ದಿನದ ಅಪರಾಧಗಳ ಪಕ್ಷಿನೋಟ 15 ನೇ ಮಾರ್ಚ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:15.03.2016 ರಂದು ಬೆಳಿಗ್ಗೆ 10.00 ಗಂಟೆಯಿಂದ   ಸಂಜೆ 05.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ:ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ‌01

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 15.03.2016 ರಂದು ದೂರುದಾರರಾದ ಶ್ರೀ  ಆನಂದ ಕುಮಾರ್‌ ಬಿನ್‌ ವೆಂಕಟರಾಮಪ್ಪ, ಪದ್ದಪಲ್ಲಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 13.03.2016 ರಂದು ಬೆಳಗ್ಗೆ 10.00 ಗಂಟೆ ಸಮಯದಲ್ಲಿ  ದೂರುದಾರರು ಅವರ ವಾಸದ ಮನೆಯ ಮುಂಭಾಗ ಇದ್ದಾಗ ಆರೋಪಿಗಳಾದ  ವಿಕ್ಕಿ, ಗೋಪಿ, ಪೂಂಡಿಯನ್‌. ಅಪ್ಪಿ ರವರುಗಳು  ಏಕಾ ಎಕಿ ಜಗಳ ಮಾಡಿ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಹೊಡೆದು, ಮನೆಯ ಒಳಗೆ ನುಗ್ಗಿ ಕಿಟಕಿ ಗಾಜುಗಳನ್ನು  ಪುಡಿ ಪುಡಿ ಮಾಡಿ  ಓಡಿ ಹೋಗಿರುತ್ತಾರ.

-ಅಪಹರಣ :01

ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ  ಹುಡುಗಿಯನ್ನು ಅಪಹರಣ ಮಾಡಿರುವ ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 15.03.2016 ರಂದು ದೂರುದಾರರಾದ ಶ್ರೀಮತಿ ಅನಿತಾ ಕೋಂ  ಮುರಳಿ 32 ವರ್ಷ, 2 ನೇ ಎಂ ಜಿ ಮಾರುಕಟೆ ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ ದೂರುದಾರರ ಮಗಳಾದ ಮಧುಮಿತ, ವಯಸ್ಸು 13 ವರ್ಷ ಎಂಬಾಕೆಯು ರಾಬರ್ಟ್ ಸನ್ ಪೇಟೆಯಲ್ಲಿರುವ  ಸಂತ್ ತೇರೆಸಾ ಪ್ರೌಢ ಶಾಲೆಯಲ್ಲಿ 09ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ದಿನಾಂಕ14.03.2016 ರಂದು ಬೆಳಿಗ್ಗೆ 11.00 ಗಂಟೆಯಲ್ಲಿ ಮನೆಯಲ್ಲಿದ್ದ ಮಧುಮಿತಳನ್ನು ಪಕ್ಕದ ಮನೆಯ ವಾಸಿಯಾದ ದೀಪಕ್ ಬಾಬು@ಬಾಬು ಎಂಬಾತನು ಅಪಹರಿಸಿಕೊಂಡು  ಹೋಗಿರುತ್ತಾರೆ.

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 15.03.2016 ರಂದು ದೂರುದಾರರಾದ ಶ್ರೀ ಗೌಸ್‌ಪಾಷಾ ಬಿನ್‌  ಸಿಕ್ಕಂದರ್‌ಸಾಬ್‌ 43 ವರ್ಷ,  ಸಿ’ ರಹೀಮ್‌ ನಗರ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ 11.03.2016 ರಂದು ಬೆಳಿಗ್ಗೆ 8.30 ಗಂಟೆಸಮಯದಲ್ಲಿ ದೂರುದಾರರ ಮಗಳಾದ ಕುಮಾರಿ ರೋಷಿಣಿ ಪರ್ಹೀನ್, 19 ವರ್ಷ ರವರು ಬಂಗಾರಪೇಟೆ ಕೆ.ಜಿ.ಎಫ್ ಮುಖ್ಯ ರಸ್ತೆಯಲ್ಲಿರುವ ಎನ್‌.ಜೆ ಕೆ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತೇನೆಂತ ಹೇಳಿ ಹೋದವಳು ಸಂಜೆಯಾದರೂ  ಮನೆಗೆ ವಾಪಸ್ಸು ಬರದೇ  ಕಾಣೆಯಾಗಿದ್ದು, ಈ ಬಗ್ಗೆ ಸಂಬಂಧಿಕರು & ಸ್ನೇಹಿತರ ಮನೆಗಳಲ್ಲಿ ಹುಡಕಾಡಲಾಗಿ ಪತ್ತೆಯಾಗಿರುವುದಿಲ್ಲವೆಂತ ಹಾಗೂ ಪರವನಹಳ್ಳಿ ಗ್ರಾಮದ ಮೂರ್ತಿ ಮತ್ತು ಶ್ರೀಮತಿ ಅರುಣ ಗುಮ್ಮರೆಡ್ಡಿಪುರ, ಶ್ರೀನಿವಾಸಪುರ ತಾಲ್ಲೂಕು ರವರ ಜೊತೆ ಹೋಗಿರಬಹುದೆಂತ ಅನುಮಾನವಿರುತ್ತದೆ. ಎಂದು ದೂರು ನೀಡಿರುತ್ತಾರೆ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ‌ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s