ದಿನದ ಅಪರಾಧಗಳ ಪಕ್ಷಿನೋಟ 18 ನೇ ಪೆಬ್ರವರಿ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:17.02.2016 ಸಂಜೆ 5.00 ಗಂಟೆಯಿಂದ  ದಿನಾಂಕ: 18.02.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 17.02.2016 ರಂದು ದೂರುದಾರರಾದ ಶ್ರೀ.  ಮಂಜುನಾಥ ಬಿನ್‌ ದೊಡ್ಡರಚಿತ  50 ವರ್ಷ, ವಟ್ರಕುಂಟೆ ಗ್ರಾಮ ರವರು ನೀಡಿದ ದೂರಿನಲ್ಲಿ  ಮಂಜುನಾಥ ರವರ 2ನೇ ಮಗಳಾದ ಕು ಶಿಲ್ಪ, ವಯಸ್ಸು ಸುಮಾರು 21 ವರ್ಷ,  ವಟ್ರಕುಂಟೆ ಗ್ರಾಮ ಎಂಬುವರು ಪಿ. ಯು.ಸಿ ವಿದ್ಯಾಭ್ಯಾಸ ಮಾಡುತ್ತಿದ್ದು,  ದಿನಾಂಕ 11.02.2016 ರಂದು ಬೆಳಿಗ್ಗೆ ಸುಮಾರು 11.00 ಗಂಟೆ ಸಮಯದಲ್ಲಿ  ದೂರುದಾರರ  ಹೆಂಡತಿ ಶ್ರೀಮತಿ ಇಂದಿರಮ್ಮ ರವರು  ಅವರ ತೋಟದಿಂದ ಮನೆಗೆ  ಬಂದಾಗ ಅವರ ಮಗಳಾದ ಶಿಲ್ಪ ರವರು ಮನೆಯಲ್ಲಿ ಇಲ್ಲದೆ  ಕಾಣೆಯಾಗಿದ್ದು,  ಅವರ  ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರು ಸಹ ಪತ್ತೆಯಾಗದೆ ಕಾಣೆಯಾಗಿರುತ್ತಾರೆ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 17.02.2016 ರಂದು ಮಧ್ಯಾಹ್ನ 1.20 ಗಂಟೆ ಸಮಯದಲ್ಲಿ ಪ್ಯಾಸೆಂಜರ್ ಆಟೋ ಸಂಖ್ಯೆ ಕೆಎ08-4359 ರಲ್ಲಿ ಚಾಲಕ ಪ್ರಯಾಣಿಕರನ್ನು ಕುಳ್ಳರಿಸಿಕೊಂಡು ಬರುತ್ತಿದ್ದಾಗ ಆಟೋವಿನ ಹಿಂಬದಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಖ್ಯೆ. ಕೆಎ-07-ಎಫ್-1560 ರ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆಟೋವಿನ ಹಿಂಬದಿ ಡಿಕ್ಕಿ ಹೊಡೆದ ಪ್ರಯುಕ್ತ ಆಟೋ ರಸ್ತೆಯ ಮೇಲೆ ಉರುಳಿ ಬಿದ್ದು ರಸ್ತೆಯ ಪಕ್ಕದಲ್ಲಿ ನಿರ್ಮಿಸಿದ ತಡೆ ಕಲ್ಲು ಕೂಸುಗಳು ಮುರಿದು ಆಟೋವಿನಲ್ಲಿದ್ದ ರತ್ನಮ್ಮ ಕೋಂ ನಾರಾಯಣಸ್ವಾಮಿ ವಯಸ್ಸು 45 ವರ್ಷ, ವಾಸ ನ್ಯೂಟೌನ್ ಬೇತಮಂಗಲ ರವರಿಗೆ ತಲೆಗೆ ತೀವ್ರ ರಕ್ತ ಗಾಯಗಳಾಗಿದ್ದರಿಂದ ಸ್ಥಳದಲ್ಲಿಯೆ ಮೃತಪ್ಪಟ್ಟಿರುತ್ತಾರೆ.  ನಾರಾಯಣಸ್ವಾಮಿ, ಚಿನ್ನಕ್ಕ ರವರಿಗೆ ತಲೆಗೆ ಮತ್ತು ಇತರೆ ಕಡೆಗಳಲ್ಲಿ ರಕ್ತ ಗಾಯಗಳಾಗಿರುತ್ತದೆ. ಆಟೋ ಚಾಲಕನಿಗೂ ಸಹ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ.

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು :ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

 

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s