ದಿನದ ಅಪರಾಧಗಳ ಪಕ್ಷಿನೋಟ 01 ಮಾರ್ಚ್‌ 2016 ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:01.03.2016 ರಂದು ಬೆಳಿಗ್ಗೆ 10.00 ಗಂಟೆಯಿಂದ  ಸಂಜೆ 5.00  ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ :ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ:ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌01

ಚಾಂಪಿಯನ್‌‌ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 01.03.2016 ರಂದು ದೂರುದಾರರಾದ ನಳನಿ ಎನ್‌, ಉಪ ಅಂಚೆ ಕಛೇರಿ, ಚಾಂಪಿಯನ್ ರೀಫ್ಸ್ ರವರು ನೀಡಿದ ದೂರಿನಲ್ಲಿ  ಆರೋಪಿಯಾದ ಪಿ. ಮುನಿಸ್ವಾಮಿ ಎಂಬುವರು ಉಪ ಅಂಚೆ ಕಛೇರಿ, ಚಾಂಪಿಯನ್ ರೀಫ್ಸ್ ನಲ್ಲಿ ಸಬ್ ಪೋಸ್ಟ್ ಮಾಸ್ಟರ್, ಕರ್ತವ್ಯ ನಿರ್ವಹಿಸುತ್ತಿದ್ದು,  ಅಂಚೆ ಕಛೇರಿ RD Account No 191354 ರಲ್ಲಿ ಶ್ರೀಮತಿ. ಜಾಯ್ಸ್ ಜಯಕುಮಾರಿ ರವರು ಅವರ ಖಾತೆಗೆ ಪ್ರತಿ ತಿಂಗಳು 300/- ರೂಗಳಂತೆ ದಿನಾಂಕ: 13-04-2011 ರಂದು ಪೆಬ್ರವರಿ-2011 ಹಾಗೂ ಮಾರ್ಚ್-2011 ತಿಂಗಳುಗಳ ಒಟ್ಟು 600/-ಗಳನ್ನು ತಮ್ಮ ಖಾತೆಗೆ ಜಮಾ ಮಾಡಿದ್ದನ್ನು ಆರೋಪಿ ಸ್ವೀಕರಿಸಿ ಅಂಚೆ ಇಖಾಖೆಗೆ ಕೇವಲ 300/-ರೂಗಳನ್ನು ಜಮಾ ಮಾಡಿರುತ್ತಾರೆ. RD Account No 191330 ರಲ್ಲಿ ಶ್ರೀ. ರವಿಕುಮಾರ್ ರವರು ಅವರ ಖಾತೆಗೆ ಪ್ರತಿ ತಿಂಗಳು 500/- ರೂಗಳಂತೆ ದಿನಾಂಕ: 18-03-2010 ರಂದು ಮಾರ್ಚ್ -2010 ರ ಕಂತು 500/-ಗಳನ್ನು ತಮ್ಮ ಖಾತೆಗೆ ಜಮಾ ಮಾಡಿದ್ದನ್ನು ಆರೋಪಿ ಸ್ವೀಕರಿಸಿ ಅಂಚೆ ಇಖಾಖೆಗೆ ಜಮಾ ಮಾಡಿರುವುದಿಲ್ಲ. RD Account No 191232 ರಲ್ಲಿ ಶ್ರೀಮತಿ. ಕೆ. ಶ್ಯಾಮಲಾ ರವರು ಅವರ ಖಾತೆಗೆ ಪ್ರತಿ ತಿಂಗಳು 200/- ರೂಗಳಂತೆ ದಿನಾಂಕ: 28-03-2009 ರಂದು ಮಾರ್ಚ್ -2009 ರ ಕಂತು 200/-ಗಳನ್ನು ತಮ್ಮ ಖಾತೆಗೆ ಜಮಾ ಮಾಡಿದ್ದನ್ನು ಆರೋಪಿ ಸ್ವೀಕರಿಸಿ ಅಂಚೆ ಇಖಾಖೆಗೆ ಜಮಾ ಮಾಡಿರುವುದಿಲ್ಲ. RD Account No 191266 ರಲ್ಲಿ ಶ್ರೀ. ಉದ್ದಂಡಪ್ಪ ರವರು ಅವರ ಖಾತೆಗೆ ಪ್ರತಿ ತಿಂಗಳು 1,000/- ರೂಗಳಂತೆ ದಿನಾಂಕ: 28.02.2009 ರಂದು ಜನವರಿ-2009 ಹಾಗೂ ಪೆಬ್ರವರಿ-2009 ರ ಕಂತುಗಳನ್ನು ದಂಡ ಸಮೇತ ಒಟ್ಟು 2,020/- ಗಳನ್ನು ತಮ್ಮ ಖಾತೆಗೆ ಜಮಾ ಮಾಡಿದ್ದನ್ನು ಆರೋಪಿ ಸ್ವೀಕರಿಸಿ ಇಖಾಖೆಗೆ ಕೇವಲ 1,000/-ರೂಗಳನ್ನು ಜಮಾ ಮಾಡಿ ಮೇಲ್ಕಂಡ ನಾಲ್ಕೂ ಖಾತೆಗಳಿಂದ ಒಟ್ಟು 2,020/- ರೂಗಳನ್ನು ಇಲಾಖೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಪಡಿಸಿ ಅಂಚೆ ಇಖಾಖೆಗೆ ಮೋಸ ಮಾಡಿರುತ್ತಾರೆ.

-ಹಲ್ಲೆ : ‌ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 01.03.2016 ರಂದು ದೂರುದಾರರಾದ ಶ್ರೀ  ಸೂಮಪ್ಪ ಬಿನ್‌ ಚಿನ್ನ ಬಿಡ್ಡಪ್ಪ,  49 ವರ್ಷ,  ಕುರುಪಲ್ಲಿ ಗ್ರಾಮ ರವರು ನೀಡಿದ ದೂರಿನಲ್ಲಿ  ಒಂದು ವಾರದ ಹಿಂದೆ ದೂರುದಾರರಾದ ಸೋಮಪ್ಪ ರವರ ತಮ್ಮನಾದ ವೆಂಕಟಪ್ಪ 36 ವರ್ಷ, ಎಂಬುವವರು ಪಂತನಹಳ್ಳಿ ಗ್ರಾಮದ ಬಳಿಯಿರುವ ಮೋಹನ್ ರಾವ್ ಕೋಳಿ ಪಾರಂನಲ್ಲಿ ಕೆಲಸ ಮಾಡುತ್ತಿದ್ದವನು ದಿನಾಂಕ. 05.02.2016 ರಂದು  ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವನು ಮತ್ತೆ ಮನೆಗೆ ಬರದೆ ಕಾಣೆಯಾಗಿರುತ್ತಾರೆ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ : ‌ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s