ದಿನದ ಅಪರಾಧಗಳ ಪಕ್ಷಿನೋಟ 02.02.2016

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 01.02.2016 ರಂದು ಸಂಜೆ  5.00 ಗಂಟೆಯಿಂದ ದಿನಾಂಕ 02.02.2016 ಬೆಳಿಗ್ಗೆ 10.00 ಗಂಟೆಯವರೆಗೆ  ದಾಖಲಾಗಿರುವ  ಪ್ರಕರಣಗಳ ವಿವರಗಳು.

 -ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ :ಇಲ್ಲ

-ಕನ್ನ ಕಳುವು : ‌ಇಲ್ಲ

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಮೋಸ: ‌ಇಲ್ಲ

-ಹಲ್ಲೆ : 05

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತದೆ.

ಸುಮಾರು 8 ದಿನಗಳ ಹಿಂದೆ ಮಂಜುನಾಥ್ ಬಿನ್ ಲೇಟ್ ಮುನಿಯಪ್ಪ, ಕಣೀಂಬೆಲೆ ಗ್ರಾಮ ಮತ್ತು ಅದೇ ಗ್ರಾಮದ ಶ್ರೀನಿವಾಸ್ ರವರಿಗೂ ಗ್ರಾಮದಲ್ಲಿರುವ ಶಂಕರ್ ರವರ ಅಂಗಡಿಯ ಬಳಿ ಊಟ ಮಾಡುವ ವಿಚಾರದಲ್ಲಿ ಗಲಾಟೆಗಳಾಗಿದ್ದು, ಆ ಸಮಯದಲ್ಲಿ ಶ್ರೀನಿವಾಸ್ ರವರು ಮಂಜುನಾಥ್ ರವರ ಎಡಗೈ ಗೆ ಮಚ್ಚಿನಿಂದ ಹೊಡೆದು ರಕ್ತ ಗಾಯಪಡಿಸಿರುತ್ತಾನೆ. ಮತ್ತೆ ಇದೇ ವಿಚಾರದಲ್ಲಿ ದಿನಾಂಕ 31.01.2016 ರಂದು ಸಂಜೆ 4.30 ಗಂಟೆ ಸಮಯದಲ್ಲಿ ಶ್ರೀನಿವಾಸ, ಕಿರಣ್ ಕುಮಾರ್‍, ಮಂಜುನಾಥ್, ಮುನಿಯಪ್ಪ ರವರುಗಳು ಮತ್ತು ಮಂಜುನಾಥ್, ಮಂಜುನಾಥ್ ಬಿ,ಎನ್‌, ನಾಗರಾಜ, ಲಕ್ಷ್ಮಣಪ್ಪ ರವರುಗಳು ಪರಸ್ಪರ ಕೆಟ್ಟ ಮಾತುಗಳಿಂದ ಬೈದುದಾಡಿಕೊಂಡು ದೊಣ್ಣೆಗಳಿಂದ ಹೊಡೆದಾಡಿಕೊಂಡಿರುತ್ತಾರೆ. ಈ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿರುತ್ತದೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

ದಿನಾಂಕ 31.01.2016 ರಂದು ಸಂಜೆ 5.00 ಗಂಟೆ ಸಮಯದಲ್ಲಿ ದೂರುದಾರರಾದ ಶ್ರೀ. ವೆಂಕಟೇಶ್ ಬಿನ್ ಚಿನ್ನಬ್ಭಣ್ಣ, ೪೦ ವರ್ಷ, ಡೇವಿಡ್ ರಸ್ತೆ, ಬಂಗಾರಪೇಟೆ ರವರು ಮರವಳ್ಳಿ ಗ್ರಾಮದ ಸಮೀಪವಿರುವ ತಮ್ಮ ಜಮೀನನ್ನು ನೋಡಿಕೊಂಡು ಬರಲು ಹೋಗಿದ್ದಾಗ, ಆರೋಪಿಗಳಾದ ನಾಗೇಶ್, ದೇಶಿಹಳ್ಳಿ ಗ್ರಾಮ ಮತ್ತು ಆ2 ರವಿ, ದೇಶಿಹಳ್ಳಿ ರವರುಗಳು ಅವರ ಜಮೀನಿನಲ್ಲಿ ಮದ್ಯಪಾನಮಾಡಿಕೊಂಡು ಊಟ ತಿನ್ನುತ್ತಿದ್ದು, ಆ ಬಗ್ಗೆ ಕೇಳಿದಾಗ ಆರೋಪಿಗಳು ದೂರುದಾರರಿಗೆ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ, ಇತ್ಯಾದಿ

