ದಿನದ ಅಪರಾಧಗಳ ಪಕ್ಷಿನೋಟ 08 ನೇ ಪೆಬ್ರವರಿ 2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:07.02.2016 ಸಂಜೆ 5.00 ಗಂಟೆಯಿಂದ  ದಿನಾಂಕ:08.02.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

 -ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : 02

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಜ್ಯೋತಿ ಕೋಂ  ಅಮರೇಶ್‌, ನೀಲಗಿರಿ ಹಳ್ಳಿ ರವರು ಮನೆಯ ಬಳಿ ಇರುವಾಗ  ಆರೋಪಿ   ನಾರಾಯಣಸ್ವಾಮಿ ಎಂಬುವರು ದೂರುದಾರರನ್ನು ಕುರಿತು ವೃದ್ಯಾಪ್ಯ ಪಿಂಚಣಿ ಹಣವನ್ನು ಕೊಡುವಂತೆ ಕೇಳಿದ್ದು ಅದಕ್ಕೆ ತಮ್ಮ ಗಂಡ ಕೆಲಸಕ್ಕೆ ಹೋಗಿದ್ದಾನೆ ಬಂದ ಮೇಲೆ ಕೊಡುತ್ತೇನೆಂತ ಹೇಳುತ್ತಿದ್ದಂತೆ, ಆರೋಪಿ ನಾರಾಯಣಸ್ವಾಮಿ, ಅಮರಾವತಿ ಮತ್ತು ಚಿಕ್ಕವೆಂಕಟಮ್ಮ ರವರು ಕೆಟ್ಟ ಮಾತುಗಳಿಂದ ಬೈದು,  ಹೊಡೆದು ರಕ್ತಗಾಯಪಡಿಸಿ ಸಾಯಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀಮತಿ ಚಿಕ್ಕವೆಂಕಟಮ್ಮ ಕೋಂ ಚಂಗಪ್ಪ, ನೀಲಗಿರಿ ಹಳ್ಳಿ ರವರು ನೀಡಿದ ದೂರಿನಲ್ಲಿ, ದೂರುದಾರರ ಮಗನಿಗೂ ಮತ್ತು ಆರೋಪಿಗಳಾದ ಅಮರೇಶ್, ಲಕ್ಷ್ಮಕ್ಕ ಮತ್ತು ಜ್ಯೋತಿ, ನೀಲಗಿರಿಹಳ್ಳಿ ಗ್ರಾಮ ರವರಿಗೆ ಕೊಳವೆ ಬಾವಿ ವಿಚಾರದಲ್ಲಿ ಮನಃಸ್ತಾಪಗಳಾಗಿದ್ದು, ದಿನಾಂಕ 07.02.2016 ರಂದು ಬೆಳಗ್ಗೆ 07-30 ಗಂಟೆಯಲ್ಲಿ ದೂರುದಾರರು ಮನೆಯಲ್ಲಿರುವಾಗ, ಆರೊಪಿಗಳು ದೂರುದಾರರನ್ನು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಹೊಡೆದು ಮೈ ನೋವುಂಟುಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

 -ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ರಾಬರ್ಟ್ ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ. ನರಸಿಂಹಮೂರ್ತಿ ಬಿನ್ ಮುನಿವೆಂಕಟಪ್ಪ, ಮಾರಿಕುಪ್ಪಂ ಗ್ರಾಮ ರವರ ಭಾಮೈದನಾದ ಮಂಜುನಾಥ್ ಮತ್ತು ಮುರಳಿ ರವರು  ದಿನಾಂಕ: 06/02/2016 ರಂದು ಸಂಜೆ 07.00 ಗಂಟೆಯಲ್ಲಿ ರಾಬರ್ಟ್ ಸನ್  ಪೇಟೆ – ಕುಪ್ಪಂ ಮುಖ್ಯ ರಸ್ತೆಯಲ್ಲಿ, ಗೌತಮ ನಗರದ 7ನೇ ಕ್ರಾಸ್ ಬಳಿ ಇರುವ ಮಹೇಂದ್ರ ಶೋ ರೂಂ ಮುಂಭಾಗ ದೂರುದಾರರ ಟಿ.ವಿ.ಎಸ್ ಸೆಂಟ್ರಾ ದ್ವಿಚಕ್ರ ವಾಹನ ಸಂಖ್ಯೆ:ಕೆ.ಎ-03-ಇಎನ್-3654 ರಲ್ಲಿ ಹೋಗುತ್ತಿದ್ದಾಗ, ಎದುರುಗಡೆಯಿಂದ ಹೋಂಡಾ ಡಿಯೋ ದ್ವಿಚಕ್ರ ವಾಹನ ಸಂಖ್ಯೆ: ಕೆ.ಎ.08-ಆರ್-634ರ ಸವಾರ ಹಿಂಬದಿಯಲ್ಲಿ ಇನ್ನೊಬ್ಬರನ್ನು ಕುಳ್ಳರಿಸಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುರಳಿ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಟಿ.ವಿ.ಎಸ್ ಸೆಂಟ್ರಾ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ್ದು, ಮಂಜುನಾಥ ಮತ್ತು ಮುರಳಿ ರವರಿಗೆ ರಕ್ತಗಾಯಗಳಾಗಿದ್ದು, ಆರೋಪಿ ಮತ್ತು ಹಿಂಬದಿಯಲ್ಲಿ ಕುಳಿತಿದ್ದ ಇನ್ನೊಬ್ಬ ಆಸಾಮಿಗೂ ಸಹ ರಕ್ತಗಾಯಗಳಾಗಿರುತ್ತದೆ.

ಭದ್ರತಾ ಕಾಯ್ದೆ : 01

ಕೆಳಕಂಡ ಆಸಾಮಿಯ ವಿರುದ್ಧ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆ

೧. ವಿಜಯ್‌ಕುಮಾರ್‍ ಬಿನ್ ಮುರಗವೇಲು, ೨೦ ವರ್ಷ, ಸಂಜಯ್‌ ಗಾಂಧಿನಗರ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್.

 

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s