌಡ ಕೋಡಿಗೇನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ. 17.03.2016 ರಂದು ರಾತ್ರಿ 8.30 ಗಂಟೆಯಲ್ಲಿ ದೂರುದಾರರು ಅವರ ಮೋಟರ್ ಸೈಕಲ್ ನಂ. ಕೆಎ-08-ಎಲ್-9919 ರನ್ನು ಅವರ ಮನೆಯ ಕಾಂಪೌಂಡ್ ನಲ್ಲಿ ನಿಲ್ಲಿಸಿದ್ದು ಮರುದಿನ ಬೆಳಗಿನ ಜಾವ 4.00 ಗಂಟೆಯಲ್ಲಿ ಕಾಂಪೌಂಡ್ನಲ್ಲಿ ನಿಲ್ಲಿಸಿದ್ದ ವಾಹನವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತಾರೆ. ವಾಹನದ ಬೆಲೆ ಸುಮಾರು ರೂ 45,000/- ಗಳಾಗಿರುತ್ತದೆ.
-ದೊಂಬಿ : ಇಲ್ಲ
-ಮೋಸ: ಇಲ್ಲ
-ಹಲ್ಲೆ : ಇಲ್ಲ
-ಅಪಹರಣ :ಇಲ್ಲ
-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : 02
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 22.02.2013 ರಂದು ದೂರುದಾರರಾದ ಶ್ರೀಮತಿ ಕವಿತಾ, ೨೨ ವರ್ಷ, ವಾಸ ಪಾಕರಹಳ್ಳಿ ರವರು ಪಾಕರಹಳ್ಳಿ ವಾಸಿಯಾದ ಶಂಕರ್ ರವರೊಂದಿಗೆ ಮದುವೆಯಾಗಿದ್ದು, ಮದುವೆ ಕಾಲದಲ್ಲಿ ಶಂಕರ್ ರವರಿಗೆ ವರದಕ್ಷಿಣೆಯಾಗಿ ಒಂದು ಬಂಗಾರದ ಚೈನ್, ಒಂದು ಉಂಗುರ ಒಟ್ಟು 30 ಗ್ರಾಂ ನಷ್ಟು, & ಹೀರೋ ಹೊಂಡಾ ಪ್ಯಾಷನ್ ಪ್ರೋ ದ್ವಿಚಕ್ರ ವಾಹನ ಮತ್ತು ಕೈಗೆ 80,000/- ರೂಗಳನ್ನು ನೀಡಿರುತ್ತದೆ. 6 ತಿಂಗಳ ಕಾಲ ಅನ್ಯೋನ್ಯವಾಗಿದ್ದು ನಂತರ ದೂರುದಾರರಿಗೆ ಅತ್ತೆ ರತ್ನಮ್ಮ, ಮಾವ ಸೀನಪ್ಪ, ಮೈದುನ ಸುಬ್ರಮಣಿ, & ತನ್ನ ಗಂಡನ ದೊಡ್ಡಪ್ಪ ಆಂಜಿನಪ್ಪ ಎಲ್ಲರೂ ಮತ್ತೆ ವರದಕ್ಷಿಣೆ ತರುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳವನ್ನು ನೀಡಿ ಕೆಟ್ಟ ಮಾತುಗಳಿಂದ ಬೈದು, ಹಲ್ಲೆ ಮಾಡಿ, ತವರು ಮನೆಗೆ ಕಳುಹಿಸಿರುತ್ತಾರೆ. ದಿನಾಂಕ 11.03.2016 ರಂದು ತನ್ನ ಗಂಡ ಶಂಕರ್ ರವರ ಮನೆಗೆ ಬಂದಾಗ ಮತ್ತೆ ಕಿರುಕುಳವನ್ನು ನೀಡಿರುತ್ತಾರೆ.
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ವೀಣಾ ಕೋಂ ಅಯ್ಯಪ್ಪ, ೩೦ ವರ್ಷ, ಕೆ.ಹೆಚ್.ಬಿ ಕಾಲೋನಿ, ಶಾಂತಿ ನಗರ ಬಂಗಾರಪೇಟೆ ರವರು ಸುಮಾರು 11 ವರ್ಷಗಳ ಹಿಂದೆ ಅಯ್ಯಪ್ಪ ರವರೊಂದಿಗೆ ವಿವಾಹವಾಗಿದ್ದು, ವಿವಾಹದ ಸಮಯದಲ್ಲಿ (1) 60 ಗ್ರಾಂ ಚಿನ್ನದ ಹಾರ, (2) 30 ಗ್ರಾಂ ಚಿನ್ನದ ನೆಕ್ಲೆಸ್ (3) ಎರಡು 24 ಗ್ರಾಂ ಚಿನ್ನದ ಬಳೆ (4) ಚಿನ್ನದ ಚೈನು ಮತ್ತು ಡಾಲರ್ 20 ಗ್ರಾಂ, (5) 8 ಗ್ರಾಂ, ಚಿನ್ನದ ಉಂಗುರ (6) 16 ಗ್ರಾಂ ಚಿನ್ನದ ಬ್ರಾಸ್ ಲೈಟ್ (7) ಫಲ್ಸರ್ ದ್ವಿಚಕ್ರವಾಹನ (8) ಹಾಗೂ ಇತರೆ ಬೆಳ್ಳಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಿರುತ್ತಾರೆ. ಗಂಡ ಅಯ್ಯಪ್ಪ ರವರು ದೂರುದಾರರಿಗೆ ಮನೆ ನವೀಕರಣಕ್ಕೆ ಎರಡು ಲಕ್ಷ ರೂಗಳು ತರುವಂತೆ ಮಾನಾಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳವನ್ನು ನೀಡುತ್ತಿದ್ದು ಈ ಬಗ್ಗೆ ತನ್ನ ಗಂಡನ ವಿರುದ್ದ ಜೀವನಾಂಶ ಪ್ರಕರಣವನ್ನು ಬಂಗಾರಪೇಟೆ ನ್ಯಾಯಾಲಯದಲ್ಲಿ ನೋಂದಾಯಿಸಿರುತ್ತದೆ. ಇದಾದ ನಂತರ ದಿನೇದಿನೇ ದೂರುದಾರರನ್ನು ಹೊಡೆದು ದೈಹಿಕ ಹಿಂಸೆ ನೀಡಿ ಕೆಟ್ಟ ಮಾತುಗಳಿಂದ ಬೈದು ಮಾನಸಿಕವಾಗಿ ಹಿಂಸೆ ನೀಡಿ ವಿವಾಹ ವಿಚ್ಚೇದನೆ ನೀಡು ಇಲ್ಲವಾದರೆ ವಾಮಾಚಾರ ಕೆಲಸಗಳಿಂದ ಮುಗಿಸಿ ಬಿಡುತ್ತೇವೆಂದು, ಹಾಗು ದೂರುದಾರರ ತಂದೆ ನಿವೃತ್ತಿಯಾಗಿದ್ದು 2 ಲಕ್ಷ ರೂಗಳ ಹಣವನ್ನು ವರದಕ್ಷಿಣೆಯಾಗಿ ತೆಗೆದುಕೊಂಡು ಬಾ ಇಲ್ಲವಾದರೆ ಸಾಯಿಸುವುದಾಗಿ ಪ್ರಾಣಬೆದರಿಕೆ ಹಾಕಿರುತ್ತಾನೆ.
