ದಿನದ ಅಪರಾಧಗಳ ಪಕ್ಷಿನೋಟ 21 ನೇ ಪೆಬ್ರವರಿ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:20.02.2016 ಸಂಜೆ 5.00 ಗಂಟೆಯಿಂದ  ದಿನಾಂಕ: 21.02.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ:ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :01

ರಾಬರ್ಟ್‌‌ಸನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 20.02.2016 ರಂದು ರಾತ್ರಿ 9.00 ಗಂಟೆಯ ಸಮಯದಲ್ಲಿ ದೂರುದಾರರಾದ ಶ್ರೀ. ಮೋಹನ್‌ ಬಿನ್‌ ಗಣೇಶ್‌,  32 ವರ್ಷ, ಆಶೋಕನಗರ ಕೆ.ಜಿ.ಎಫ್‌ ರವರು ನೀಡಿದ ದೂರಿನಲ್ಲಿ ದೂರುದಾರರ  ಹೆಂಡತಿಯಾದ ಶ್ರೀಮತಿ ದೇವಿ ಮತ್ತು ಲತಾ ರವರು  ಮಾರ್ಕೆಟ್ ಗೆ ಬಂದಿದ್ದಾಗ  ಆರೋಪಿ ದಿಲೀಪ್‌ ಮತ್ತು  ರಾಜನ್‌ ಎಂಬುವರು ನೀವು ಏಕೆ ಮಾರ್ಕೆಟ್‌ಗೆ ಬಂದೆ ಎಂದು  ಕೇಳಿ  ಆರೋಪಿ ದಿಲೀಪ್ ರವರ ಏಕಾಏಕಿ ಅವರ ಬಳಿ ಬಂದು  ಕೆನ್ನೆಗೆ ಕೈಯಿಂದ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 20.02.2016 ರಂದು ದೂರುದಾರರಾದ  ಶ್ರೀ. ನಾಗರಾಜ್‌ ವಿ. 50 ವರ್ಷ, ನಲ್ಲಗುಟ್ಟಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 20.02.2016 ರಂದು ರಾತ್ರಿ ಸುಮಾರು 8.15 ಗಂಟೆಯಲ್ಲಿ ಭಾಸ್ಕರ್, ನಲ್ಲಗುಟ್ಲಹಳ್ಳಿ ವಾಸಿ  ಎಂಬುವರು ದ್ವಿಚಕ್ರ ವಾಹನ ಪ್ಯಾಷನ್ ಪ್ರೋ ಸಂಖ್ಯೆ ಕೆಎ-08-ಯು-2280 ರ ಹಿಂಭಾಗದಲ್ಲಿ ತನ್ನ ಗ್ರಾಮದ ವಾಸಿ ಶ್ರೀಧರ್ ಎಂಬುವರನ್ನು ಕುಳ್ಳರಿಸಿಕೊಂಡು ಬಂಗಾರಪೇಟೆ ಕಡೆಯಿಂದ ಮನೆಗೆ ಬರಲು ಬಂಗಾರಪೇಟೆ-ಕಾಮಸಮುದ್ರಂ ಮುಖ್ಯ ರಸ್ತೆ ಮೂಗನಹಳ್ಳಿ ಸಮೀಪ ಚಲಾಯಿಸಿಕೊಂಡು ಬರುತ್ತಿದ್ದಾಗ ಕಾಮಸಮುದ್ರಂ ಕಡೆಯಿಂದ ಆರೋಪಿಯು ಟ್ರಾಕ್ಟರ್ ಇಂಜಿನ್ ಸಂಖ್ಯೆ ಕೆಎ-08-ಟಿ-2958 & ಟ್ರಾಲಿ ಸಂಖ್ಯೆ ಕೆಎ-08-ಎಲ್-2859 ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಭಾಸ್ಕರ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭಾಸ್ಕರ್ ರವರಿಗೆ ಮತ್ತು ಶ್ರೀಧರ್ ರವರಿಗೆ ತಲೆಯಲ್ಲಿ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು,  ಭಾಸ್ಕರ್  25 ವರ್ಷ, ಮತ್ತು  ಶ್ರೀಧರ್‌  32 ವರ್ಷ, ಇಬ್ಬರೂ ನಲ್ಲಗುಟ್ಟಹಳ್ಳಿ ಗ್ರಾಮರವರು  ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಟ್ರಾಕ್ಟರ್ ಚಾಲಕ ಟ್ರಾಕ್ಟರ್ ನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾರೆ.

-ಭದ್ರತಾ ಕಾಯ್ದೆ :01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಭದ್ರತಾ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ: 20.02.2016 ರಂದು ರಾತ್ರಿ 11.00 ಗಂಟೆ ಸಮಯದಲ್ಲಿ  ಶ್ರೀ ಲಕ್ಷ್ಮಣ್‌ ರಾವ್‌ ಎಎಸ್‌ಐ ರಾಬರ್ಟ್‌‌ಸನ್‌ಪೇಟೆ ರವರು  ರಾತ್ರಿ ಸೆಕ್ಟರ್ ಗಸ್ಸು ಮಾಡುತ್ತಿದ್ದಾಗ, 1ನೇ ಕ್ರಾಸ್ ಸುರೇಶ್ ಜ್ಯುವಲರ್ಸ್ ಅಂಗಡಿ ಬಳಿ ಕತ್ತಲಲ್ಲಿ ಯಾರೋ ಒಬ್ಬ ಆಸಾಮಿ ತನ್ನ ಇರುವಿಕೆಯನ್ನು ಮರಮಾಚಿಕೊಂಡು ಕುಳಿತ್ತಿದ್ದವನು ಪೊಲೀಸರನ್ನು ನೋಡಿ ಓಡಲು ಪ್ರಯತ್ನಿಸಿದ್ದು, ಆಗ ಅನುಮಾನ ಬಂದು ಸದರಿಯವನನ್ನು ಸುತ್ತುವರೆದು ಹಿಡಿದುಕೊಂಡು ಅಲ್ಲಿಂದ ಓಡಲು ಪ್ರಯತ್ನಿಸಿದ್ದಕ್ಕೆ ಕಾರಣವನ್ನು ಮತ್ತು ಆತನ ಹೆಸರು ವಿಳಾಸವನ್ನು ಕೇಳಲಾಗಿ ತೊದಲುತ್ತಾ ಆತನ ಹೆಸರು ಸಾದಿಕ್ ಬಿನ್ ಶಕೀಲ್, 22 ವರ್ಷ, ವಾಸ. ನಂ-467, ಸಂಜಯಗಾಂಧಿನಗರ, ರಾಬರ್ಟ್ ಸನ್ ಪೇಟೆ, ಕೆ.ಜಿ.ಎಪ್ ಎಂದು ತಿಳಿಸಿದ್ದು ಸದರಿ ಅಸಾಮಿಯು ಕಳವು ಮಾಡುವ ಉದ್ದೇಶ ಇರುತ್ತೆಂದು ಕಾನೂನು ಕ್ರಮ ಜರುಗಿಸಿರುತ್ತಾರೆ.

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

 

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s