ದಿನದ ಅಪರಾಧಗಳ ಪಕ್ಷಿನೋಟ 03.02.2016 ರ ಸಂಜೆ

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 03.02.2016 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ   ದಾಖಲಾಗಿರುವ   ಪ್ರಕರಣಗಳ  ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: 01

       ಉರಿಗಾಂ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. (ನಿರ್ಧಿಷ್ಟ ದಾವೆ) ದೂರುದಾರರಾದ ಶ್ರೀ.  ಮುರುಗೇಶನ್, ೭೦ ವರ್ಷ, ಹೆನ್ರೀಸ್ ಲೈನ್, ಉರಿಗಾಂ ರವರ ನಿವೇಶನ ಸಂಖ್ಯೆ 88 ಮತ್ತು 90 ನಿವೇಶನಗಳು ರಾಬರ್ಟ್‌‌ಸನ್‌ಪೇಟೆಯ ಸ್ವಾಮಿನಾಥಪುರಂ ಕೆ.ಜಿ.ಎಪ್ ನಲ್ಲಿ ಇದ್ದು, ದೂರುದಾರರು ವಯಸ್ಸಾಗಿದ್ದರಿಂದ ಅವರ ಸಂಬಂಧಿಯಾದ ನವೀನ್ ಕುಮಾರ್‍, ೩೫ ವರ್ಷ, ಇ.ಟಿ ಬ್ಲಾಕ್, ಕೆ.ಜಿ.ಎಫ್ ರವರು ಅವರ ಕಡೆಯಿಂದ ಮೇಲ್ಕಂಡ ನಿವೇಶನಗಳಿಗೆ ಸಂಬಂದಿಸಿದ ದಾಖಲೆಗಳನ್ನು ಮತ್ತು ಪಾರಂಡಹಳ್ಳಿ ಬಳಿ ಇರುವ ಜಮೀನಿನ ದಾಖಲೆಗಳನ್ನು ಪಡೆದುಕೊಂಡು ಆರೋಪಿ ನಂದಕುಮಾರ್‍, ೭೦ ವರ್ಷ, ಸ್ವಾಮಿನಾಥಪುರಂ ರಾಬರ್ಟ್‌‌ಸನ್‌ಪೇಟೆ ರವರಿಗೆ ಮಾರಲು ಪ್ರಯತ್ನಿಸಿ ದೂರುದಾರರಿಗೆ ಮೋಸ ಮಾಡಿರುತ್ತಾರೆ.

 -ಹಲ್ಲೆ :ಇಲ್ಲ

 -ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

ಭದ್ರತಾ ಕಾಯ್ದೆ : 03

ಕೆಳಕಂಡ ಪೊಲೀಸ್ ಠಾಣೆಗಳಲ್ಲಿ ಕೆಳಕಂಡ ಆಸಾಮಿಗಳ ವಿರುದ್ಧ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ

 ಬಂಗಾರಪೇಟೆ ಪೊಲೀಸ್ ಠಾಣೆ೦೧

೧. ಪ್ರೇಮ್ ಕುಮಾರ್‍ ಬಿನ್ ಶಿವರಾಜ್, ೩೭ ವರ್ಷ, ಗಂಗಮ್ಮನಪಾಳ್ಯ, ಬಂಗಾರಪೇಟೆ

 ಮಾರಿಕುಪ್ಪಂ ಪೊಲೀಸ್ ಠಾಣೆ೦೨

೧. ನಂದರೆಡ್ಡಿ ಬಿನ್ ಲೇಟ್ ರಾಮಲಿಂಗರೆಡ್ಡಿ, ದೊಡ್ಡಕಲ್ಲಹಳ್ಳಿ, ಮಾರಿಕುಪ್ಪಂ

೨. ಶ್ರೀರಾಮರೆಡ್ಡಿ ಬಿನ್ ಕೃಷ್ಣರೆಡ್ಡಿ, ದೊಡ್ಡಕಲ್ಲಹಳ್ಳಿ, ಮಾರಿಕುಪ್ಪಂ
-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : 01

     ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 29.01.2016 ರಂದು ಬೆಳಗ್ಗೆ 9.00 ಗಂಟೆಗೆ ದೂರುದಾರರಾದ ಮುಭಾರಕ್ ಬಿನ್ ಇರ್ಷದ್, ಸಂಜಯಗಾಂಧಿನಗರ, ರಾಟರ್ಬ್‌‌ಸನ್‌ಪೇಟೆ ರವರ ಅಕ್ಕ ಕು.ಸಲ್ಮಾ, ೨೫ ವರ್ಷ ರವರು ಟೀ ಮಾಡುವ ಸಲುವಾಗಿ ಸೀಮೆ ಎಣ್ಣೆ ಸ್ಟೌವ್‌ಗೆ ಸೀಮೆಎಣ್ಣೆ ಹಾಕಿ ಸದರಿ ಕ್ಯಾನಿಗೆ ಮುಚ್ಚಳವನ್ನು ಹಾಕದೇ ಸರ್ಜಾ ಮೇಲೆ ಇಟ್ಟಿದ್ದು ಸ್ಟೌವ್‌ನ್ನು ಬೆಂಕಿ ಕಡ್ಡಿಯಿಂದ ಅಂಟಿಸಿ ನಂತರ ಗ್ಲಾಸ್ ನ್ನು ತೆಗೆದುಕೊಳ್ಳಲು ಹೋದಾಗ ಸೀಮೆಎಣ್ಣೆ ಇದ್ದ ಕ್ಯಾನ್‌ಗೆ ಆಕಸ್ಮಿಕವಾಗಿ ಕೈ ತಗುಲಿ ಹುರಿಯುತ್ತಿದ್ದ ಸೀಮೆಎಣ್ಣೆ ಸ್ಟವ್ ಮೇಲೆ ಬಿದ್ದು ಕು.ಸಲ್ಮಾ ರವರ ಮುಖದ ಮೇಲೆ, ಎರಡು ಕೈಗಳ ಮೇಲೆ ಎದೆಯ ಮೇಲೆ ಬೆಂಕಿ ತಾಕಿ ಸುಟ್ಟಗಾಯಗಳಾಗಿ ಚಿಕಿತ್ಸೆಯ ಸಲುವಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿದ್ದು ದಿನಾಂಕ: 03.02.2016 ರಂದು ಬೆಳಗ್ಗೆ 4.50 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ.

 -ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s