ದಿನದ ಅಪರಾಧಗಳ ಪಕ್ಷಿನೋಟ 14 ನೇ ಮಾರ್ಚ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:13.03.2016 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ: 14.03.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

  -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿದ್ದು, ದಿನಾಂಕ 13.03.2016 ರಂದು ದೂರುದಾರರಾದ ಶ್ರೀ. ಪಿಚ್ಚಪ್ಪ  ಬಿನ್‌ ಚಿಕ್ಕಮುನೆಪ್ಪ  63 ವರ್ಷ, ನಾಗನಹಳ್ಳಿ ಗ್ರಾಮ  ರವರು ನೀಡಿದ ದೂರಿನಲ್ಲಿ                 ದಿನಾಂಕ:13.03.2016 ರಂದು ಮದ್ಯಾಹ್ನ 3.30 ಗಂಟೆಗೆ ದೂರುದಾರರ ಮಗಳಾದ ಹಂಸವೇಣಿಯನ್ನು ಈಗ್ಗೆ 8 ವರ್ಷಗಳ ಹಿಂದೆ ದೊಡ್ಡೂರು ಗ್ರಾಮದ ಮುನೆಪ್ಪನ ಮಗನಾದ ಶೇಖರ್ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದು, ಇವರಿಗೆ ಆಗಾಗ ಸಂಸಾರದ  ವಿಷಯದಲ್ಲಿ ಜಗಳವಾಗಿತ್ತಿತ್ತು, ದಿನಾಂಕ-12.03.2016 ರಂದು ರಾತ್ರಿ ಸುಮಾರು 12.00 ಗಂಟೆಗೆ ದೂರುದಾರರ ಮಗಳಿಗೂ ಆರೋಪಿ ಶೇಖರ್ ರವರಿಗೆ  ಸಂಸಾರದ ವಿಷಯದ ಬಗ್ಗೆ ಜಗಳವಾಗಿದ್ದು, ಅವರ ಅಳಿಯ  ಶೇಖರ್‌ ರವರು  ಹಂಸವೇಣಿ ರವರ ತಲೆಯ ಮೇಲೆ ಮಚ್ಚಿನಿಂದ ಹೊಡೆದು ರಕ್ತಗಾಯ ಪಡಿಸಿ, ಕೊಲೆ ಪ್ರಯತ್ನ ಮಾಡಿರುತ್ತಾರೆ.

-ಡಕಾಯತಿ : ಇಲ್ಲ

-ಸುಲಿಗೆ:ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ‌ಇಲ್ಲ

-ಅಪಹರಣ :ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ‌01

ರಾಬರ್ಟ್‌‌ಸನ್‌‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಭದ್ರತಾ ಕಾಯ್ದೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 13/14.03.2016 ರಂದು ರಾತ್ರಿ 2.15.00 ಗಂಟೆ ಸಮಯದಲ್ಲಿ ರಾತ್ರಿ ವಿಶೇಷ ಗಸ್ತಿನಲ್ಲಿರುವಾಗ ಗೀತಾ ರಸ್ತೆ 1ನೇ ಕ್ರಾಸ್ ಸುರೇಶ್ ಜ್ಯೂವೆಲರಿ ಅಂಗಡಿ ಬಳಿ ಗಸ್ತು ಮಾಡುತ್ತಿದ್ದಾಗ, ಕತ್ತಲಲ್ಲಿ ಯಾರೋ ಒಬ್ಬ ಆಸಾಮಿ ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಕುಳಿತ್ತಿದ್ದು ಆತನ ಬಳಿ ಪೊಲೀಸರು ಹೋಗುತ್ತಿದ್ದಾ, ಪೊಲೀಸರನ್ನು ನೋಡಿ ಓಡಲು ಪ್ರಯತ್ನಿಸಿದ್ದು, ಆಗ ಪೊಲೀಸರಿಗೆ ಅನುಮಾನ ಬಂದು ಸದರಿಯವನನ್ನು ಸುತ್ತುವರೆದು ಹಿಡಿದುಕೊಂಡು ಅಲ್ಲಿಂದ ಓಡಲು ಪ್ರಯತ್ನಿಸಿದ್ದಕ್ಕೆ ಕಾರಣವನ್ನು ಮತ್ತು ಆತನ ಹೆಸರು ವಿಳಾಸವನ್ನು ಕೇಳಲಾಗಿ ತೊದಲುತ್ತಾ ಆತನ ಹೆಸರು  ಮುರಳಿ ಬಿನ್‌ ಸಂಪತ್‌  25 ವರ್ಷ,  ನಂ 338, 4 ನೇ ಬ್ಲಾಕ್‌, ರಾಬರ್ಟ್‌‌ಸನ್‌ ಪೇಟೆ ಎಂದು ತಿಳಿಸಿದ್ದು, ಸದರಿ ಅಸಾಮಿಯು ಆ ಸಮಯದಲ್ಲಿ ಅಲ್ಲಿ ಇರುವಿಕೆಯ ಬಗ್ಗೆ ಸರಿಯಾದ ಸಮಂಜಿಸವಾದ ಉತ್ತರ ನೀಡಿರುವುದಿಲ್ಲ. ಸದರಿ ಆಸಾಮಿಯು ಅಲ್ಲಿ ಅಪರಾಧ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿರಬಹುದೆಂದು ಅನುಮಾನ ಬಂದಿದ್ದರಿಂದ ಆರೋಪಿಯ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s