ದಿನದ ಅಪರಾಧಗಳ ಪಕ್ಷಿನೋಟ 17 ನೇ ಪೆಬ್ರವರಿ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:16.02.2016 ಸಂಜೆ 5.00 ಗಂಟೆಯಿಂದ  ದಿನಾಂಕ: 17.02.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಕರ್ಲಿನಾ ಕೋಂ ಮುರುಗೇಶ್, ಕೆ.ಹೆಚ್.ಬಿ ಕಾಲೊನಿ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರ ಮಗನಾದ ಶ್ರೀ ವಿಜಯ್, 29 ವರ್ಷ ರವರು, 2 ತಿಂಗಳ ಹಿಂದೆ ಗಾರೆ ಕೆಲಸಕ್ಕೆ ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಮನೆಗೆ ವಾಪಸ್ಸು ಬರದೆ ಕಾಣೆಯಾಗಿರುತ್ತಾರೆ.

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

-ಭದ್ರತಾ ಕಾಯ್ದೆ :ಇಲ್ಲ

-ಇತರೆ ಪ್ರಕರಣಗಳು :01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಾಣ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಮಣಿ ಬಿನ್ ಗೋಪಾಲ್, ಒನ್ ಪಿ.ಓ ಬ್ಲಾಕ್, ಮಾರಿಕುಪ್ಪಂ, ಕೆ.ಜಿ.ಎರ್ಫ ರವರು ದಿನಾಂಕ 16.02.2016 ರಂದು ಸಂಜೆ 04.00 ಗಂಟೆಯಲ್ಲಿ ರಾಬರ್ಟ್ ಸನ್ ಪೇಟೆಯ  ನ್ಯಾಯಾಲಯದ ಆವರಣದಲ್ಲಿದ್ದಾಗ, ಆರೋಪಿಯಾದ ವೆನ್ನಿಲಾ  ರವರು ಉದ್ದೇಶ ಪೂರ್ವಕವಾಗಿ ದೂರುದಾರರ ಬಳಿ ಬಂದು ನೀನು ಯಾರು ಬಾರ್ ಆಸೋಷಿಯೇಷನ್ ಬಳಿ ಕುಳಿತುಕೊಂಡು ಟೈಪಿಂಗ್ ಮಾಡಿಸಲು ಎಂದು  ಹೇಳಿ, ಕೆಟ್ಟ ಮಾತುಗಳಿಂದ ಬೈದು, ಪಾದರಕ್ಷೆಯಿಂದ ಹೊಡೆದು ಅವಮಾನಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : 02

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮದುವೆ ಮಾಡಿರುವ ವಿಚಾರದಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 16.02.2016 ರಂದು ದೂರುದಾರರಾದ ಶ್ರೀ  ಶಂಕರ್‌ ಮೂರ್ತಿ  ಸಿಡಿಪಿಓ, ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ 06.12.2015 ರಂದು  ಅಪ್ರಾಪ್ತ ಬಾಲಕಿ ತಾರಾ ಬಿನ್ ಮಂಜುನಾಥ್ , 17 ವರ್ಷ ರವರ ಪೊಷಕರಾದ ಮಂಜು,  ಆಶೋಕ್‌   ಸ್ವರ್ಣಗೌರಿ  ರವರು ಆಕೆಯ ಇಚ್ಚೆಯ ವಿರುದ್ಧವಾಗಿ ಹಾಗೂ ಬಲವಂತವಾಗಿ ಬಂಗಾರಪೇಟೆ ತಾಲ್ಲೂಕು ಪಾಕರಹಳ್ಳಿ ಗ್ರಾಮದ  ಆರೋಪಿ ಅಶೋಕ್ ರವರರೊಂದಿಗೆ ಹುದುಕುಳ ಬಳಿಯಿರುವ ಹನುಮಂತರಾಯ ಸ್ವಾಮಿ ದೇವಸ್ಥಾನದಲ್ಲಿ ವಿವಾಹ ಮಾಡಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಫೀಯು ಬೆಳೆ ಬೆಳೆದಿರುವ ಬಗ್ಗೆ ಎನ್.ಡಿ.ಪಿ.ಎಸ್. ಕಾಯ್ದೆ ಅಡಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 16.02.2016 ರಂದು ಬೆಳಿಗ್ಗೆ 9.30 ಗಂಟೆಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ. ರವಿಕುಮಾರ್‍ ರವರು ಬೂದಿಕೋಟೆ ಹೋಬಳಿಯ ತಮ್ಮೇನಹಳ್ಳಿಗೆ ಹೋಗಿ ನೋಡಲಾಗಿ, ಜಮೀನು ಸರ್ವೆ ನಂ-88/1,  93, 98 ರ ಒಟ್ಟು   2 ಎಕರೆ 30 ಗುಂಟೆ ಜಮೀನಿನಲ್ಲಿ ಆರೋಪಿ ಪಾಪಿರೆಡ್ಡಿ ಬಿನ್ ಗುರುವಾರೆಡ್ಡಿ, ದಿನ್ನಕೊತ್ತೂರು ಗ್ರಾಮ ಎಂಬುವರು ಯಾವುದೇ ಪರವಾನಿಗೆ ಪಡೆಯದೇ ಮಾದಕ ಬೆಳೆಯಾದ ಅಫೀಮು ಬೆಳೆದಿದ್ದು,  ಜಮೀನನ್ನು ಆರೋಪಿ ಆನಂದಶೆಟ್ಟಿ, ಬೂದಿಕೋಟೆ ಗ್ರಾಮ ರವರಿಂದ ಆರೋಪಿ ಪಾಪಿರೆಡ್ಡಿ ಗುತ್ತಿಗೆಗೆ ಪಡೆದಿದ್ದು,  ಆರೋಪಿ ಶಂಕರ್ ರೆಡ್ಡಿ, ಮದನಪಳ್ಳಿ, ಆಂದ್ರಪ್ರದೇಶ ರವರು ಬೀಜ ವಿತರಣೆ ಮಾಡಿರುತ್ತಾರೆ. ಸದರಿ ಬೆಳೆಯ ಒಟ್ಟು ಬೆಲೆ 30 ಲಕ್ಷ ರೂಗಳಾಗಿದ್ದು, ಕಾನೂನು ಬಾಹಿರ ಬೆಳೆಯಾಗಿರುವುದರಿಂದ  ಆರೋಪಿಗಳ ವಿರುದ್ಧ ಕೇಸು ದಾಖಲಿಸಿರುತ್ತೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s