ದಿನದ ಅಪರಾಧಗಳ ಪಕ್ಷಿನೋಟ 06 ನೇ ಮಾರ್ಚ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಚ್‌05.03.2016 ಸಂಜೆ 5.00 ಗಂಟೆಯಿಂದ  ದಿನಾಂಕ: 06.03.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ :ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ:ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಹುಡುಗಿಯ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 05.03.2016 ರಂದು  ರಾಳ್ಳಬೂದುಗೂರು ಪಿ.ಎಸ್ ನ ಮೊ.ಸಂ 73/2015 ಕೇಸಿನಲ್ಲಿನ ದಾಖಲಾತಿಗಳನ್ನು ವರ್ಗಾವಣೆ ಮೇರೆಗೆ ಸ್ವೀಕರಿಸಿಕೊಂಡಿದ್ದು, ದೂರುದಾರಳಾದ  ಕು|| ಸುಮಾಶ್ರೀ 17 ವರ್ಷ  ಗೆಸಕಪಲ್ಲಿ ಗ್ರಾಮ ರವರು ನೀಡಿದ ದೂರಿನಲ್ಲಿ  ದಿನಾಂಕ 19.12.2015 ರಂದು ಸಂಜೆ 6.00 ಗಂಟೆಯಲ್ಲಿ ಆರೋಪಿ  ನರಸಿಂಹ,  ಶಿವಶಂಕರ, ಕೃಷ್ಣಮೂರ್ತಿ,  ರವರು ದೂರುದಾರರನ್ನು ಗೆಸಕಪಲ್ಲಿ  ಗ್ರಾಮದಿಂದ ಅಪಹರಸಿಕೋಂಡು ಬೇತಮಂಗಲ ಪೊಲೀಸ್‌ ಠಾಣೆಯ ಸರಹದ್ದು ದೇವೇರಹಳ್ಳಿಗೆ ಬಂದು ಆರೋಪಿಗಳ ಸಂಬಂಧಿಕರ ಮನೆ ಪೆದ್ದಉಪ್ಪರಪಲ್ಲಿಯಲ್ಲಿ ಇಟ್ಟು ಕೊಂಡು ನರಿಸಿಂಹ ರವರು ದೂರುದಾರರ ಮೇಲೆ ಬಲತ್ಕಾರ ಸಂಬೋಗ ಮಾಡಿ ನಂತರ ಉಳಿದ ಆರೋಪಿಗಳು ಎಲ್ಲರು ಸೇರಿ ದೂರುದಾರರನ್ನು ನರಸಿಂಹ ರವರಿಗೆ ಮದುವೆ ಮಾಡಿ ದೂರುದಾರರ ಜಾತಿಯನ್ನು ನಿಂಧಿಸಿ ದೌರ್ಜನ್ಯ ವೆಸಗಿ  ಕತ್ತನ್ನು ಹಿಡಿದು ಸುಮಶ್ರೀ ರವರನ್ನು  ಗಾಡಿಯಿಂದ ತಳ್ಳಿ  ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿ ಹೊರಟುಹೋಗಿರುತ್ತಾರೆ.

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

–  ರಸ್ತೆ ಅಪಘಾತಗಳು :01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ-06.03.2016 ರಂದು ಬೆಳಿಗ್ಗೆ 00.15 ಗಂಟೆಗೆ ದೂರದಾರರಾದ ಶ್ರೀ  ಮುನಿರಾಜು ಬಿನ್‌ ಕೃಷ್ಣಪ್ಪ, 31 ವರ್ಷ, ಚಿನ್ನಕೋಟೆ ಗ್ರಾಮದವರು ನೀಡಿದ ದೂರಿನಲ್ಲಿ ದೂರುದಾರರ ತಮ್ಮನಾದ ಕಿರಣ್ ಬಿನ್‌ ಕೃಷ್ಣಪ್ಪ, 24 ವರ್ಷ, ಚಿನ್ನಕೋಟೆ ಎಂಬುವರು ರಾತ್ರಿ ಸುಮಾರು 9.30 ಗಂಟೆಯಲ್ಲಿ ವಸಂತನಗರದ ಕಡೆಯಿಂದ ಚಿನ್ನಕೋಟೆಗೆ ಹೋಗಲು ಆತನ APACHE ದ್ವಿಚಕ್ರ ವಾಹನ ಸಂಖ್ಯೆ KA09 EL 7978  ರಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಹೋಗಿ ವಸಂತನಗರದ ಕೆನರಾಬ್ಯಾಂಕ್ ಹತ್ತಿರ ಆಪೀಸರ್ಸ್ ಕ್ವಾರ್ಟರ್ಸ್ ಕಾಂಪೌಂಡ್ ಗೋಡೆಗೆ ಡಿಕ್ಕಿಹೊಡೆದು ದ್ವಿಚಕ್ರ ವಾಹನದ ಸಮೇತ ಕೆಳಗೆ ಬಿದ್ದು ಕಿರಣ್‌ ರವರ ತಲೆಗೆ ಬಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ :ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s