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲಗೆ ಸಂಬಂಧಿಸಿದಂತೆ ೨ ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ರಾಮಯ್ಯ, ೫೫ ವರ್ಷ, ಬೀರನಕುಪ್ಪ ಗ್ರಾಮ ಹಾಲಿ ವಾಸ ಬೆಂಗಳೂರು ರವರು ತಮ್ಮ ವಾಸದ ಮನೆಯನ್ನು ಕಾಂತಮ್ಮ, ಬೀರನಕುಪ್ಪ ಗ್ರಾಮ ರವರಿಗೆ ನೀಡಿದ್ದು ದಿನಾಂಕ 01.02.2016 ರಂದು ಬೆಳಗ್ಗೆ 10.00 ಗಂಟೆಗೆ ದೂರುದಾರರು ಬೆಂಗಳೂರಿನಿಂದ ಬೀರನಕುಪ್ಪ ಗ್ರಾಮಕ್ಕೆ ಬಂದು ತಾವು ಬೆಂಗಳೂರಿನಿಂದ ಸಂಸಾರ ಸಮೇತ ಗ್ರಾಮಕ್ಕೆ ವಾಪಸ್ಸು ಬರುವುದಾಗಿ ಮನೆಯನ್ನು ಖಾಲಿ ಮಾಡುವಂತೆ ಕಾಂತಮ್ಮ ರವರಿಗೆ ತಿಳಿಸಿದಾಗ ಆರೋಪಿಗಳಾದ ಚಿನ್ನಪ್ಪಯ್ಯ, ಕಾಂತಮ್ಮ, ಲೋಕೇಶ್ ರವರುಗಳು ಮನೆ ಖಾಲೆ ಮಾಡುವುದಿಲ್ಲವೆಂದು ಹೇಳಿ ದೊಣ್ಣೆಗಳಿಂದ ತೆಗೆದುಕೊಂಡು ದೂರುದಾರರ ಎರಡೂ ಕೈಗಳ ಮೇಲೆ ಹೊಡೆದು ರಕ್ತಗಾಯ ಪಡೆಸಿರುತ್ತಾರೆ.

ದಿನಾಂಕ 30.01.2016 ರಂದು ಸಂಜೆ 6.00 ಗಂಟೆಯ ಸಮಯದಲ್ಲಿ ದೂರುದಾರರಾದ ಶ್ರೀ, ಮಣಿ ಬಿನ್ ಲಕ್ಷ್ಮಣಪ್ಪ, ೨೬ ವರ್ಷ, ಕರಡಗೂರು ಗ್ರಾಮ ರವರು ಕೆಲಸ ಮುಗಿಸಿಕೊಂಡು ಗ್ರಾಮದ ಗಂಗಮ್ಮ ದೇವಸ್ಥಾನದ ಬಳಿ ಬರುತ್ತಿದ್ದಾಗ ಆರೋಪಿಯಾದ ಆನಂದ್ ಎಂಬಾತನು ದೂರುದಾರರ ಬಳಿ ಬಂದು ಖರ್ಚಿಗೆ ಹಣ ಸಾಲ ಕೂಡು ಎಂದು ಕೇಳಿದ್ದು ದೂರುದಾರರು ಇಲ್ಲವೆಂದು ಹೇಳಿದ್ದಕ್ಕೆ ದೂರುದಾರರಿಗೆ ಕೆಟ್ಟ ಮಾತುಗಳಿಂದ ಬೈದು ಒಂದು ದೊಣ್ಣೆಯಿಂದ ತಲೆಯ ಮೇಲೆ ಹೊಡೆದು ರಕ್ತ ಗಾಯ ಪಡೆಸಿರುತ್ತಾನೆ.

 -ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : ಇಲ್ಲ

ಭದ್ರತಾ ಕಾಯ್ದೆ : 05

ಈ ಕೆಳಕಂಡ ಪೊಲೀಸ್ ಠಾಣೆಗಳಲ್ಲಿ ಕೆಳಕಂಡ ಆಸಾಮಿಗಳ ವಿರುದ್ಧ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಉರಿಗಾಂ ಪೊಲೀಸ್ ಠಾಣೆ -೦೨

೧. ಇಲೋಂಗೋವನ್ ಬಿನ್ ತಂಗರಾಜ್, ಕೆನಡೀಸ್ ೪ನೇ ಲೇನ್, ಉರಿಗಾಂ

೨. ಹೆಜ್ಜೇನ್ ಬಿನ್ ಸುಬ್ರಮಣಿ, ೩೨ ವರ್ಷ, ಭಾರತಿಪುರಂ, ಆಂಡ್ರಸನ್‌ಪೇಟೆ

ಬಂಗಾರಪೇಟೆ ಪೊಲೀಸ್ ಠಾಣೆ-೦೩

೧. ಅನಂದ್ ಬಿನ್ ಲೇಟ್ ಮುನಿವೆಂಕಟಪ್ಪ, ೪೫ ವರ್ಷ, ಹುಲಿಬೆಲೆ ಗ್ರಾಮ.

೨. ಪದ್ಮನಾಭ ಬಿನ್ ಕೆಂಪ್ಪಣ, ೫೦ ವರ್ಷ, ಹುಲಿಬೆಲೆ ಗ್ರಾಮ

೩. ನಾಗೇಶ್, ೪೯ ವರ್ಷ, ಹುಲಿಬೆಲೆ ಗ್ರಾಮ

-ಇತರೆ ಪ್ರಕರಣಗಳು : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s