-ಮನುಷ್ಯ ನಾಪತ್ತೆ : 03
ಬೇತಮಂಗಳ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 19.03.2016 ರಂದು ಬೆಳಗ್ಗೆ 10.30 ಗಂಟೆಗೆ ದೂರುದಾರರಾದ ಶ್ರೀಮತಿ ಮಾನುಷ್ಯ 23 ವರ್ಷ, ಪೋತರಾಜನಹಳ್ಳಿ ರವರು ನೀಡಿದ ದೂರಿನಲ್ಲಿ ದೂರುದಾರರ ಗಂಡ ಚಂದ್ರಶೇಖರ್ 30 ವರ್ಷ , ಪೋತರಾಜನಹಳ್ಳಿ ಗ್ರಾಮ ರವರು ಕೆ.ಎಸ್.ಆರ್.ಟಿ.ಸಿ ಮಾಲೂರು ಡಿಪ್ಪೊವಿನಲ್ಲಿ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಆತನು ಪ್ರತಿ ದಿನ ಅವರ ಗ್ರಾಮದಿಂದ ಕೆಲಸಕ್ಕೆ ಹೋಗಿ ಬರುತ್ತೆನೆಂದು ಹೇಳಿ ದಿ. 13.03.2016 ರಂದು ಮಧ್ಯಾಹ್ನ 12.00 ಗಂಟೆಗೆ ಕೆಲಸಕ್ಕೆ ಹೋದವರು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸ್ಸು ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 19.03.2016 ರಂದು ದೂರುದಾರರಾದ ಶ್ರೀ. ಪಯಾಜ್ ಅಹ್ಮದ್ 55 ವರ್ಷ, ಹೆನ್ರೀಸ್ 1ನೇ ಲೈನ್ ಕೋರಂಂಡಲ್ ರವರು ನೀಡಿದ ದೂರಿನಲ್ಲಿ ದಿನಾಂಕ:16.03.2016 ರಂದು ರಾತ್ರಿ 09-00 ಗಂಟೆ ಸಮಯದಲ್ಲಿ ದೂರುದಾರರ ಮಗಳಾದ 21 ವರ್ಷ ವಯಸ್ಸಿನ ಅಯಿಷಾ ಬೇಗಂ ಎಂಬುವವರು ಆಂಡ್ರಸನ್ ಪೇಟೆಯ ಭಾರತೀಪುರಂ ನಲ್ಲಿರುವ ತನ್ನ ಅಕ್ಕನ ಮನೆಗೆ ಹೋಗಿಬರುತ್ತೆನೆಂದು ಹೇಳಿ ಮನೆಯಿಂದ ಹೋದವಳು ಅವರ ಅಕ್ಕನ ಮನೆಗೂ ಹೋಗದೇ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ.
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 05.03.2016 ರಂದು ಬೆಳಿಗ್ಗೆ 9.00 ಗಂಟೆ ಸಮಯದಲ್ಲಿ ದೂರುದಾರರಾದ ಶ್ರೀಮತಿ ಶ್ಯಾಮಲಮ್ಮ ಕೋಂ ಲೇಟ್ ನಾರಾಯಣರೆಡ್ಡಿ, ವಿಜಯನಗರ ಬಂಗಾರಪೇಟೆ ರವರ ಮಗಳಾದ ಕು: ಭವಾನಿ, ವಯಸ್ಸು 20 ವರ್ಷ, ರವರು ಕೋಲಾರದ ಸರ್ಕಾರಿ ಲಾ ಕಾಲೇಜಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾಳೆ.
-ಜೂಜಾಟ ಕಾಯ್ದೆ : ಇಲ್ಲ
-ಅಪಘಾತಗಳು :ಇಲ್ಲ
-ಭದ್ರತಾ ಕಾಯ್ದೆ : ಇಲ್ಲ
-ಇತರೆ ಪ್ರಕರಣಗಳು :ಇಲ್ಲ
-ಅಸ್ವಾಭಾವಿಕ ಮರಣ : ಇಲ್ಲ
-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.