ದಿನದ ಅಪರಾಧಗಳ ಪಕ್ಷಿನೋಟ 01 ನೇ ಮಾರ್ಚ್‌ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:29.02.2016 ಸಂಜೆ 5.00 ಗಂಟೆಯಿಂದ  ದಿನಾಂಕ: 01.03.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ:ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 29.02.2016 ರಂದು ದೂರುದಾರರಾದ ಶ್ರೀ ಅಮುಲ್‌ರಾಜ್‌ ಬಿನ್‌  ರಾಜ, 25 ವರ್ಷ, ಲೂರ್ದ್‌ನಗರ ಆಂಡ್ರಸನ್‌ಪೇಟೆ ರವರು ನೀಡಿದ ದೂರಿನಲ್ಲಿ  ದಿನಾಂಕ 28.02.2016 ರಂದು ರಾತ್ರಿ ಸುಮಾರು 9.00 ಗಂಟೆ ಸಮಯದಲ್ಲಿ ದೂರುದಾರರು ಬಿ.ಇ.ಎಂ.ಎಲ್‌‌‌ನ ಕತ್ತಿಹಳ್ಳಿಯ ಅವರ ವರ್ಕ್‌ಶಾಪ್‌‌ನಲ್ಲಿ ಕೆಲಸ ಮುಗಿಸಿ ಮನೆಗೆ ಬರಲು ಬಿ.ಇ.ಎಂ.ಎಲ್‌‌ ಕಡೆಯಿಂದ ಅವರ ದ್ವಿಚಕ್ರವಾಹನ ಬಜಾಜ್‌‌ ಪಲ್ಸರ್‌‌ ಸಂಖ್ಯೆ ಕೆಎ-53-ಇಹೆಚ್‌-2197ರಲ್ಲಿ ಉರಿಗಾಂನ ಸ್ಕೇಟಿಂಗ್‌‌ ರಿಂಗ್‌‌ ಮುಂಭಾಗದ ಮುಖ್ಯರಸ್ತೆಯ ವಾಹನ ಚಲಾಯಿಸಿಕೊಂಡು ಬರುತ್ತಿದ್ದಾಗ, ರಾಬರ್ಟ್‌ಸನ್‌‌ಪೇಟೆ ಕಡೆಯಿಂದ ಆರೋಪಿ ಅವರ ಫ್ಯಾಷನ್‌‌ ಪ್ರೋ ದ್ವಿಚಕ್ರ ವಾಹನ ಸಂಖ್ಯೆ ಕೆಎ 07-ಯು-3876 ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ವಾಹನಕ್ಕೆ ಡಿಕ್ಕಿ ಪಡಿಸಿದ್ದರಿಂದ ದೂರುದಾರರು ಕೆಳಗೆ ಬಿದ್ದು ಆತನ ತಲೆಗೆ ರಕ್ತಗಾಯಗಾಯವಾಗಿರುತ್ತದೆ.

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು :01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ  ಅಕಸ್ಮಿಕವಾಗಿ ಮೃತಪಟ್ಟಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 29.02.2016 ರಂದು ದೂರುದಾರರಾದ ಶ್ರೀ  ನಾರಾಯಣಸ್ವಾಮಿ ಬಿನ್‌ ಮುನಿಯಪ್ಪ, 56 ವರ್ಷ, ಚಲದಿಗಾನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ   ದೂರುದಾರರ ತಮ್ಮ ಎಂ.ಶ್ರೀನಿವಾಸ್  ಬಿನ್  ಕರಿಮುನಿಯಪ್ಪ, ವಯಸ್ಸು 32 ವರ್ಷ, ಎಂಬುವವನಿಗೆ ದಿನಾಂಕ:29.02.2016 ರಂದು ಬೆಳಿಗ್ಗೆ ಆರೋಗ್ಯ ಸರಿ ಇಲ್ಲದ ಪ್ರಯುಕ್ತ ಚಿಕಿತ್ಸೆಗಾಗಿ ಬಂಗಾರಪೇಟೆಯ ಖಾಸಗಿ ಆಸ್ಪತ್ರೆಯಾದ ಶುಶ್ರುತಾ ಆಸ್ಪತ್ರೆಗೆ ದೂರುದಾರರು ಕರೆತಂದು ಒಳರೋಗಿಯಾಗಿ ದಾಖಲಿಸಿದ್ದು , ವೈದ್ಯರು ಪರೀಕ್ಷಿಸಿ  ಇದು ಬರೀ ಗ್ಯಾಸ್ಟ್ರಿಕ್ ಎಂದು ಹೇಳಿ  ಒಂದು ಟಾನಿಕ್ ಮತ್ತು ಮಾತ್ರೆ ಸೇವಿಸಿ ಎಂದು ಹೇಳಿ ಚೀಟಿಯಲ್ಲಿ ಬರೆದು ಕೊಟ್ಟಿದ್ದು, ಅದನ್ನು ಪಕ್ಕದ ಫಾರ್ಮಸಿ ಯಲ್ಲಿ ಮಾತ್ರೆ ಮತ್ತು ಟಾನಿಕನ್ನು ತೆಗೆದುಕೊಂಡು ಸೇವಿಸಿದ ಕೆಲವೇ ನಿಮಿಷಗಳಲ್ಲಿ ಎದೆ ನೋವು ಬಂದು ಒದ್ದಾಡಿದ್ದು , ವೈದ್ಯರು ಶ್ರೀನಿವಾಸನನ್ನು ಸರಿಯಾಗಿ ಪರೀಕ್ಷೆ ಮಾಡದೇ ನಿರ್ಲಕ್ಷತೆಯಿಂದ  ಮತ್ತು ಬೇಜವಾಬ್ದಾರಿಯಿಂದ ಚಿಕಿತ್ಸೆ ನೀಡಿದ್ದರಿಂದ ಶ್ರೀನಿವಾಸನು ಮೃತ ಪಟ್ಟಿರುತ್ತಾರೆ.

