ದಿನದ ಅಪರಾಧಗಳ ಪಕ್ಷಿನೋಟ 15 ನೇ ಮಾರ್ಚ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:14.03.2016 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ: 15.03.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ:ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ‌01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:14.03.2016 ರಂದು ಬೆಳಗ್ಗೆ 08-15 ಗಂಟೆ ಸಮಯದಲ್ಲಿ ದೂರುದಾರರಾದ ಶ್ರೀ.  ವಿಜಯಕುಮಾರ್‌‌ ಬಿನ್‌ ವೆಂಕಟಪ್ಪ  45 ವರ್ಷ,  ನಾಗಕುಪ್ಪಂ ಗ್ರಾಮ ರವರು ನೀಡಿದ ದೂರಿನಲ್ಲಿ  ದೂರುದಾರರು  ಜೆಕೆ ಪುರಂನ ಗ್ರಾಮ ಬಳಿ ಇರುವ ಅವರ ಜಮೀನಿನ ಹತ್ತಿರ ಹೋಗಿ ಮಾವಿನ ಮರದ ಕೊಂಬೆಗಳನ್ನು ಯಾರೋ ಕಟಾವು  ಮಾಡಿದ್ದು, ಅದರ ವಿಚಾರವಾಗಿ ದೂರುದಾರರು ರವಣಪ್ಪರವರ ಬಳಿ ಯಾರೋ ಮಾವಿನ ಮರದ ಕೊಂಬೆಗಳನ್ನು ಕಟಾವು ಮಾಡಿರುವ ವಿಚಾರವನ್ನು ಹೇಳುತ್ತಿದ್ದಾಗ, ಆರೋಪಿ ಮಹೊದಿನ್‌ ಎಂಬುವರು  ದೂರುದಾರರ ಹತ್ತಿರ ಬಂದು ಯಾಕೇ ನಮ್ಮನ್ನು ಬಯ್ಯುತ್ತೀಯಾ ಎಂತ ಹೇಳಿ, ವಿನಾಃ ಕಾರಣ ಜಗಳ ಮಾಡಿ ಆತನ ಕೈಯಲ್ಲಿದ್ದ  ಒಂದು ಕಬ್ಬಿಣದ ರಾಡಿನಿಂದ  ವಿಜಯಕುಮಾರ್‌ ರವರ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

-ಅಪಹರಣ :ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :01

ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 14.03.2016 ರಂದು ದೂರುದಾರರಾದ ಶ್ರೀ.  ಮಂಜುನಾಥ ರಾವ್‌ ಬಿನ್‌  ನಾಗಭೂಷಣರಾವ್‌  24 ವರ್ಷ,  ವಿವೇಕನಂದ ನಗರ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ 13.03.2014 ರಂದು  ಸಂಜೆ ಸುಮಾರು 6.30 ಗಂಟೆ ಸಮಯದಲ್ಲಿ ಗಾಯಾಳು ಶ್ರೀನಿವಾಸ್ ರಾವ್ ಎಂಬುವನು ಆತನ ದ್ವಿ ಚಕ್ರ ವಾಹನ YAMAHA FASINO  (ನಂಬರ್ ಇರುವುದಿಲ್ಲ)ಅನ್ನು ಕೆಜಿಎಪ್ – ಕುಪ್ಪಂ ಮುಖ್ಯರಸ್ತೆ  ಲಕ್ಷ್ಮೀಸಾಗರ  ಗ್ರಾಮದ ಸಮೀಪ  ರಸ್ತೆಯಲ್ಲಿ ಸದರಿ  ಶ್ರೀನಿವಾಸ ರಾವ್‌ 27 ವರ್ಷ ವಿವೇಕನಂದ ನಗರ ರವರು ಅವರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ  ಲಕ್ಷ್ಮಿಸಾಗರ ಗ್ರಾಮದ ಬಳಿ ಕೆಳಗೆ ಬಿದ್ದಿದ್ದರಿಂದ  ಬಲ ಮತ್ತು ಎಡಗೈ , ಬಲಗಾಲು, ಬಲಸೊಂಟ, ಬಲತೊಡೆ ಮೇಲೆ ರಕ್ತ ಗಾಯಗಳಾಗಿರುತ್ತದೆ.

-ಭದ್ರತಾ ಕಾಯ್ದೆ : ‌ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s