ದಿನದ ಅಪರಾಧಗಳ ಪಕ್ಷಿನೋಟ 06.02.2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:05.02.2016 ಸಂಜೆ 5.00 ಗಂಟೆಯಿಂದ  ದಿನಾಂಕ:06.02.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 05.02.2016 ರಂದು ಮಧ್ಯಾಹ್ನ 12.00 ಗಂಟೆ ಸಮಯದಲ್ಲಿ ದೂರುದಾರರಾದ ಶ್ರೀ. ಕುಮಾರ್‍ ಬಿನ್ ಆಂಜಪ್ಪ, ೪೩ ವರ್ಷ, ದಾದೇನಹಳ್ಳಿ ಬಂಗಾರಪೇಟೆ ರವರು ಗ್ರಾಮಸ್ಥರೊಂದಿಗೆ ಅವರ ಮನೆಯ ಬಳಿ ಕುಳಿತು ಮಾತನಾಡಿಕೊಂಡಿದ್ದಾಗ ಆರೋಪಿಗಳಾದ ಶ್ರೀನಿವಾಸ ಬೆಂಗಳೂರು ಎಕ್ಸ್ ಪ್ರೆಸ್ ಪತ್ರಿಕೆ ಸಂಪಾಧಕ ಮತ್ತು ನಾಗರಾಜ್ ರವರುಗಳು ಸ್ವೀಫ್ಟ್ ಡಿಸೈನರ್ ಕಾರ್ ಸಂಖ್ಯೆ ಕೆಎ-03-ಎಂಎಕ್ಸ್ -1191 ರ ಕಾರಿನಲ್ಲಿ ಬಂದು ಬೆಂಗಳೂರು ಎಕ್ಸ್ ಪ್ರೆಸ್ ಪತ್ರಿಕೆಗಳನ್ನು ತೆಗೆದು ದೂರುದಾರರಿಗೆ ಮತ್ತು ಇತರರಿಗೆ ನೀಡಿ ಓದಲು ತಿಳಿಸಿದ್ದು ಅದಕ್ಕೆ ದೂರುದಾರರು ಮತ್ತು ಗ್ರಾಮಸ್ಥರು ಕೋಟಿಲಿಂಗೇಶ್ವರ ದೇವಸ್ಥಾನ ಕಮ್ಮಸಂದ್ರ ಹಾಗೂ ಕುಮಾರಿ ಮೇಲೆ ಆಸಭ್ಯವಾಗಿ ಪತ್ರಿಕೆಯಲ್ಲಿ ಮುದ್ರಿಸಿದ್ದೀರ ಎಂದು ಕೇಳಿದಕ್ಕೆ ಆರೋಪಿಗಳು ಕಾರಿನಲ್ಲಿದ್ದ ಒಂದು ರಾಡ್ ಮತ್ತು ದೊಣ್ಣೆಯನ್ನು ತೆಗೆದು ಹಲ್ಲೆ ಮಾಡಲು ಪ್ರಯತ್ನಿಸಿದಾಗ ದೂರುದಾರರು ಕೂಗಿಕೊಂಡಾಗ ಅಕ್ಕಪಕ್ಕದವರು ಬರುವುದನ್ನು ಕಂಡು ಆರೋಪಿಗಳು ರವರು ಕಾರಿನಲ್ಲಿ ಕುಳಿತು ಕಾರನ್ನು ಅತಿವೇಗವಾಗಿ ಚಲಾಯಿಸಿ ಗ್ರಾಮಸ್ಥರ ಮೇಲೆ ಹತ್ತಿಸಿ ಸಾಯಿಸಲು ಪ್ರಯತ್ನಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

 -ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : 02

       ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ ದಿನಾಂಕ. 06.02.2016 ರಂದು ಬೆಳಗ್ಗೆ 7.00 ಗಂಟೆಗೆ ದೂರುದಾರರಾದ ಶ್ರೀಮತಿ ಬಿಂದು ಲಕ್ಷ್ಮೀ ಕೋಂ ಶ್ರೀನಿವಾಸ, ಪಾಲಾರ್‍ ನಗರ, ಬೆಮಲ್ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ, ದಿನಾಂಕ. 05.02.2016 ರಂದು ಮಧ್ಯಾಹ್ನ 12.00 ಗಂಟೆಯಲ್ಲಿ ದೂರುದಾರರ ಗಂಡ ಶ್ರೀನಿವಾಸ ಎಂಬುವವರ ಸ್ವೀಫ್ಟ್ ಡೀಸೈರ್ ಕಾರ್ ನಂ. ಕೆಎ-03-ಎಂಎಕ್ಸ್- 1191 ನ ಕಾರಿನಲ್ಲಿ ಬಲಿಜಪಲ್ಲಿ ಕಡೆ ಹೋಗಿದಾಗ ಆರೋಪಿ ರಮೇಶ್ ಮತ್ತು ಇತರರು ಕಾರನ್ನು ತಡೆದು ಶ್ರೀನಿವಾಸ ರವರನ್ನು ಹೊಡೆದು ಪ್ರಾಣ ಬೆದರಿಕೆ ಹಾಕಿ ಸ್ವೀಫ್ಟ್ ಡೀಸೈರ್ ಕಾರನ್ನು ಹೊಡೆದು ಜಖಂಗೊಳಿಸಿ ಸುಮಾರು 80,000/- ರೂ ಗಳಷ್ಟು ನಷ್ಟ ಉಂಟು ಮಾಡಿರುತ್ತಾರೆ. ಸದರಿ ಕೃತ್ಯವು ದಾದೇನಹಳ್ಳಿ ಬಳಿ ನಡೆದಿರುತ್ತೆ.

 ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟೇಶ ಬಿನ್ ನಾರಾಯಣಪ್ಪ, ೨೬ ವರ್ಷ, ವಿಲೇಜ್ ಮಾರಿಕುಪ್ಪಂ ರವರಿಗೂ ಮತ್ತು ಆರೋಪಿ ವಿಘ್ನೇಶ ರವರ ತಂದೆ ನಡುವೆ ಜಮೀನು ವಿವಾದವಿದ್ದು ಈ ವಿಚಾರದಲ್ಲಿ ಆರೋಪಿ ವಿಘ್ನೇಶ ದೂರುದಾರರಿಗೆ ಸಾಯಿಸುವುದಾಗಿ ಬೆದರಿಸಿ, ದಿನಾಂಕ 05.02.2016 ರಂದು ರಾತ್ರಿ 10.15 ಗಂಟೆಯಲ್ಲಿ ದೂರುದಾರರು ದ್ವಿಚಕ್ರವಾಹನದಲ್ಲಿ ಊರಿಗೆ ಹೋಗಲು ಮಾರಿಕುಪ್ಪಂ ರಸ್ತೆಯಲ್ಲಿರುವ ಶನಿಮಹಾತ್ಮ ದೇವಾಸ್ಥಾನದ ಮುಂದೆ ಗಾಡಿ ಚಾಲಾಯಿಸಿಕೊಂಡು ಹೋಗುತ್ತಿದ್ದಾಗ ಆರೋಪಿ ವಿಘ್ನೇಶ ಮತ್ತು ಇತರೆ ಇಬ್ಬರು ದೂರುದಾರರನ್ನು ತಡೆದು ಖಾಲಿ ಬಿಯರ್ ಬಾಟಲ್ ನಿಂದ ದೂರುದಾರರ ಬಲಕಿವಿ ಮತ್ತು ತಲೆ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

  -ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:05.02.2016 ರಂದು ರಾತ್ರಿ 07-00 ಗಂಟೆಗೆ ದೂರುದಾರರಾದ ರವೀಂದ್ರ ಬಿನ್ ಆನಂದ, ೨೩ ವರ್ಷ, ಅಬು ಬಜಾರ್‍ ಬೀದಿ, ಮಾರಿಕುಪ್ಪಂ ರವರು ದ್ವಿಚಕ್ರ ವಾಹನ ಸಂಖ್ಯೆ ಕೆ.ಎ 08 ಯು 3579 ರಲ್ಲಿ ರಾಬರ್ಟ್‌‌ಸನ್‌ಪೇಟೆಗೆ ಹೋಗಲು ಬಿ.ಎಂ ರಸ್ತೆಯ ಥಾಮಸ್ ಚರ್ಚ್ ಬಳಿ ಆಂಡ್ರಸನ್ ಪೇಟೆ ಕಡೆಯಿಂದ ಹೋಗುತ್ತಿದ್ದಾಗ ಎದುರುಗಡೆಯಿಂದ ಪಲ್ಸರ್ ದ್ವಿಚಕ್ರ ವಾಹನದ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದೂರುದಾರರಿಗೆ ರಕ್ತಗಾಯವಾಗಿರುತ್ತೆ

ಭದ್ರತಾ ಕಾಯ್ದೆ : 05

ಕೆಳಕಂಡ ಆಸಾಮಿಯ ವಿರುದ್ಧ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ

೧. ಅಜೀತ್ ಕುಮಾರ್‍ ಬಿನ್ ಸೆಲ್ವರಾಜ್, ೨೧ ವರ್ಷ, ೨ನೇ ಬ್ಲಾಕ್, ಆಂಡ್ರಸನ್‌ಪೇಟೆ

೨. ಸಂತೋಷ್ ಬಿನ್ ಸೆಲ್ವರಾಜ್, ೨೨ ವರ್ಷ, ೨ನೇ ಬ್ಲಾಕ್, ಆಂಡ್ರಸನ್‌ಪೇಟೆ

ಮಾರಿಕುಪ್ಪಂ ಪೊಲೀಸ್ ಠಾಣೆ

೧. ಶ್ರೀಧರ್‍ ಸೆಲ್ವ ಮೂರ್ತಿ ಬಿನ್ ಗೋಪಾಲ್ ೫೮ ವರ್ಷ, ನಾರ್ತ್‌ ಗಿಲ್ಬರ್ಟ್‌‌, ಮಾರಿಕುಪ್ಪಂ

೨. ಶರ್ಮ ಬಿನ್ ಜಿನಿಕ್ಲಾಸ್, ೫೦ ವರ್ಷ, ವಾಚ್‌ ಮ್ಯಾನ್ ಲೈನ್, ಮಾರಿಕುಪ್ಪಂ

ಬಂಗಾರಪೇಟೆ ಪೊಲೀಸ್ ಠಾಣೆ

೧. ಸಂತೋಷ್ ಕುಮಾರ್‍ ಬಿನ್ ಅಂಜಿನಪ್ಪ, ೨೮ ವರ್ಷ, ನಾರಾಯಣಪುರ ಬಂಗಾರಪೇಟ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s