ದಿನದ ಅಪರಾಧಗಳ ಪಕ್ಷಿನೋಟ 19 ನೇ ಪೆಬ್ರವರಿ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:18.02.2016 ಸಂಜೆ 5.00 ಗಂಟೆಯಿಂದ  ದಿನಾಂಕ: 19.02.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ:ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ :01

ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 18.02.2016 ರಂದು ದೂರುದಾರಾದ ಶ್ರೀ.ರಾಧಕೃಷ್ಣ  ಬಿನ್‌  ವೆಂಕಟೇಶ್‌ ನಾಯ್ದು, 56 ವರ್ಷ,  ಪಿಡಿಓ ಮಾರಿಕುಪ್ಪಂ ಗ್ರಾಮ ರವರು ನೀಡಿದ ದೂರಿನಲ್ಲಿ  ದಿನಾಂಕ 17.02.2016 ರಂದು ರಾತ್ರಿ  ಯಾರೋ ದುಷ್ಕರ್ಮಿಗಳು ಮಾರಿಕುಪ್ಪಂ ಗ್ರಾಮ ಪಂಚಾಯ್ತಿ ಕಛೇರಿಯ ಬೀಗವನ್ನು ನಕಲಿ ಕೀಗಳಿಂದ ತೆಗೆದು ಗಣಕಯಂತ್ರ ಕೊಠಡಿಯಲ್ಲಿದ್ದ ಕಂಪ್ಯೂಟರ್ ಸಿ.ಪಿ.ಯು ನಲ್ಲಿನ  ರಾಂ , ಹಾರ್ಡ್ ಡಿಸ್ಕ್ , ಮದರ್ ಬೋರ್ಡ್, ಪವರ್ ಬ್ಲಾಕ್ಸ್ , ಮೋಡಂ, ವೆಬ್ ಕ್ಯಾಮರ, ಮತ್ತು ಇಂಟರ್ನೆಟ್ ರೂಟರ್ , ಬಿಡಿ ಭಾಗಗಳು ಸುಮಾರು ರೂ 15,000/- ಗಳ ಬೆಲೆ ಬಾಳುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ :01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 18.02.2016 ರಂದು ದೂರುದರರಾದ ಶ್ರೀ.  ರಾಮಚಂದ್ರಪ್ಪ ಬಿನ್‌ ವಾಸಪ್ಪ,  ಮಾರಸಂದ್ರ ಗ್ರಾಮ ರವರು ನೀಡಿದ ದೂರಿನಲ್ಲಿ  ದೂರುದಾರರ ಬಾಬತ್ತು ಸರ್ವ ನಂ 78/8 ರಲ್ಲಿ ಸ್ವಾಧೀನ ಅನುಭವದಲ್ಲಿದ್ದು, ಸದರಿ ಜಮೀನಿನಲ್ಲಿ ಬಾಗ ಕೊಡುವಂತೆ  ಆರೋಪಿಗಳಾದ  ರಾಮಕೃಷ್ಣಪ್ಪ, ನಾರಾಯಣಪ್ಪ  ಶಿವಪ್ಪ ರವರು ಆಗಾಗ ಗಲಾಟೆ ಮಾಡುತ್ತಿದ್ದು, ಇದನ್ನು ಮನಸ್ಸಿನಲ್ಲಿಟ್ಟುಕೊಂಡು ದಿನಾಂಕ. 17.02.2016 ರಂದು ಬೆಳಗ್ಗೆ 10.30 ಗಂಟೆ ಸಮಯದಲ್ಲಿ ದೂರುದಾರರು ಜೆಸಿಬಿ ಮೂಲಕ ಜಮೀನಿನಲ್ಲಿ ಕೆಲಸ ಮಾಡಿಸುತ್ತಿದ್ದಾಗ ಆರೋಪಿಗಳು ಜಮೀನಿನೊಳೆಗೆ ಅತಿಕ್ರಮ ಪ್ರವೇಶ ಮಾಡಿ ಕೆಲಸ ಮಾಡುತ್ತಿದ್ದ ಜೆಸಿಬಿ ಯನ್ನು ತಡೆದು ದೂರುದಾರರನ್ನು ಕೆಟ್ಟ ಮಾತುಗಳಿಂದ ಬೈದು, ಕಬ್ಬಿಣದ ರಾಡ್ ನಿಂದ ತಲೆಯ ಮೇಲೆ ಹೊಡೆದು ರಕ್ತ ಗಾಯ  ಪಡಿಸಿ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 18.02.2016 ರಂದು ದೂರುದಾರರಾದ ಶ್ರೀಮತಿ ನೇತ್ರಾವತಿ ಕೋಂ ರವಿಕುಮಾರ್‌ , 25 ವರ್ಷ  ನಂ 350, ಗಾಯತ್ರಿ  ಲೇಔಟ್‌ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ  ಶ್ರೀಮತಿ ನೇತ್ರಾವತಿ ರವಗೆ ಈಗ್ಗೆ ಸುಮಾರು  5 ವರ್ಷಗಳ ಹಿಂದೆ ಹಿರಿಯರ ಒಪ್ಪಿಗೆಯಂತೆ ಸಂಪ್ರಾದಯ ಪ್ರಕಾರವಾಗಿ ಬಂಗಾರಪೇಟೆ ಪಟ್ಟಣದಲ್ಲಿರುವ ಎಸ್.ಎನ್.ಆರ್ ಕಲ್ಯಾಣ ಮಂಟಪದಲ್ಲಿ  ದಿನಾಂಕ 18.08.2011 ರಂದು  ಮದುವೆಯನ್ನು ಮಾಡಿರುತ್ತಾರೆ. ಮದುವೆಯ ಸಂದರ್ಭದಲ್ಲಿ  ದೂರುದಾರರ ಗಂಡ ಆರೋಪಿ-ರವಿಕುಮಾರ್ ರವರಿಗೆ  ವರದಕ್ಷಿಣೆಗಾಗಿ 150 ಗ್ರಾಂ ಚಿನ್ನದ ಒಡವೆಗಳು,40,000/-ರೂಗಳ ವರದಕ್ಷಿಣೆಯ ಹಣವನ್ನು  ಹಾಗು ಒಂದು ದ್ವಿಚಕ್ರವಾಹನವನ್ನು ನೀಡಿರುತ್ತಾರೆ. ಮದುವೆಯಾಗಿ ಎರಡೂ ತಿಂಗಳ ಕಾಲ ಗಂಡ ಹೆಂಡತಿ ಇಬ್ಬರೂ ಅನ್ಯೋನ್ಯವಾಗಿದ್ದು  ನಂತರ ಪಿರ್ಯಾದಿಗೆ   ಹೊಡೆಯುವುದು, ಬೈಯುವುದು,  ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳವನ್ನು ನೀಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

 

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s