-ಅಸ್ವಾಭಾವಿಕ ಮರಣ :01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 29.02.2016 ರಂದು ಶ್ರೀಮತಿ. ಲಕ್ಷ್ಮಿ ಕೋಂ  ಸಿದ್ದೇಗೌಡ  ಚಿಕ್ಕಮಗಳೂರು ರವರು ನೀಡಿದ ದೂರಿನಲ್ಲಿ  ಈಗ್ಗೆ 3 ತಿಂಗಳ ಹಿಂದೆ ಬೆಮೆಲ್ ಕಾರ್ಖಾನೆಯ ಪ್ಯಾಕ್ಟರಿಗೆ ಸೇರಿದ ನೀಲಗಿರಿ ಮರಗಳನ್ನು ಕಟಾವು ಮಾಡುವ ಕೂಲಿ ಕೆಲಸಕ್ಕೆ ದೂರುದಾರರ ಗಂಡ ಮತ್ತು ಮಕ್ಕಳೊಂದಿಗೆ ಅವರ ಊರಿನಿಂದ ಬಂದಿರುತ್ತಾರೆ, ಇವರೊಂದಿಗೆ ಇವರ ಇತರೇ ಸ್ನೇಹಿತರು, ಸಂಬಂಧಿಕರು ಮತ್ತಿತರರು ಕೆಲಸಕ್ಕೆ ಬಂದು ಬೆಮೆಲ್ ಎ ಟೈಪ್ ಕ್ವಾಟ್ರಸ್ ಬಳಿ ಶೆಡ್ ಹಾಕಿಕೊಂಡು  ಜೀವನಮಾಡಿಕೊಂಡಿರುತ್ತಾರೆ, ದಿನಾಂಕ 29.02.2016 ರಂದು ಕೆಲಸಕ್ಕೆ ರಜೆ ಇದ್ದ ಕಾರಣ ಮದ್ಯಾಹ್ನ ಸುಮಾರು 12.00 ಗಂಟೆಗೆ ದೂರುದಾರರ ಗಂಡ ಮಂಜು, ಆಕೆಯ ತಂದೆ ಪಕೀರಪ್ಪ ಹಾಗೂ ಸಂತೋಷ್ ರವರು ಬೆಮೆಲ್ ನಗರದ ಎಸ್.ಬಿ.ಎಂ ಬ್ಯಾಂಕಿನ ಹಿಂಭಾಗದ ಕುಂಟೆಯಲ್ಲಿ ಸ್ನಾನ ಮಾಡಲು ಹೋಗಿರುತ್ತಾರೆ, ಮದ್ಯಾಹ್ನ ಸುಮಾರು 12.30 ಗಂಟೆಗೆ ಮಂಜು ಮತ್ತು ಸಂತೋಷ್ ರವರು ಕುಂಟೆಯಲ್ಲಿ ಈಜಾಡುತ್ತಿದ್ದಾಗ, ಸಂತೋಷ್  50 ವ಼ರ್ಷರವರು ನೀರಿನಲ್ಲಿ ಮುಳುಗಿದ್ದು, ಆತನನ್ನು ರಕ್ಷಿಸಲು ಹೋದ ಮಂಜು 40 ವರ್ಷ ರವರು ಸಹ ನೀರಿನಲ್ಲಿ ಮುಳುಗಿ ಇಬ್ಬರೂ ಮೃತಪಟ್ಟಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s