ದಿನದ ಅಪರಾಧಗಳ ಪಕ್ಷಿನೋಟ 06.02.2016 ರ ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:06.02.2016 ಬೆಳಿಗ್ಗೆ 10.00 ಗಂಟೆಯಿಂದ  ಸಂಜೆ 5.00 ಗಂಟೆಯವರೆಗೆ  ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : 01

       ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 05.02.2016 ರಂದು ಸಂಜೆ ಸುಮಾರು 5.00 ಗಂಟೆಯಲ್ಲಿ ಪುರಂ ಗ್ರಾಮದಲ್ಲಿರುವ ದೂರುದಾರರಾದ ಶ್ರೀಮತಿ ಸುನಂದಮ್ಮ ಕೋಂ ರಮೇಶ್ ೩೦ ವರ್ಷ, ರವರ ಮನೆಗೆ ಆರೋಪಿಗಳಾದ ಗೋವಿಂದಪ್ಪ, ಬಾಬು, ಸುರೇಶ್, ಸೀತಮ್ಮ ರವರುಗಳು ಅಕ್ರಮ ಪ್ರವೇಶ ಮಾಡಿ, ದೊಣ್ಣೆ & ಮಾರಕಾಸ್ತ್ರಗಳಿಂದ ಮನೆಯ ಮೇಲ್ಛಾವಣಿಯ ಹೆಂಚುಗಳು, ಸಿಮೆಂಟ್ ಷೀಟ್ ಗಳು, ಗೋಡೆಗಳು, ಮನೆಯಲ್ಲಿದ್ದ ಟಿವಿ ಹಾಗೂ ಇತರೆ ಸಾಮಾನುಗಳನ್ನು ಹೊಡೆದು ಸುಮಾರು 2,50,000/-ರೂಗಳಷ್ಟು ನಷ್ಟವನ್ನುಂಟು ಮಾಡಿ, ದೂರುದಾರರು ಮತ್ತು ಅವರ ಗಂಡ ರಮೇಶ್ ರವರಿಗೆ ‘ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಹೊಡೆದು, ಸಾಯಿಸುವುದಾಗಿ ಪ್ರಾಣಬೆದರಿಕೆ ಹಾಕಿರುತ್ತಾರೆ

  -ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

ಭದ್ರತಾ ಕಾಯ್ದೆ : 05

ಕೆಳಕಂಡ ಆಸಾಮಿಯ ವಿರುದ್ಧ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆ

೧. ‌ಶ್ರೀನಿವಾಸ ಬಿನ್ ಸುಬ್ರಮಣಿ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂಭಾಗ, ವಿವೇಕನಗರ ರಾಬರ್ಟ್‌ಸನ್‌ಪೇಟೆ

೨. ಜಯಕುಮಾರ್‍ ಬಿನ್ ಶೇಖರ್‍, ೨೩ ವರ್ಷ, ೪ನೇ ಬ್ಲಾಕ್ ರಾಬರ್ಟ್‌‌ಸನ್‌ಪೇಟೆ.

೩. ನವೀನ್ ಬಿನ್ ಬಾಬು, ೨೩ ವರ್ಷ, ಬೌರಿಲಾಲ್‌ಪೇಟೆ, ರಾಬರ್ಟ್‌ಸನ್‌ಪೇಟೆ

 ಕಾಮಸಮುದ್ರಂ ಪೊಲೀಸ್ ಠಾಣೆ

೧. ಮುರಳಿ, ೨೭ ವರ್ಷ, ಗುರುಡಕೆಂಪನಹಳ್ಳಿ, ಕಾಮಸಮುದ್ರಂ.

೨. ರಾಮಾಂಜಪ್ಪ ಬಿನ್ ಲೇಟ್ ಲೇಟ್ ಮುನಿಸ್ವಾಮಿ, ಕಾದ್ರಿಪುರ, ಕಾಮಸಮುದ್ರಂ.

-ಇತರೆ ಪ್ರಕರಣಗಳು : ೦1

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಸ್‌.ಸಿ./ಎಸ್‌.ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 04/02/2016 ರಂದು ಮಧ್ಯಾಹ್ನ 12.10 ಗಂಟೆ ಸಮಯದಲ್ಲಿ ದೂರುದಾರರಾದ ಶ್ರೀಮತಿ ರೇಖಾ ಪಾಟಿಲ್ ಕೋಂ ಹನುಮಂತಗೌಡ ಪಾಟಿಲ್, ಪಾರಾಂಡಹಳ್ಳಿ ರಾಬರ್ಟ್‌‌ಸನ್‌ಪೇಟೆ ರವರು ತನ್ನ ಮಗಳಿಗೆ ಊಟವನ್ನು ತೆಗೆದುಕೊಂಡು ರಾಬರ್ಟ್ ಸನ್ ಪೇಟೆಯ 4ನೇ ಕ್ರಾಸ್ ನಲ್ಲಿರುವ ಬಿ.ವಿ.ಎನ್ ಶಾಲೆಯ ಬಳಿ ಹೋದಾಗ ಪಾರಾಂಡಹಳ್ಳಿ ವಾಸಿಯಾದ ಮಂಜುನಾಥ್ ರವರ ಹೆಂಡತಿಯಾದ ಕವಿತಾ ರವರು ಶಾಲೆಯ ಬಳಿಯಿದ್ದು, ದೂರುದಾರರನ್ನು ನೋಡಿ ನಗುವುದು ಮತ್ತು ಹೀನಾಯವಾಗಿ ಮಾತನಾಡುವುದು ಮಾಡುತ್ತಿದ್ದು ಈ ಬಗ್ಗೆ ದೂರುದಾರರು ದಿನಾಂಕ 04.02.2016 ರಂದು ಮಧ್ಯಾಹ್ನ 2.30 ಗಂಟೆಯ ಸಮಯದಲ್ಲಿ ದೂರುದಾರರು ಮತ್ತು ಅವರ ತಾಯಿಯಾದ ವಿಜಿಯಕುಮಾರಿ ರವರು ಮಂಜುನಾಥ್ ರವರನ್ನು ಕೇಳಿದಕ್ಕೆ, ಮಂಜುನಾಥ್ ರವರು ತನ್ನ ಹೆಂಡತಿಯಾದ ಕವಿತಾಳ ಬಗ್ಗೆ ಮಾತನಾಡಿದರೆ ಅಷ್ಟೆ ಎಂದು ಕೆಟ್ಟ ಪದಗಳಿಂದ ಬೈದು ದೂರುದಾರರನ್ನು ಮತ್ತು ಅವರ ತಾಯಿಯನ್ನು ಮಂಜುನಾಥ್ ಮತ್ತು ಕವಿತಾ ರವರು ತಳಿರುತ್ತಾರೆ.

 -ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s